»   » ಮೋದಿಗೂ ಕಾಡಿದ ಬಾಹುಬಲಿ' ಮಿಲಿಯನ್ ಡಾಲರ್ ಪ್ರಶ್ನೆ !

ಮೋದಿಗೂ ಕಾಡಿದ ಬಾಹುಬಲಿ' ಮಿಲಿಯನ್ ಡಾಲರ್ ಪ್ರಶ್ನೆ !

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಹುಬಲಿ ಚಿತ್ರ ನೋಡಿದವರು ಕ್ಲೈಮ್ಯಾಕ್ಸ್ ನಂತರ ತಲೆಕೆಡಿಸಿಕೊಳ್ಳದೆ ಸುಮ್ಮನಿರಲ್ಲ. ನಾಯಕ ಶಿವುಡುಗೆ ಮಾಹಾಷ್ಮತಿ ಸಾಮ್ರಾಜ್ಯದ ಕಥೆ ಹೇಳುವ ಕಟ್ಟಪ್ಪ ಕೊನೆಗೆ ನೀಡುವ ಟ್ವಿಸ್ಟ್ ಎಲ್ಲರನ್ನು ಚಕಿತಗೊಳಿಸುತ್ತದೆ. ಜೊತೆಗೆ ಎಲ್ಲರ ಮನದಲ್ಲೂ ಕಟ್ಟಕಡೆಗೆ ಉಳಿಯುವ ಪ್ರಶ್ನೆ "ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಏಕೆ?".

ಈಗ ಇದೇ ಪ್ರಶ್ನೆ ಚಿತ್ರ ಬಿಡುಗಡೆಯಾದಾಗಿನಿಂದಲೂ ಸಿನಿರಸಿಕರ ತಲೆ ಕೊರೆಯುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಾಹುಬಲಿ ದಿ ಬಿಗನಿಂಗ್ ಚಿತ್ರದ ಅಂತಿಮ ದೃಶ್ಯ ಪ್ರೇಕ್ಷಕರನ್ನು ಕುತೂಹಲದ ಹಂತಕ್ಕೆ ಮುಟ್ಟಿಸುತ್ತದೆ. ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಏಕೆ ಎಂಬುದನ್ನು ತಿಳಿಯಲು 2016ರ ತನಕ ಕಾಯಲೇಬೇಕಿದೆ.

ಈ ನಡುವೆ ಈ ಮಿಲಿಯನ್ ಡಾಲರ್ ಪ್ರಶ್ನೆಯನ್ನು ಪ್ರಧಾನಿ ಮೋದಿ ಅವರು ಎದುರಿಸಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಪ್ರಭಾಸ್ ಅವರನ್ನು ಈ ಪ್ರಶ್ನೆ ಕೇಳಿದಂತೆ ಊಹಿಸಿಕೊಂಡು ಮೀಮ್ಸ್ ಗಳನ್ನು ರಚಿಸಿ ಹಂ‌ಚಲಾಗುತ್ತಿದೆ. ಇಂಥ ಕೆಲವು ಹಾಸ್ಯ ಮಯ ಸಂದೇಶಗಳ ರಾಶಿ ಇಲ್ಲಿದೆ ಓದಿ ಅನಂದಿಸಿ...

ಕಟ್ಟಪ್ಪ ನೀನು ಬಾಹುಬಲಿಯನ್ನು ಏಕೆ ಕೊಂದ್ಯಪ್ಪ?

ಕಟ್ಟಪ್ಪ ನೀನು ಬಾಹುಬಲಿಯನ್ನು ಏಕೆ ಕೊಂದ್ಯಪ್ಪ? ಎಂಬ ಪ್ರಶ್ನೆಯನ್ನು ಬಳಸಿಕೊಂಡು ವಿವಿಧ ರೀತಿಯಲ್ಲಿ ಹಾಸ್ಯ ಚಟಾಕಿಯನ್ನು ಹುಟ್ಟುಹಾಕಲಾಗಿದೆ.

ಮೋದಿ ಭೇಟಿ ಮಾಡಿದ ಪ್ರಭಾಸ್

ಮೋದಿ ಅವರನ್ನು ಪ್ರಭಾಸ್ ಹಾಗೂ ಅವರ ತಂಡ ಭೇಟಿ ಮಾಡಿದ ಚಿತ್ರಕ್ಕೆ ಕಾಮೆಂಟ್ ಹಾಕಿ, ಮೋದಿಜೀ ದಯವಿಟ್ಟು ಕಟ್ಟಪ್ಪನನ್ನು ಭೇಟಿ ಮಾಡಿ ಆ ಪ್ರಶ್ನೆ ಕೇಳಿ ಬಿಡಿ ಎಂದಿದ್ದಾರೆ.

ವಾಟ್ಸಪ್ ಗ್ರೂಪಿನಿಂದ ಕಟ್ಟಪ್ಪ ಔಟ್

ಬಾಹುಬಲಿಯ ವಾಟ್ಸಪ್ ಗ್ರೂಪಿನಿಂದ ಕಟ್ಟಪ್ಪನನ್ನು ಹೊರ ಹಾಕಿದ್ದೇ ಬಾಹುಬಲಿಯನ್ನು ಕೊಲ್ಲಲು ಕಾರಣ.

ಫೇಸ್ ಬುಕ್ ಕ್ಯಾಂಡ್ರಿ ಕ್ರಷ್ ವಿರೋಧಿಗಳ ಉತ್ತರ

ಫೇಸ್ ಬುಕ್ ಕ್ಯಾಂಡ್ರಿ ಕ್ರಷ್ ವಿರೋಧಿ ಬಣದಿಂದ ಸೊಗಸಾದ ಉತ್ತರ ಇಲ್ಲಿದೆ

ಕುತೂಹಲದ ಪರಮಾವಧಿ ಎಂದರೆ ಇದೆ

ಕುತೂಹಲದ ಪರಮಾವಧಿ ಎಂದರೆ ಇದೆ, ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಅವರ ಪುತ್ರ ಸಿಬಿಯನ್ನು ಈ ಪ್ರಶ್ನೆ ಕೇಳಿದ ಸಾರ್ವಜನಿಕರು.

ಮೆಹರ್ ರಮೇಶ್ ನಿರ್ದೇಶಕನಾಗಿದ್ದೇ ಕಾರಣ

ಮೆಹರ್ ರಮೇಶ್ ನಿರ್ದೇಶಕನಾಗಿದ್ದೇ ಕಾರಣ, ಮೆಹರ್ ರಮೇಶ್ ನಿರ್ದೇಶಕನಾಗಲಿ ಎಂದು ಬಾಹುಬಲಿ ಹೇಳಿದ್ದೇ ನಿಜವಾದ ಕಾರಣ.

ಪ್ರೇಕ್ಷಕರಿಂದ ಬಗೆ ಬಗೆ ಉತ್ತರಗಳು ಬಂದಿವೆ

ಕಟ್ಟಪ್ಪ ಕೊಂದಿದ್ದೇಕೆ ಎಂಬುದಕ್ಕೆ ಪ್ರೇಕ್ಷಕರಿಂದ ಬಗೆ ಬಗೆ ಉತ್ತರಗಳು ಬಂದಿವೆ, ಬಾಹುಬಲಿಯನ್ನು ತಂಗಬಲಿ (ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಒಂದು ಪಾತ್ರ) ಎಂದು ಕಟ್ಟಪ್ಪ ತಪ್ಪು ತಿಳಿದಿರಬೇಕು.

ಮಿರ್ಚಿ ಚಿತ್ರ ನೋಡಿದ್ರೆ ಕಾರಣ ಗೊತ್ತಾಗುತ್ತೆ

ಮಿರ್ಚಿ(ಕನ್ನಡದಲ್ಲಿ ಮಾಣಿಕ್ಯ) ಚಿತ್ರ ನೋಡಿದ್ರೆ ಕಾರಣ ಗೊತ್ತಾಗುತ್ತೆ. ಪ್ರಭಾಸ್ ಅವರು ಸತ್ಯರಾಜ್ ಪತ್ನಿ ಕೊಂದಿದ್ರು ಅದಕ್ಕೆ ಈ ಚಿತ್ರದಲ್ಲಿ ಸೇಡು ತೀರಿಸಿಕೊಂಡಿದ್ದಾರೆ ಅಷ್ಟೆ.

ಫ್ಲಿಪ್ ಕಾರ್ಟ್ ಸಂಸ್ಥೆಗೂ ಕಾಡಿದ ಪ್ರಶ್ನೆ

ಫ್ಲಿಪ್ ಕಾರ್ಟ್ ಸಂಸ್ಥೆಗೂ ಕಾಡಿದ ಪ್ರಶ್ನೆ ಇದಾಗಿದೆ ಎಂದು ಫನ್ನಿ ಮೀಮ್ಸ್ ರಚಿಸಿದ ಫ್ಯಾನ್ಸ್.

ಹಿಂದಿ ಚಿತ್ರರಂಗದ ಫ್ಯಾನ್ಸಿಗೂ ತಟ್ಟಿದ ಪ್ರಶ್ನೆ

ಹಿಂದಿ ಚಿತ್ರರಂಗದ ಫ್ಯಾನ್ಸಿಗೂ ತಟ್ಟಿದ ಪ್ರಶ್ನೆ ಕೊನೆಗೆ ಅರವಿಂದ್ ಕೇಜ್ರಿವಾಲ್ ಗೂ ತಲುಪಿದೆ.

ಫ್ಲಿಪ್ ಕಾರ್ಟ್ ಸಂಸ್ಥೆಗೆ ಮರಾಠಿಯಲ್ಲೂ ಪ್ರಶ್ನೆ

ಫ್ಲಿಪ್ ಕಾರ್ಟ್ ಸಂಸ್ಥೆಗೆ ಮರಾಠಿ ಭಾಷೆಯಲ್ಲೂ ಪ್ರಶ್ನೆ ಎಸೆಯಲಾಗಿದೆ.

English summary
Troll: PM Modi wants to know why Kattappa killed Baahubali. The biggest question Rajamouli left unanswered in Baahubali is 'Why Katappa killed Baahubali?' It is now creating a rage on social networking sites.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada