For Quick Alerts
  ALLOW NOTIFICATIONS  
  For Daily Alerts

  ಯುಗಾದಿಗೆ ರಾರಾಜಿಸಲಿದೆ ಪೊರ್ಲುದ ವಿಶೇಷ ಚಿತ್ರ 'ನಮ್ಮ ಕುಡ್ಲ'

  By Suneetha
  |

  ಕರಾವಳಿಯ ತುಳು ಚಿತ್ರ ರಸಿಕರಿಗೆ ಚಂದ್ರಮಾನ ಯುಗಾದಿ (ಏಪ್ರಿಲ್ 8) ಸಂಭ್ರಮದ ದಿನ. ಒಂದೆಡೆ ಹಬ್ಬದ ಖುಷಿ ಆದರೆ ಇನ್ನೊಂದೆಡೆ ಆ ದಿನ ಕುಡ್ಲದ ಸಿನಿ ಪ್ರಿಯರಿಗೆ ಭಯಂಕರ ಸಂಭ್ರಮ. ಯಾಕೆಂದರೆ ಆ ದಿನ ಹೊಸಬರ ಬಹುನಿರೀಕ್ಷಿತ 'ನಮ್ಮ ಕುಡ್ಲ' ಸಿನಿಮಾ ಇಡೀ ಕರಾವಳಿಯಾದ್ಯಂತ ಭರ್ಜರಿಯಾಗಿ ತೆರೆ ಕಾಣುತ್ತಿದೆ.

  ತುಳು ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿ ಅಶ್ವಿನಿ ಹರೀಶ್ ನಾಯಕ್ ಆಕ್ಷನ್-ಕಟ್ ಹೇಳಿರುವ 'ನಮ್ಮ ಕುಡ್ಲ' ಎಂಬ ಸೂಪರ್ ಹಿಟ್ ತುಳು ಸಿನಿಮಾ ಇದೇ ಏಪ್ರಿಲ್ 8 ರಂದು ಅದ್ದೂರಿಯಾಗಿ ಇಡೀ ಕರಾವಳಿಯಾದ್ಯಂತ ತೆರೆ ಕಾಣುತ್ತಿದೆ.[400 ದಿನ ಪೂರೈಸಿ ದಾಖಲೆ ನಿರ್ಮಿಸಿದ ಕರಾವಳಿಯ ಹೆಮ್ಮೆಯ 'ಚಾಲಿಪೋಲಿಲು']

  'ವಾರ್ ಫಾರ್ ಪೀಸ್' ಎಂಬ ಅಡಿಬರಹ ಇರುವ 'ನಮ್ಮ ಕುಡ್ಲ' ಸಿನಿಮಾ ಸಾಮಾಜಿಕ ಕಳಕಳಿಯುಳ್ಳ ಸಿನಿಮಾವಾಗಿ ಮೂಡಿಬಂದಿದೆ. ಜೊತೆಗೆ ವಿಭಿನ್ನ ಶೈಲಿಯ ಕಥಾಹಂದರ ಇರುವ ಈ ಚಿತ್ರ ಇಡೀ ಮನೆಮಂದಿ ಕುಳಿತು ನೋಡಬಹುದಾದ ಪಕ್ಕಾ ಮನರಂಜನೆಯುಳ್ಳ ಚಿತ್ರ. ಮಾತ್ರವಲ್ಲದೇ ವಿಶೇಷ ಸಂದೇಶದೊಂದಿಗೆ ಹಾಸ್ಯವನ್ನು ಒಳಗೊಂಡಿದೆ.

  ಸುಮಾರು 45 ದಿನಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದೆ. ಕರಾವಳಿಯ ವಿವಿಧ ಪ್ರಕೃತಿ ರಮಣೀಯ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿರುವ 'ನಮ್ಮ ಕುಡ್ಲ' ಚಿತ್ರದಲ್ಲಿ ಸುಂದರ ಮಂಗಳೂರು ನಗರವನ್ನು ವಿಶೇಷ ಶೈಲಿಯಲ್ಲಿ ಬಿಂಬಿಸಲಾಗಿದೆ.[ಒಂದೇ ವಾರಕ್ಕೆ ಕರಗಿ ನೀರಾಯಿತೇ?, 'ಐಸ್ ಕ್ರೀಮ್'..!]

  ಇನ್ನುಳಿದಂತೆ ಚಿತ್ರದ ಹಾಡುಗಳನ್ನು ಮಂಗಳೂರು, ಮಡಿಕೇರಿ ಹಾಗೂ ನಮ್ಮ ರಾಜಧಾನಿ ಬೆಂಗಳೂರಿನ ಸುಂದರ ಪ್ರದೇಶಗಳಲ್ಲಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

  ಚಿತ್ರದ ತಾರಾಗಣದಲ್ಲಿ ನಾಯಕ ನಟನಾಗಿ ಪ್ರಕಾಶ್ ಶೆಟ್ಟಿ ಧರ್ಮನಗರ, ಇವರಿಗೆ ನಾಯಕಿಯಾಗಿ ಛಾಯಾ ಹರ್ಷ ಅವರು ಮಿಂಚಿದ್ದಾರೆ. ಇವರೊಂದಿಗೆ ಲಕ್ಷ್ಮಣ್ ಮಲ್ಲೂರು, ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ, ಸತೀಶ್ ಬಂದಲೆ, ದಿನೇಶ್ ಅತ್ತಾವರ ಮುಂತಾದವರು ಪ್ರಮುಖವಾಗಿ ಮಿಂಚುತ್ತಿದ್ದಾರೆ.[ಟಿವಿ ನಿರೂಪಕಿ ಇದೀಗ ಚಲನಚಿತ್ರ ನಿರ್ಮಾಪಕಿ]

  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಲ್ಟಿಫ್ಲೆಕ್ಸ್ ಗಳು ಸೇರಿದಂತೆ ಸುಮಾರು 13 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಮಂಗಳೂರಿನ ಜ್ಯೋತಿ ಚಿತ್ರಮಂದಿರ ಸೇರಿದಂತೆ ಪಿವಿಆರ್, ಸಿನಿಪೊಲಿಸ್ ಮತ್ತು ಬಿಗ್ ಸಿನಿಮಾಸ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದ ಫೊಟೋ ಗ್ಯಾಲರಿ ನೋಡಿ ಸ್ಲೈಡುಗಳಲ್ಲಿ...

  English summary
  Tulu Movie 'Namma Kudla' is all set to release on April 8th. The film features Tulu Actor Prakash Shetty, Tulu Actress Chaya Harsha. The movie is directed by Ashwini Harish Nayak.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X