For Quick Alerts
  ALLOW NOTIFICATIONS  
  For Daily Alerts

  ಮೇ 26ಕ್ಕೆ ತುಳು ಚಿತ್ರ 'ಏಸ' ಬಿಡುಗಡೆ

  By ಮಂಗಳೂರು ಪ್ರತಿನಿಧಿ
  |

  'ಯು2' ಸಿನಿಮಾ ಟಾಕೀಸ್ ಲಾಂಚಣದಲ್ಲಿ ತಯಾರಾಗಿರುವ ತುಳು ಚಿತ್ರ 'ಏಸ' ಈ ವಾರ (ಮೇ 26) ಕರಾವಳಿ ನಾಡಿನಾದ್ಯಂತ ಬಿಡುಗಡೆಯಾಗಲಿದೆ. ಸೆನ್ಸಾರ್ ಮಂಡಳಿಯಿಂದ "ಯು' ಸರ್ಟಿಫಿಕೇಟ್ ಪಡೆದುಕೊಂಡಿರುವ 'ಏಸ' ಈಗಾಗಲೇ ಟ್ರೈಲರ್ ಹಾಡುಗಳ ಮೂಲಕ ಗಮನ ಸೆಳೆದಿದೆ.

  ಯಕ್ಷಗಾನ ಕಲಾವಿದನೊಬ್ಬನ ಬದುಕಿನ ಕಥಾನಕ ಈ ಚಿತ್ರದಲ್ಲಿದ್ದು ತುಳುನಾಡಿನ ಖ್ಯಾತ ಕಲಾವಿದರಾದ ನವೀನ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

  ಅಂದ್ಹಾಗೆ, 'ಏಸ' ಚಿತ್ರಕ್ಕೆ ಎಂ.ಎನ್ ಜಯಂತ್ ಅವರು ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಶೋಭರಾಜ್ ಪಾವೂರು ಅವರು ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ಅಜ್ಜಾಡಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

  ಇನ್ನು ಚಿತ್ರಕ್ಕೆ ಗುರು ಮತ್ತು ಗುರು ಸಂಗೀತ ನೀಡಿದ್ದು ಖ್ಯಾತ ಹಿನ್ನಲೆ ಗಾಯಕರಾದ ವಿಜಯ ಪ್ರಕಾಶ್, ಸಂತೋಷ್ ವೆಂಕಿ, ಸುಪ್ರಿಯಾ ಜೋಷಿ, ಸಂಗೀತ ಬಾಲಚಂದ್ರ, ನಿತಿನ್ ರಾಜ್ ಜತೆ ಭೋಜರಾಜ್ ವಾಮಂಜೂರು ಹಾಡಿರುವುದು ವಿಶೇಷವಾಗಿದೆ.

  ಮೇ 26 ರಂದು ತೆರೆಕಾಣುತ್ತಿರುವ 'ಏಸ' ಮಂಗಳೂರಿನ ಜ್ಯೋತಿ, ಬಿಗ್ ಸಿನಿಮಾ, ಪಿವಿಆರ್, ಸಿನಿಪೊಲೀಸ್, ಉಡುಪಿಯ ಕಲ್ಪನ, ಸುರತ್ಕಲ್ ನ ನಟರಾಜ್, ಬೆಳ್ತಂಗಡಿ ಭರತ್, ಪುತ್ತೂರಿ ಅರುಣಾ ಚಿತ್ರಮಂದಿರದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ.

  English summary
  Tulu Movie 'Yesa' is all set to Release on May 26th. The Movie is Directed by MN Jayanth, Features Naveen Padile, Bojaraj Vamanjuru, Aravinda Bholar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X