»   » ಐದು ಕೇಂದ್ರಗಳಲ್ಲಿ 'ಚಾಲಿಪೋಲಿಲು' ಹಾಫ್ ಸೆಂಚುರಿ

ಐದು ಕೇಂದ್ರಗಳಲ್ಲಿ 'ಚಾಲಿಪೋಲಿಲು' ಹಾಫ್ ಸೆಂಚುರಿ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ತುಳು ಸಿನಿಮಾ ರಂಗದ 43 ವರ್ಷಗಳ ಇತಿಹಾಸದಲ್ಲಿ 52ನೇ ಸಿನಿಮಾ ಆಗಿ ಹೊರಬಂದಿರುವ ಜಯಕಿರಣ ಫಿಲಂಸ್ ಲಾಂಛನದಲ್ಲಿ ವಿರೇಂದ್ರ ಶೆಟ್ಟಿ ಕಾವೂರು ನಿರ್ದೇಶನದಲ್ಲಿ ಪ್ರಕಾಶ್ ಕೆ. ಪಾಂಡೇಶ್ವರ ಅವರು ನಿರ್ಮಾಣ ಮಾಡಿರುವ ಚಾಲಿಪೋಲಿಲು ಸಿನಿಮಾ 50 ದಿನಗಳ ಯಶಸ್ವಿ ಪ್ರದರ್ಶನ ಕಂಡು ಮುನ್ನುಗ್ಗುತ್ತಿದೆ.

  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 5 ಸಿನಿಮಾ ಮಂದಿರಗಳಲ್ಲಿ 50 ದಿನಗಳ ಪ್ರದರ್ಶನ ನೀಡಿರುವ ಚಾಲಿಪೋಲಿಲು, ಈಗಲೂ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಸಿನಿಮಾದ ಗುಣಮಟ್ಟಕ್ಕೆ ಸಾಕ್ಷಿ ಎಂದು ಹೇಳಬೇಕಾಗುತ್ತದೆ. [ಚಾಲಿಪೋಲಿಲು ಚಿತ್ರ ವಿಮರ್ಶೆ]

  ಮಂಗಳೂರಿನ ಜ್ಯೋತಿ, ಬಿಗ್ ಸಿನಿಮಾ, ಪಿವಿಆರ್, ಬಿ.ಸಿ. ರೋಡಿನ ನಕ್ಷತ್ರ ಮತ್ತು ಉಡುಪಿಯ ಕಲ್ಪನಾ ಥಿಯೇಟರ್ ಗಳಲ್ಲಿ ಚಾಲಿಪೋಲಿಲು ಹಾಫ್ ಸೆಂಚುರಿ ಬಾರಿಸಿದೆ. ಈವರೆಗಿನ ತುಳು ಸಿನಿಮಾದಲ್ಲೇ ಉತ್ತಮ ಕಲೆಕ್ಷನ್ ಸಂಪಾದಿಸಿದ ಕೀರ್ತಿ ಪಡೆದಿರುವ ಈ ಸಿನಿಮಾವು ಬಿಡುಗಡೆ ಕಂಡ ಮೂರೇ ವಾರದಲ್ಲಿ ನಿರ್ಮಾಪಕರ ಅಸಲನ್ನು ತಂದು ಕೊಟ್ಟಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  Chaali Polilu press meet

  ತುಳುವಿನಲ್ಲಿ ಇಂಥದ್ದೊಂದು ಬದಲಾವಣೆಯಾಗಿರುವುದು ಹೆಮ್ಮೆಯ ಸಂಗತಿ. ಅಲ್ಲದೆ ಕಾರ್ಕಳ ಮತ್ತು ಬೆಳ್ತಂಗಡಿ, ಮೂಡಬಿದ್ರೆ, ಪುತ್ತೂರಿನಲ್ಲಿ ಈ ಹಿಂದಿನ ಎಲ್ಲ ದಾಖಲೆ ಮುರಿದ ತುಳು ಸಿನಿಮಾ ಎಂಬ ಹೆಗ್ಗಳಿಕೆಗೂ ಇದು ಭಾಜನವಾಗಿದೆ.

  ಶಾಲಾ ಮಕ್ಕಳಿಗೆ ವಿಶೇಷ ರಿಯಾಯಿತಿ: ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಈ ಅವಕಾಶ ಮಾಡಿಕೊಡುತ್ತೇವೆ ಎಂದಿದ್ದಾರೆ ಚಿತ್ರದ ನಿರ್ಮಾಪಕರು.

  ಈಗ ಚಾಲಿಪೋಲಿಲು ಪ್ರತಿ ರವಿವಾರ ಮುಂಬಯಿಯಯಲ್ಲೂ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಎರಡು ರವಿವಾರ ಮುಂಬಯಿ ನಗರದ ವಿವಿಧ ಟಾಕೀಸುಗಳಲ್ಲಿ ಪ್ರದರ್ಶನ ನೀಡಿದ್ದು, ಅಲ್ಲೆಲ್ಲ ಟಿಕೆಟ್ ಸಿಗದೆ ನಿರಾಶೆಯಿಂದ ವಾಪಸ್ ಹೋದವರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನಲ್ಲೂ ಸತತ 4 ವಾರ ಸಿನಿಮಾ ಪ್ರದರ್ಶನ ಕಂಡಿದೆ.

  ಹಲವು ಪ್ರಥಮಗಳ ತುಳು ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಇದಕ್ಕೆ ಪ್ರೇಕ್ಷಕರು ನೀಡಿರುವ ಸ್ಪಂದನೆ ನಿರ್ಮಾಪಕರ ನಿರೀಕ್ಷೆಗೂ ಮೀರಿದ್ದಾಗಿದೆ. ಸಿನಿಮಾ ವೀಕ್ಷಿಸಿದ ಎಲ್ಲರಿಂದಲೂ ಶ್ಲಾಘನೆಗೆ ಒಳಗಾಗಿರುವ ಚಾಲಿಪೋಲಿಲು ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿ ಪ್ರದರ್ಶನ ನೀಡುವ ಸ್ಪಷ್ಟ ಲಕ್ಷಣ ಗೋಚರಿಸುತ್ತಿದೆ.

  Chaali Polilu movie still

  ತುಳುವಲ್ಲೂ ಉತ್ತಮ ಸಿನಿಮಾ ಬಂದರೆ ಪ್ರೇಕ್ಷಕರು ಸ್ವಾಗತಿಸಿ ಬೆಂಬಲಿಸುತ್ತಾರೆ ಎಂಬುದಕ್ಕೆ ಚಾಲಿಪೋಲಿಲು ಒಂದು ಉತ್ತಮ ಉದಾಹರಣೆಯಾಗುತ್ತದೆ.
  ಚಾಲಿಪೋಲಿಲು ಸಿನಿಮಾ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದು 50 ದಿನದ ಪ್ರದರ್ಶನದ ವೇಳೆಗೆ 1.66 ಕೋಟಿ ರೂ.ಗೂ ಹೆಚ್ಚು ಗಳಿಕೆಯನ್ನು ಸಂಪಾದಿಸಿದೆ. ಮುಂದಿನ ದಿನಗಳಲ್ಲಿ ದೆಹಲಿ ಮತ್ತು ವಿದೇಶದಲ್ಲೂ ಸಿನಿಮಾ ಪ್ರದರ್ಶನಗೊಳ್ಳಲಿದೆ.

  ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು ಮತ್ತು ಅರವಿಂದ ಬೋಳಾರ್ ಅವರಿಗೆ ಚಾಲಿಪೋಲಿಲು ಸಿನಿಮಾದ ಯಶಸ್ಸು ಹೊಸ ಇಮೇಜನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಪತ್ರಿಕಾಗೊಷ್ಠಿಯಲ್ಲಿ ಪ್ರಕಾಶ್ ಪಾಂಡೇಶ್ವರ್, ವೀರೇಂದ್ರ ಶೆಟ್ಟಿ ಕಾವೂರು, ಉತ್ಪಲ್ ನಯನಾರ್, ದೇವದಾಸ್ ಕಾಪಿಕಾಡ್, ನವೀನ್ ಪಡೀಲ್, ಭೋಜರಾಜ್ ವಾಮಂಜೂರು, ಕದ್ರಿ ನವನೀತ ಶೆಟ್ಟಿ, ಲಕ್ಷ್ಮಣ್‍ಕುಮಾರ್ ಮಲ್ಲೂರು, ಮಾಧವ ಶೆಟ್ಟಿ ಸುರತ್ಕಲ್, ಉಮೇಶ್ ಮಿಜಾರ್ ಉಪಸ್ಥಿತರಿದ್ದರು. (ಫಿಲ್ಮಿಬೀಟ್ ಕನ್ನಡ)

  English summary
  Tulu movie Chaali Polilu completes 50 days in five theaters. The movie is pure family oriented film. The movie produced by Prakash Pandeshwar under the banner Jayakirana Films. Veerendra Shetty Kavoor is the story writer, lyricist and director.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more