For Quick Alerts
  ALLOW NOTIFICATIONS  
  For Daily Alerts

  ಯಶಸ್ವಿ 25 ದಿನ ಪೂರೈಸಿದ ತುಳು ಹಾಸ್ಯ ಸಿನಿಮಾ 'ದಗಲ್ ಬಾಜಿಲು'

  By Harshitha
  |

  ಅನುಗ್ರಹ ಫಿಲಂಸ್ ಲಾಂಛನದಲ್ಲಿ ಸಂತೋಷ್ ಶೆಟ್ಟಿ ಕುಂಬ್ಳೆ ನಿರ್ಮಾಣದ ಎ.ಎಸ್.ಪ್ರಶಾಂತ್ ಆಚಾರ್ಯ ನಿರ್ದೇಶನದ ತುಳು ಹಾಸ್ಯ ಸಿನಿಮಾ 'ದಗಲ್ ‍ಬಾಜಿಲು' 25 ದಿನಗಳನ್ನು ಪೂರೈಸಿದೆ. ಈ ಸಿನಿಮಾ ಏಕಕಾಲದಲ್ಲಿ 14 ಚಿತ್ರಮಂದಿರಗಳಲ್ಲಿ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  ಕಾಸರಗೋಡು, ಮಡಿಕೇರಿ, ಕೊಪ್ಪ ಮೊದಲಾದ ಪ್ರದೇಶಗಳಲ್ಲಿ ತೆರೆ ಕಂಡಿರುವ 'ದಗಲ್ ಬಾಜಿಲು' ಮುಂದಿನ ದಿನಗಳಲ್ಲಿ ಮುಂಬೈ, ಪೂಣೆ, ಬೆಂಗಳೂರು ಹಾಗೂ ವಿದೇಶಗಳಲ್ಲಿ ತೆರೆ ಕಾಣಲಿದೆ.

  ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನು ಸುರೇಶ್ ಅಂಚನ್ ರಚಿಸಿದ್ದಾರೆ. ಖ್ಯಾತ ನಿರ್ದೇಶಕ ಎಂ.ಡಿ ಶ್ರೀಧರ್ ಗರಡಿಯಲ್ಲಿ ಪಳಗಿರುವ ಎ.ಎಸ್.ಪ್ರಶಾಂತ್ ಆಚಾರ್ಯ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

  ಬಿಡುಗಡೆ ಆಯ್ತು ತುಳು ಸಿನಿಮಾ 'ಪಮ್ಮಣ್ಣೆ ದಿ ಗ್ರೇಟ್' ಧ್ವನಿಸುರುಳಿಬಿಡುಗಡೆ ಆಯ್ತು ತುಳು ಸಿನಿಮಾ 'ಪಮ್ಮಣ್ಣೆ ದಿ ಗ್ರೇಟ್' ಧ್ವನಿಸುರುಳಿ

  ಕೆ.ಎಮ್.ವಿಷ್ಣುವರ್ಧನ ಛಾಯಾಗ್ರಹಣ ಇದ್ದು, ಶ್ರೀನಿವಾಸ್.ಪಿ.ಬಾಬು ಸಂಕಲನ, ವಿಲ್ಟ್ರೇಡ್ ಪಿಂಟೋ ಕಲಾ ನಿರ್ದೇಶನ ಚಿತ್ರಕ್ಕಿದೆ. ಗಾಯಕ ಆರ್.ಡಿ.ಮರ್ಮನ್ ಮತ್ತು ಸಂದೇಶ್ ಬಾಬು ಜೊತೆಗೂಡಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್ , ಅನುರಾಧಾ ಭಟ್, ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ, ವಿಸ್ಮಯ ವಿನಾಯಕ್, ಉಮೇಶ್ ಮಿಜಾರ್, ನವೀನ್ ಡಿ ಪಡೀಲ್, ಪ್ರಕಾಶ್ ಮಹಾದೇವನ್, ರೂಪಾ ಪ್ರಕಾಶ್, ಮಹಮ್ಮದ್ ಇಕ್ಬಾಲ್, ಧನಂಜಯ ವರ್ಮ, ಸಂದೇಶ್ ಬಾಬು ದನಿಗೂಡಿಸಿದ್ದಾರೆ.

  ನಾಯಕ-ನಾಯಕಿಯರಾಗಿ ವಿಘ್ನೇಶ್, ರಶ್ಮಿಕಾ ನಟಿಸಿದ್ದಾರೆ. ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ದೀಪಕ್ ರೈ, ಸತೀಶ್ ಬಂದಲೆ, ಉಮೇಶ್ ಮಿಜಾರು, ತಿಮ್ಮಪ್ಪ ಕುಲಾಲ್, ಸುನೀಲ್ ನೆಲ್ಲಿಗುಡ್ಡೆ, ಪ್ರಕಾಶ್ ತೂಮಿನಾಡು, ಮನೋಹರ್ ಶೆಟ್ಟಿ ನಂದಳಿಕೆ, ಮಣಿ ಕೋಟೆಬಾಗಿಲು, ಚಂದ್ರಶೇಖರ್ ಸಿದ್ದಕಟ್ಟೆ, ವಿಜಯ ಮೈಯ್ಯ, ಪ್ರಿಯಾ ಹೆಗ್ಡೆ, ನೀಮಾರೇ, ರೂಪಾ ವರ್ಕಾಡಿ, ನಮಿತಾ ಮುಂತಾದವರು ನಟಿಸಿದ್ದಾರೆ.

  English summary
  Tulu Movie 'Dagal Bajilu' completes 25 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X