»   » ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾದ 'ಕಾನ್ಸ್ ಟೇಬಲ್ ಸರೋಜ'

ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾದ 'ಕಾನ್ಸ್ ಟೇಬಲ್ ಸರೋಜ'

Posted By:
Subscribe to Filmibeat Kannada
ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾದ 'ಕಾನ್ಸ್ ಟೇಬಲ್ ಸರೋಜ' | Filmibeat Kannada

ಟಗರು ಸಿನಿಮಾ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ನಟಿ ತ್ರಿವೇಣಿ. ಸಾಮಾನ್ಯವಾಗಿ ಇವರನ್ನ ತ್ರಿವೇಣಿ ಅಂತ ಪರಿಚಯ ಮಾಡಿಸಿದರೆ ಗೊತ್ತಾಗುವುದಿಲ್ಲ. ಕಾನ್ಸ್ ಟೇಬಲ್ ಸರೋಜ ಅಂದರೆ ಎಲ್ಲರಿಗೂ ತಿಳಿಯುತ್ತೆ. ಹೌದು ಟಗರು ಚಿತ್ರದ ಕಾನ್ಸ್ ಟೇಬಲ್ ಸರೋಜ ಈಗ ನಾಯಕಿಯಾಗಿ ಚಿತ್ರರಂಗದಲ್ಲಿ ಬಡ್ತಿ ಪಡೆದಿದ್ದಾರೆ. ತ್ರಿವೇಣಿ ಈಗಾಗಲೇ ಕನ್ನಡದ ಬಹುತೇಕ ಸಿನಿಮಾದಲ್ಲಿ ಅಭಿನಯಿಸಿದ್ದರೂ ಟಗರು ಚಿತ್ರ ತ್ರಿವೇಣಿ ಅವರಿಗೆ ಭಾರಿ ಪ್ರಖ್ಯಾತಿಯನ್ನು ತಂದುಕೊಟ್ಟಿತ್ತು.

ಸಿನಿಮಾರಂಗದಲ್ಲಿ ಉತ್ತಮ ಪಾತ್ರವನ್ನ ಹಾಗೂ ನಾಯಕಿಯ ಪಾತ್ರವನ್ನ ನಿರೀಕ್ಷೆ ಮಾಡುತ್ತಿದ್ದ ತ್ರಿವೇಣಿ ಅವರಿಗೆ ನಾಯಕಿ ಆಗಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಚಿತ್ರದಲ್ಲಿ ಹೀರೋಯಿನ್ ಆಗಿ ಅಭಿನಯಿಸುತ್ತಿದ್ದಾರೆ. ಟೈಸನ್ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಡೈರೆಕ್ಟರ್ ರಾಮ್ ನಾರಾಯಣ್ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ.

Triveni acting as heroine in Chiranjeevi Sarja's Rajamaranda film

'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ?

ಶ್ರೀಮಾದೇಶ್ವರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿವಕುಮಾರ್.ಎನ್ ಈ ಚಿತ್ರ ನಿರ್ಮಿಸುತ್ತಿದ್ದು ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ತ್ರಿವೇಣಿ ಕೂಡ ಒರ್ವ ನಾಯಕಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ತ್ರಿವೇಣಿ.

Triveni acting as heroine in Chiranjeevi Sarja's Rajamaranda film

ಟಗರು ಸಿನಿಮಾದ ಕೆಲವೇ ಸೀನ್ ಗಳಲ್ಲಿ ತ್ರಿವೇಣಿ ಅವರನ್ನ ನೋಡಿ ಅಭಿಮಾನಿಗಳು ಇಷ್ಟ ಪಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಮ್ಮ ಸರೋಜ ನಮ್ಮ ಹೆಮ್ಮೆ ಎಂಬ ಹೆಸರಿನಲ್ಲಿ ತ್ರಿವೇಣಿ ಫೋಟೋಗಳನ್ನ ಹಾಕಿ ಪ್ರಚಾರ ಮಾಡಿದ್ದರು ಅಭಿಮಾನಿಗಳು. ಸರೋಜರನ್ನ ಪುಟ್ಟ ಪಾತ್ರದಲ್ಲಿ ನೋಡಿದ್ದ ಅಭಿಮಾನಿಗಳಿಗೆ ನಾಯಕಿಯಾಗಿ ನೋಡುವ ಅವಕಾಶ ಸಿಕ್ಕಿದೆ.

English summary
Kannada actress Triveni is acting as heroine in Chiranjeevi Sarja's Rajamaranda film, Triveni acting in Tagaru movie as a Constable Saroja character.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada