twitter
    For Quick Alerts
    ALLOW NOTIFICATIONS  
    For Daily Alerts

    ಮನ ಗೆದ್ದ ತುಳು ಚಿತ್ರ ಮದಿಮೆ ಮರಾಠಿಗೆ ರೀಮೇಕ್

    By Rajendra
    |

    'ಚಾಲಿ ಪೋಲಿಲು' ಚಿತ್ರ ತೆರೆಕಂಡ ಬೆನ್ನಿಗೇ ಕರಾವಳಿಯಲ್ಲಿ ಹವಾ ಎಬ್ಬಿಸಿದ ಬಹು ನಿರೀಕ್ಷಿತ ತುಳು ಚಿತ್ರ 'ಮದಿಮೆ' (ಮದುವೆ). ಇದೀಗ ಈ ಚಿತ್ರ ಮರಾಠಿ ಭಾಷೆಗೆ ರಿಮೇಕ್ ಆಗಲಿದೆ. ಅಲ್ಲಿ 'ಸಪ್ತಪದಿ' ಎಂಬ ಹೆಸರಿನಲ್ಲಿ ತೆರೆಕಾಣಲಿದೆ.

    ಈಗಾಗಲೇ ತೆರಗೆ ಬಂದು ಒಂದು ವಾರವಾಗಿರುವ ಮದಿಮೆ ಸದ್ಯ ಪ್ರದರ್ಶನವಾಗುತ್ತಿರುವ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮದಿಮೆ ತುಳು ವೃತ್ತಿ ರಂಗಭೂಮಿಯ ಅತ್ಯಂತ ಯಶಸ್ವಿ ನಿರ್ದೇಶಕ ವಿಜಯ ಕುಮಾರ್ ಕೋಡಿಯಾಲ್ ಬೈಲ್ ನಿರ್ದೇಶನದ ಚಿತ್ರವಿದು.

    Tulu movie Madime to remade in Marathi

    ಒಂದು ಕಾಲಕ್ಕೆ ಇವರದೇ ನಿರ್ದೇಶನದಲ್ಲಿ ಮದಿಮೆ ತುಳು ನಾಟಕ ತುಳು ರಂಗ ಭೂಮಿಯ ಸೂಪರ್ ಹಿಟ್ ನಾಟಕವಾಗಿತ್ತು. ಅದೇ ನಾಟಕ ಈಗ, ಅದೇ ಹೆಸರಿನಲ್ಲಿ ಚಲನಚಿತ್ರವಾಗಿದೆ. ಅಂದ ಹಾಗೆ, ಮೊದಲಿನಿಂದಲೂ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಮರಾಠಿ ರಂಗಭೂಮಿಯ ಸಂಪರ್ಕ ಹೊಂದಿದ್ದವರು.

    ಹಾಗಾಗಿ ಮದಿಮೆ ಚಿತ್ರ, ಮರಾಠಿ ಚಿತ್ರ ರಂಗಕ್ಕೆ ಕಾಲಿಡುವ ಮೂಲಕ ಅಲ್ಲಿ ತುಳು ಸಂಸ್ಕೃತಿಯ ಕಂಪು ಹರಡುವ ಸಿದ್ಧತೆ ನಡೆದಿದೆ. ಇತ್ತೀಚೆಗೆ ಖಾಸಗಿ ಟಿ.ವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ, ಸ್ವತಃ ಕೋಡಿಯಾಲ್ ಬೈಲ್ ಮದಿಮೆ ಮರಾಠಿಗೆ ರಿಮೇಕ್ ಆಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    ಈಗಾಗಲೇ ತಾರಾಗಣದ ಸಿದ್ಧತೆಯೂ ನಡೆದಿದೆಯಂತೆ ಮತ್ತು ಶೀಘ್ರದಲ್ಲೇ ಮುಹೂರ್ತ ಕೂಡಾ ನಡೆಯಲಿದೆಯಂತೆ. ಅಂತೂ ಮದಿಮೆ ಚಿತ್ರ ಮರಾಠಿಯಲ್ಲೂ ಸದ್ದು ಮಾಡುವುದರೊಂದಿಗೆ ತುಳು ಚಿತ್ರರಂಗ ಹೊಸತೊಂದು ಇತಿಹಾಸ ನಿರ್ಮಿಸಲಿದೆ. (ಫಿಲ್ಮಿಬೀಟ್ ಕನ್ನಡ)

    English summary
    Tulu movie Madime' to be remade in Marathi. The movie is being directed by Vijayakumar Kodialbail. The movie is a big budget movie presented by Sujatha Balakrishna Shetty and produced by Megina Balakrishna Shetty.
    Friday, November 28, 2014, 17:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X