»   » ಚಾಲಿಪೋಲಿಲು: ಸಾವಿರ ಪ್ರದರ್ಶನ, ಕೋಟಿ ಸಂಗ್ರಹ!

ಚಾಲಿಪೋಲಿಲು: ಸಾವಿರ ಪ್ರದರ್ಶನ, ಕೋಟಿ ಸಂಗ್ರಹ!

Posted By:
Subscribe to Filmibeat Kannada

ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್ ಕೆ. ಪಾಂಡೇಶ್ವರ ಅವರು ನಿರ್ಮಿಸಿರುವ ಚಾಲಿಪೋಲಿಲು ಸಿನಿಮಾ 1000 ಕ್ಕೂ ಪ್ರದರ್ಶನ ನೀಡಿ, ಮೂರು ವಾರದಲ್ಲಿ 1. 12 ಕೋ. ರೂ. ಸಂಗ್ರಹ ಮಾಡುವ ಮೂಲಕ ಮತ್ತೊಂದು ಮೈಲುಗಲ್ಲು ನೆಟ್ಟಿದೆ. ಆ ಮೂಲಕ ತುಳು ಸಿನಿಮಾದಿಂದ ಭರ್ಜರಿ ಲಾಭ ಮಾಡಲು ಸಾಧ್ಯ ಎಂಬುದನ್ನೂ ಚಾಲಿಪೋಲಿಲು ಸಿನಿಮಾ ತೋರಿಸಿಕೊಟ್ಟಿದೆ.

ಈವರೆಗೆ ತುಳು ಸಿನಿಮಾ ಎಂದರೆ ಅದು ನಷ್ಟದ ವ್ಯವಹಾರ ಎಂದೇ ಹೇಳಲಾಗಿತ್ತು. ಕೆಲವು ಸಿನಿಮಾಗಳು ಮಾತ್ರವೇ ಒಂದಷ್ಟು ಲಾಭ ಮಾಡಿಕೊಂಡದ್ದು ಬಿಟ್ಟರೆ ಮತ್ತೆಲ್ಲದರದ್ದೂ ನಷ್ಟದ ಖಾತೆಯೇ. ಆದರೆ ಚಾಲಿಪೋಲಿಲುಗೆ ಸಿಕ್ಕಿರುವಷ್ಟು ಲಾಭ ಇದುವರೆಗೆ ಯಾವ ಸಿನಿಮಾಕ್ಕೂ ಸಿಕ್ಕಿಲ್ಲ. ಕೇವಲ ಮೂರು ವಾರದಲ್ಲಿ ಕೋಟಿ ರೂ. ಸಂಗ್ರಹಿಸಿರುವ ಚಾಲಿಪೋಲಿಲು ನಿಜಕ್ಕೂ ತುಳು ಸಿನಿಮಾ ರಂಗದಲ್ಲಿ ಒಂದು ಹೊಸ ದಾಖಲೆ. [ಚಾಲಿಪೋಲಿಲು ಚಿತ್ರ ವಿಮರ್ಶೆ]


ಈ ಸಿನಿಮಾದಲ್ಲಿರುವ ಗುಣಮಟ್ಟ, ಗಟ್ಟಿ ತಿರುಳು, ಗುಣಮಟ್ಟದ ಹಾಸ್ಯ, ಅತ್ಯುತ್ತಮ ಕೆಮರಾ....ಹೀಗೆ ಹಲವಾರು ಉತ್ತಮ ಅಂಶಗಳು ಸಿನಿಮಾವನ್ನು ಯಶಸ್ಸಿನ ದಾರಿಯಲ್ಲಿ ಕೊಂಡೊಯ್ಯುತ್ತಿದೆ. ನಿರ್ಮಾಪಕರಿಗೆ ಈಗಲೇ ಲಾಭ ಆರಂಭವಾಗಿದ್ದು, ಈ ಸಿನಿಮಾ ಶತದಿನಗಳ ದಾಖಲೆ ಬರೆಯುವುದು ಖಚಿತ ಎಂಬುದರ ಲಕ್ಷಣ ಈಗಾಗಲೇ ಕಂಡು ಬರುತ್ತಿದೆ. ಆಗ ಲಾಭದ ಪ್ರಮಾಣ ಯಾವ ರೀತಿ ಇರಲಿದೆ ಎಂಬುದು ಸದ್ಯಕ್ಕೆ ಊಹೆಗೆ ನಿಲುಕದ ವಿಷಯ.

ಬೆಂಗಳೂರಿನಲ್ಲಿ ಚಾಲಿಪೋಲಿಲು ಸಿನಿಮಾ ಪಿವಿಆರ್ ನಲ್ಲಿ ಮೂರನೇ ವಾರಕ್ಕೆ ಕಾಲಿರಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾವು ಮುಂಬಯಿ, ದೆಹಲಿ ಸೇರಿದಂತೆ ದೇಶದಲ್ಲಿ ತುಳುವರಿರುವ ಪ್ರಮುಖ ನಗರಗಳಲ್ಲಿ ಪ್ರದರ್ಶನ ಕಾಣಲಿದೆ.

ಬಳಿಕ ವಿದೇಶಕ್ಕೂ ಹಾರಲಿದೆ. ಅಂಥ ಸಂದರ್ಭದಲ್ಲಿ ಚಾಲಿಪೋಲಿಲು ತಂದು ಕೊಡಬಹುದಾದ ಆದಾಯದ ಪ್ರಮಾಣವೂ ಸಾಕಷ್ಟು ಏರಲಿದೆ ಎಂಬುದಕ್ಕೆ ಈಗಿನ ಓಟವೇ ಸಾಕ್ಷಿಯಾಗಿದೆ.

Chaali Polilu

ಜಯಕಿರಣ ಲಾಂಛನದಡಿಯ ಮೊದಲ ಸಿನಿಮಾ ಆಗಿರುವ ಇದು, ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರಿಗೂ ಇದು ಚೊಚ್ಚಲ ಅನುಭವ. ಹಾಗಿದ್ದರೂ ಅನುಭವಸ್ಥರೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿರುವ ಈ ಸಿನಿಮಾ ತುಳು ಚಿತ್ರರಂಗಕ್ಕೆ ಸಂದಿರುವ ಅಮೂಲ್ಯ ರತ್ನ ಎಂದು ಹೇಳಲೇಬೇಕಾಗಿದೆ.

ಈ ಸಿನಿಮಾದ ಮತ್ತೊಂದು ವಿಶೇಷತೆ ಏನೆಂದರೆ ಸಿನಿಮಾವನ್ನು ನೋಡಿದವರೇ ಮಗದೊಮ್ಮೆ ವೀಕ್ಷಿಸುತ್ತಿದ್ದಾರೆ, ತುಳುವರು ಅಲ್ಲದೆ ಬೇರೆ ಭಾಷಿಗರು ಕೂಡಾ ಸಿನಿಮಾವನ್ನು ವೀಕ್ಷಿಸುತ್ತಿರುವುದು ಚಿತ್ರದ ಹೆಗ್ಗಳಿಕೆಯಾಗಿದೆ. (ಫಿಲ್ಮಿಬೀಟ್ ಕನ್ನಡ)

English summary
Tulu movie Chaali Polilu completes 1000 shows and collects Rs.1.12 cr in three weeks. The movie produced by Prakash Pandeshwar under the banner Jayakirana Films. Veerendra Shetty Kavoor is the story writer, lyricist and director.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada