»   » ಹೊಸ ದಾಖಲೆ ಬರೆದಿದೆ ತುಳು ಸಿನಿಮಾ 'ರಂಗ್'

ಹೊಸ ದಾಖಲೆ ಬರೆದಿದೆ ತುಳು ಸಿನಿಮಾ 'ರಂಗ್'

Posted By: ಜೀವನರಸಿಕ
Subscribe to Filmibeat Kannada

ತುಳು ಭಾಷೆಯ ಸಿನಿಮಾ ರಿಲೀಸ್ ಆಗೋದು ಹೋಗೋದು ಸ್ಯಾಂಡಲ್ ವುಡ್ ಗೆ ಗೊತ್ತಾಗೋದೇ ಇಲ್ಲ. ತುಳು ಸಿನಿಮಾಗಳೇನಿದ್ರೂ ಸೌಂಡ್ ಮಾಡೋದು ಮಂಗಳೂರು, ಉಡುಪಿ, ಹೆಚ್ಚು ಅಂದ್ರೆ ಕಾಸರಗೋಡುನಲ್ಲಿ. ಅದರಲ್ಲೂ ತುಳು ಸಿನಿಮಾ ಯಾವಾಗ ಬಂದು ಯಾವಾಗ ಹೋಯ್ತು ಅಂತ ಬೆಂಗಳೂರಿಗೆ ಗೊತ್ತಾಗೋದೇ ಇಲ್ಲ.

ಆದರೆ ಈಗ ತುಳು ಸಿನಿಮಾ ದಾಖಲೆ ಬರೆದು ಸುದ್ದಿ ಮಾಡ್ತಿದೆ. ಮಾಧ್ಯಮಗಳ ಮೂಲಕ ಪ್ರಚಾರ ಪಡ್ಕೊಳ್ಳದ ತುಳು ಸಿನಿಮಾಗಳೇ ಹೆಚ್ಚು. ಆದರೆ ತುಳು ಸಿನಿಮಾ 'ರಂಗ್' ಬಾಲಿವುಡ್ ನಟರ ಅಭಿನಯದಿಂದ ಪ್ರಚಾರ ಗಿಟ್ಟಿಸಿಕೊಂಡಿತ್ತು. [ರಂಗ್ ಚಿತ್ರ ವಿಮರ್ಶೆ]

A still from movie Rang

ಬಾಲಿವುಡ್ ಕಾಮಿಡಿಯನ್ ಜಾನಿ ಲಿವರ್ ಅಭಿನಯಿಸಿದ್ದ 'ರಂಗ್' ಚಿತ್ರ ದಾಖಲೆ ಬರೆದಿದೆ. ಇಲ್ಲಿಯವರೆಗೂ ತುಳು ಚಿತ್ರಗಳು ಬರೆದಿದ್ದ ದಾಖಲೆಯನ್ನ ರಂಗ್ ಅಳಿಸಿ ಹಾಕಿದೆ. ಒಂದೇ ವಾರದಲ್ಲಿ ರು.40 ಲಕ್ಷ ಕಲೆಕ್ಷನ್ ಗಳಿಸಿರೋದು. ಒಂದೇ ಬಾರಿ 12 ಥಿಯೇಟರ್ ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿರುವುದು ಮತ್ತೊಂದು ದಾಖಲೆ.

ರಂಗ್ ದಾಖಲೆಗಳು ಇಷ್ಟಕ್ಕೇ ಮುಗಿಯುವುದಿಲ್ಲ. ಒಂದು ದಿನಕ್ಕೆ 48 ಪ್ರದರ್ಶನ ಕಾಣುತ್ತಿದೆ ರಂಗ್. ಹೀಗೆ ಮೊದಲ ಬಾರಿಗೆ ಹಲವು ದಾಖಲೆಗಳನ್ನ ಅಳಿಸಿ ಹಾಕಿ ಹೊಸ ದಾಖಲೆ ಬರೆದಿದೆ 'ರಂಗ್' ಚಿತ್ರ. ಕಾಮಿಡಿ ಎಲಿಮೆಂಟ್ ಜೊತೆಗೆ ಸೀರಿಯಸ್ ಕಥೆಯನ್ನೂ ಹೊಂದಿರೋ ರಂಗ್ ಚಿತ್ರಪ್ರೇಮಿಗಳನ್ನ ರಂಜಿಸ್ತಿದೆ.

English summary
Tulu movie Rang creates new records in box office. The movie collection Rs 40 lakh in first week. Suhan Prasad and Vismaya Vinayak directed movie also focus on the culture of Mangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada