»   » 400 ದಿನ ಪೂರೈಸಿ ದಾಖಲೆ ನಿರ್ಮಿಸಿದ ಕರಾವಳಿಯ ಹೆಮ್ಮೆಯ 'ಚಾಲಿಪೋಲಿಲು'

400 ದಿನ ಪೂರೈಸಿ ದಾಖಲೆ ನಿರ್ಮಿಸಿದ ಕರಾವಳಿಯ ಹೆಮ್ಮೆಯ 'ಚಾಲಿಪೋಲಿಲು'

Posted By:
Subscribe to Filmibeat Kannada

ಇತ್ತೀಚೆಗೆ ತುಳು ಚಿತ್ರರಂಗವೂ ಕನ್ನಡ ಚಿತ್ರರಂಗದಂತೆ ರೇಸ್ ನಲ್ಲಿದೆ. ಇದಕ್ಕೆಲ್ಲಾ ಉತ್ತಮ ನಿದರ್ಶನವೆಂದರೆ, ಮೊನ್ನೆ ಕೆಲವೊಂದು ಚಿತ್ರಗಳು ಶತದಿನೋತ್ಸವಗಳನ್ನು ಆಚರಿಸಿಕೊಂಡಿದ್ದು,

ಆದರೆ ಇದೀಗ ನೂರು, ಇನ್ನೂರು ದಿನಗಳಲ್ಲ ಬದಲಾಗಿ 400 ದಿನಗಳನ್ನು ದಾಟಿ 500ನೇ ದಿನಗಳತ್ತ ದಾಪುಗಾಲಿಕ್ಕುತ್ತಿರುವ ಚಿತ್ರಗಳ ಬಗ್ಗೆ ನಾವೀಗ ಮಾತನಾಡುತ್ತಿದ್ದೇವೆ.

Tulu movie 'Chaali Polilu' Celebrate the 400 Days.

ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್ ಪಾಂಡೇಶ್ವರ ನಿರ್ಮಾಣ ಮಾಡಿ ಯುವ ನಿರ್ದೇಶಕ ವೀರೆಂದ್ರ ಶೆಟ್ಟಿ ಕಾವೂರು ಆಕ್ಷನ್-ಕಟ್ ಹೇಳಿರುವ 'ಚಾಲಿಪೋಲಿಲು' ಚಿತ್ರ ನಾಳೆ (ಡಿಸೆಂಬರ್ 4) 400ನೇ ದಿನದ ಪ್ರದರ್ಶನ ಕಂಡು ಅದ್ಭುತ ದಾಖಲೆಯನ್ನು ಬರೆದಿದೆ.[
ಒಂದೇ ವಾರಕ್ಕೆ ಕರಗಿ ನೀರಾಯಿತೇ?, 'ಐಸ್ ಕ್ರೀಮ್'..!]

ಇದೀಗ ಪಾಂಡೇಶ್ವರ ಪಿವಿಆರ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ದಿನಂಪ್ರತಿ ಪ್ರದರ್ಶನ ಕಾಣುತ್ತಿರುವ 'ಚಾಲಿಪೋಲಿಲು' ನಾಳೆಗೆ 400 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ದೇಶವ್ಯಾಪಿಯಾಗಿರುವ ಪಿವಿಆರ್ ನ ಯಾವುದೇ ಚಿತ್ರಮಂದಿರಗಳಲ್ಲಿ ಪ್ರಾದೇಶಿಕ ಭಾಷೆಯ ಸಿನೆಮಾವೊಂದು ಈ ರೀತಿಯ ಪ್ರದರ್ಶನ ಕಂಡಿಲ್ಲವಂತೆ, ಇದು ತುಳುನಾಡಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ.

Tulu movie 'Chaali Polilu' Celebrate the 400 Days.

5 ಚಿತ್ರಮಂದಿರಗಳಲ್ಲಿ 75 ದಿನ ಮತ್ತು 3 ಚಿತ್ರಮಂದಿರಗಳಲ್ಲಿ 100 ದಿನಗಳ ಕಾಲ ಪ್ರದರ್ಶನ ಕಂಡಿರುವ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಗೌರವ ಹಾಗು ತುಳುವರಿಗೆ ಹೆಮ್ಮೆಯ ಕಿರೀಟ ತೊಡಿಸಿದೆ. ಒಟ್ನಲ್ಲಿ ಉತ್ತಮ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲವಿದೆ ಎಂಬುದಕ್ಕೆ ಈ ಸಿನಿಮಾವೇ ಸಾಕ್ಷಿ.[ಚಾಲಿಪೋಲಿಲು 200; ಸಚಿವ ಖಾದರ್ ಜೊತೆ ಸಂಭ್ರಮ]

ತುಳುನಾಡಿನ ನಾಡಿಮಿಡಿತಕ್ಕೆ ಹೊಂದಿಕೊಂಡು ತುಳುವರ ಹೃದಯ ಶ್ರೀಮಂತಿಕೆಯನ್ನು ಎತ್ತಿ ತೋರಿಸಿರುವ ಕಾಪಿಕಾಡ್ ಹಾಗೂ ಅರವಿಂದ್ ಬೋಳಾರ್, ನವೀನ್ ಡಿ.ಪಡೀಲ್ ಮುಂತಾದವರ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ 'ಚಾಲಿಪೋಲಿಲು' ಸಿನಿಮಾ ತುಳುನಾಡಿನ ಪ್ರಾಕೃತಿಕ ಶ್ರೀಮಂತಿಕೆಯನ್ನು ಪ್ರೇಕ್ಷಕರ ಮುಂದಿಟ್ಟಿದೆ.

Tulu movie 'Chaali Polilu' Celebrate the 400 Days.

ಅಂದಹಾಗೆ 'ಚಾಲಿಪೋಲಿಲು' ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದರಿಂದ ಇನ್ನೂ ಹಲವು ದಿನಗಳ ಕಾಲ ಚಿತ್ರಮಂದಿರದಲ್ಲಿ ಮುಂದುವರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

English summary
Tulu movie 'Chaali Polilu' Celebrate the 400 Days. Tulu Actor Devadas Kapikad, Actor Naveen D Padil, Actor Bhojaraj Vamanjoor, Actress Divyashree in the lead roles. The movie is directed by Veerendra Shetty Kavoor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada