»   » ಅರ್ಜುನ್ ಸರ್ಜಾರ 'Tunesmash' ಸ್ಪರ್ಧೆಯಲ್ಲಿ ಗೆದ್ದರೇ ಬಹುಮಾನ ಏನು?

ಅರ್ಜುನ್ ಸರ್ಜಾರ 'Tunesmash' ಸ್ಪರ್ಧೆಯಲ್ಲಿ ಗೆದ್ದರೇ ಬಹುಮಾನ ಏನು?

Posted By:
Subscribe to Filmibeat Kannada

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅಭಿನಯದ 'ಪ್ರೇಮ ಬರಹ' ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಅತಿ ಶೀಘ್ರದಲ್ಲಿ ಚಿತ್ರದ ಆಡಿಯೋ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದು, ಅದರ ಜೊತೆಯಲ್ಲಿ ಒಂದು ವಿಶೇಷವಾದ ಸ್ಪರ್ಧೆಯನ್ನ ಅಯೋಜಿಸಿದೆ ಚಿತ್ರತಂಡ.

ಹೌದು, 'Tunesmash' ಎಂಬ ಹೆಸರಿನಲ್ಲಿ ಸ್ಪರ್ಧೆಯನ್ನ ಹಮ್ಮಿಕೊಂಡಿರುವ ಅರ್ಜುನ್ ಸರ್ಜಾ ಅವರು, ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ವಿಶೇಷವಾದ ಸೌಲಭ್ಯ ಒದಗಿಸುತ್ತಿದ್ದಾರೆ. ಹಾಗಿದ್ರೆ, ಏನಿದು 'Tunesmash' ಸ್ಪರ್ಧೆ? ಮುಂದೆ ಓದಿ.....

Tunesmash Contest From Prema Baraha Movie Team

dubsmash ತರ ಈ 'Tunesmash' ಸ್ಪರ್ಧೆ. ಇಲ್ಲಿ ಸಾಹಿತ್ಯವಿರಲ್ಲ, ಕೇವಲ ಟ್ಯೂನ್ ಮಾತ್ರ ಇರುತ್ತೆ. ಸಾಹಿತ್ಯವನ್ನ ನೀವು ಬರಿಯಬೇಕು. ಇನ್ನು ಇದಕ್ಕೆ ಚಿತ್ರಕಥೆ ಕೂಡ ಹೇಳಿರುವ ಅರ್ಜುನ್ ಸರ್ಜಾ ''ಇಲ್ಲಿ ಇಬ್ಬರು ತುಂಬ ಪ್ರೀತಿಸುತ್ತಿರುತ್ತಾರೆ. ಬೇರೆ ಬೇರೆ ಊರಿನಲ್ಲಿ ಇರುವುದರಿಂದ ಭೇಟಿಯಾಗಲು ಸಾಧ್ಯವಾಗದೆ ಹಾಡುವ ಸಂಧರ್ಭ. ಈ ಸಂಧರ್ಭಕ್ಕೆ ತಕ್ಕ ಹಾಗೆ ಯಾರು ಸಾಹಿತ್ಯ ಬರೆಯುತ್ತಾರೋ ಅವರು ಅರ್ಜುನ್ ಸರ್ಜಾ ಅವರ ಜೊತೆ ಊಟ ಮಾಡುವ ಅವಕಾಶ. ಅಷ್ಟೇ ಅಲ್ಲದೇ, 'ಪ್ರೇಮ ಬರಹ' ಚಿತ್ರದ ಮೊದಲ ದಿನ ಚಿತ್ರತಂಡದ ಜೊತೆ ಸಿನಿಮಾ ನೋಡಬಹುದು.

ಈ ದೀಪಾವಳಿಗೆ ಅರ್ಜುನ್ ಸರ್ಜಾ ಮಗಳ ಕಡೆಯಿಂದ ಭರ್ಜರಿ ಗಿಫ್ಟ್ ಸಿಗುತ್ತೆ!

ನೀವು ಮಾಡಿದ 'Tunesmash'ನ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ - 7019543622

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ

English summary
arjun sarja daughter aishwarya Starrer Prema Baraha Movie Team Conducts Tunesmash Contes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada