»   » ಮುಂಬಯಿ ಮಹಾನಗರದಲ್ಲಿ 'ಚಾಲಿಪೋಲಿಲು' ಹೌಸ್ ಫುಲ್

ಮುಂಬಯಿ ಮಹಾನಗರದಲ್ಲಿ 'ಚಾಲಿಪೋಲಿಲು' ಹೌಸ್ ಫುಲ್

Posted By:
Subscribe to Filmibeat Kannada

ತವರೂರ ನೆಲದಲ್ಲಿ ಚಿತ್ರ ಬಿಡುಗಡೆಗೊಂಡು ಕೇವಲ ನಾಲ್ಕು ವಾರಗಳಲ್ಲಿ 12 ಚಿತ್ರಮಂದಿರಗಳಲ್ಲಿ ಏಕ ಕಾಲದಲ್ಲಿ ಪ್ರದರ್ಶಿಸಲ್ಪಟ್ಟು ಒಟ್ಟು 1000ಕ್ಕೂ ಅಧಿಕ ಭರ್ಜರಿ ಯಶಸ್ಸಿನ ಪ್ರದರ್ಶನವನ್ನು ನೀಡಿ, ಸುಮಾರು 1.30ಕೋಟಿ ರೂ.ಗಳಿಗಿಂತ ಅಧಿಕ ಸಂಗ್ರಹ ಮಾಡುವುದರೊಂದಿಗೆ ತುಳು ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆಯನ್ನು ನಿರ್ಮಿಸಿದ ಚಿತ್ರ ಚಾಲಿಪೋಲಿಲು.

ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್ ಕೆ.ಪಾಂಡೇಶ್ವರ್ ಅವರು ನಿರ್ಮಿಸಿರುವ ತುಳು ನಾಟಕ ರಂಗದ ದಿಗ್ಗಜ ಹಾಸ್ಯ ಕಲಾವಿದರುಗಳಾದ ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು ಅವರು ಅರವಿಂದ ಬೋಳಾರ್, ಸುಂದರ್ ರೈ ಮಂದಾರ, ಚೇತನ್ ರೈ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ `ಚಾಲಿ ಪೋಲಿಲು' ತುಳು ಚಿತ್ರ ಇದೀಗ ಮುಂಬಯಿ ಮಹಾನಗರವನ್ನು ಪ್ರವೇಶಿಸಿ ತುಳು ಕನ್ನಡಿಗ ಚಿತ್ರ ರಸಿಕರ ಪ್ರಶಂಸೆಗೆ ಪಾತ್ರವಾಗುತ್ತಿದೆ.

Tulu movie Chaali Polilu housefull in Mumbai

ಜನಪ್ರಿಯ ಕಲಾ ಸಂಘಟಕ, ಕಲಾಸಾರಥಿ ಬಿರುದಾಂಕಿತ ಕರ್ನೂರು ಮೋಹನ್ ರೈಯವರ ಸಂಪೂರ್ಣ ಮುಂದಾಳತ್ವದಲ್ಲಿ ಮುಂಬಯಿ ಮಹಾನಗರದಲ್ಲಿ ಪ್ರದರ್ಶನವನ್ನು ಕಾಣುತ್ತಿರುವ ಈ ಚಿತ್ರದ ಪ್ರಥಮ ಪ್ರದರ್ಶನವು ಡಿ.7ರ ರವಿವಾರ ಬೆಳಿಗ್ಗೆ 'ಮಲುಂಡ್' ಪಶ್ಚಿಮದ ಪಿ.ವಿ.ಆರ್(ನಿರ್ಮಲ್ ಲೈಫ್ ಸ್ಟೈಲ್) ಸಿನಿಮಾ ಗೃಹದಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಕಾಣುವುದರೊಂದಿಗೆ ಚಿತ್ರ ಅಭಿಮಾನಿಗಳಿಂದ ಚಿತ್ರಕ್ಕೆ ಮುಂಬಯಿ ನಗರದಲ್ಲಿ ಭವ್ಯ ಸ್ವಾಗತದೊರಕಿದೆ.

ಚಿತ್ರ ವೀಕ್ಷಿಸಿದ ಪ್ರತಿಯೊಬ್ಬ ಪ್ರೇಕ್ಷಕನೂ ಚಿತ್ರದ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮುಂದಿನ ಭಾನುವಾರ ಮುಂಬಯಿಯ ಬೇರೆ ಬೇರೆ ಪ್ರದೇಶಗಳಲ್ಲಿ ಚಾಲಿಪೋಲಿಲು ಪ್ರದರ್ಶನಗೊಳ್ಳಲಿದೆ. ಶೀಘ್ರದಲ್ಲೇ ವಿದೇಶದಲ್ಲೂ ಪ್ರದರ್ಶನ ಕಾಣಲಿದೆ.

ಪ್ರೇಕ್ಷಕರು ಬಯಸುವಂಥದ್ದೆಲ್ಲವೂ ಈ ಚಿತ್ರದಲ್ಲಿದೆ. ನವಿರಾದ, ದ್ವಂದ್ವಾರ್ಥವಿಲ್ಲದ ಗುಣಮಟ್ಟದ ಹಾಸ್ಯ, ಸಾಮಾಜಿಕ ಆಗುಹೋಗುಗಳ ವಿಡಂಬನೆ, ಒಂದು ಉತ್ತಮ ಕಥೆ, ಅದಕ್ಕಿಂತಲೂ ಉತ್ತಮ ಸಂದೇಶವನ್ನು ಚಿತ್ರದಲ್ಲಿ ಕಾಣಬಹುದು. (ಫಿಲ್ಮಿಬೀಟ್ ಕನ್ನಡ)

Post by Oneindia Kannada.
English summary
Tulu movie Chaali Polilu showing housefull in Mumbai also. The movie already wins the Tulu movigoars hearts. The movie has been produced by Prakash Pandeshwar under the banner ‘Jayakirana Films’. Veerendra Shetty Kavoor is the story writer, lyricist and director.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada