For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್: ನಡುರಸ್ತೆಯಲ್ಲಿ ಕನ್ನಡ ನಟಿಯ ಹೊಡೆದಾಟ

  |

  Recommended Video

  ಬೀದಿಗೆ ಬಂತು ಕನ್ನಡ ನಟಿಯ ರಂಪಾಟ | Shobitha | FILMIBEAT KANNADA

  ತುಳು ಮತ್ತು ಕನ್ನಡ ಎರಡು ಭಾಷೆಯಲ್ಲಿ ಅಭಿನಯಿಸುತ್ತಿರುವ ನಟಿ ಶೋಭಿತಾ ನಡು ರಸ್ತೆಯಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ಸೈಡ್ ಕೊಡುವ ವಿಚಾರಕ್ಕೆ ಪ್ರಾರಂಭವಾದ ಜಗಳ ತಾರಕ್ಕೇರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.

  ಶೋಭಿತಾ ಇದ್ದ ಕಾರು ಮತ್ತು ಎದುರಿನಿಂದ ಬಂದ ಕಾರಿನವರ ನಡುವೆ ಹೊಡೆದಾಟ ನಡೆದಿದೆ. ಕಾರು ಸೈಡ್ ಕೊಟ್ಟಿಲ್ಲ ಎಂದು ವಿಚಾರದಿಂದ ಪ್ರಾರಂಭವಾದ ವಾದವಿವಾದ ನಂತರ ಜೋರಾಗಿದೆ. ಇಬ್ಬರು ಕಾರಿನವರು ಕೆಳಗಿದು ಜೋರು ಜೋರಾಗಿ ಜಗಳವಾಡಲು ಪ್ರಾರಂಭಿಸಿದ್ದಾರೆ. ಜಗಳ ಮಿತಿ ಮೀರುತ್ತಿದ್ದಂತೆ ಹೊಡೆದಾಟಕ್ಕೆ ಇಳಿದ್ದಾರೆ.

  ನಾಯಕ ನಟನ ಕಿರಿಕ್ : ನಟಿ ಮೇಲೆ ಹಲ್ಲೆ ನಡೆಸಿದ ನಟನಾಯಕ ನಟನ ಕಿರಿಕ್ : ನಟಿ ಮೇಲೆ ಹಲ್ಲೆ ನಡೆಸಿದ ನಟ

  ನಂತರ ಶೋಭಿತಾ ಕಾರಿನ ಎದುರು ಕಾರಿನವರು ಶೋಭಿತಾ ಮಲೆ ಹಲ್ಲೆ ಮಾಡಿದ್ದಾರೆ. ಶೋಭಿತಾ ಜೋರಾಗಿ ಕಿರುಚಾಡುತ್ತಿದ್ದಂತೆ ಎದುರು ಕಾರಿನವರು ಶೋಭಿತಾರನ್ನು ಮಧ್ಯರಸ್ತೆಯಲ್ಲಿಯೆ ಎಳೆದು ಜೋರಾಗಿ ಕಾರಿನ ಬಳಿ ತಳ್ಳಿದ್ದಾರೆ. ನಂತರ ಇಬ್ಬರು ಯಾರಿಗೇನು ಕಮ್ಮಿ ಇಲ್ಲ ಎನ್ನುವ ಹಾಗೆ ಸರಿಯಾಗೆ ಹೊಡೆದಾಡಿಕೊಂಡಿದ್ದಾರೆ.

  ಅಲ್ಲಿದ್ದ ಗ್ರಾಮಸ್ಥರು ಇಬ್ಬರ ಬೀದಿ ಜಗಳ ಬಿಡಿಸಲು ಪ್ರಯತ್ನ ಪಟ್ಟರು ಇಬ್ಬರ ನಡುವಿನ ಕಿತ್ತಾಟ ನಿಲ್ಲಿಸಲು ಸಾಧ್ಯವಾಗಿಲ್ಲ. ನಂತರ ಅವರೇ ತಣ್ಣಗಾಗಿ ಎಲ್ಲಿಂದ ಹೊರಟು ಹೋಗುತ್ತಾರೆ. ಎದುರು ಕಾರಿನವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

  ನಟಿ ಶೋಭಿತಾ ತುಳು ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದಾರೆ. ತುಳು ಸಿನಿಮಾಗಳ ಜೊತೆಗೆ ಕನ್ನಡ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. 'ಸಿಡಿದೆದ್ದಗಂಡು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕು ಕಾಲಿಟ್ಟಿದ್ದಾರೆ. ಶ್ರೀ ವಿಷ್ಣು ಅಭಿನಯದ ಚಿತ್ರದಲ್ಲಿ ಶೋಭಿತಾ ನಾಯಕಿಯಾಗಿ ಮಿಂಚಿದ್ದಾರೆ. 'ಸಿಡಿದೆದ್ದಗಂಡು' ವಿಠಲ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ.

  English summary
  Tulu Actress Shobitha fight on road video viral on social media.
  Wednesday, February 12, 2020, 10:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X