Just In
Don't Miss!
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- News
ಕರ್ನಾಟಕದಾದ್ಯಂತ ಚಳಿ ಇಳಿಕೆ, ತಾಪಮಾನ ಏರಿಕೆ
- Sports
ಐಎಸ್ಎಲ್: ಚೆನ್ನೈಯಿನ್ ವಿರುದ್ಧ ಒತ್ತಡವೇ ಇಲ್ಲವೆಂದ ಬಾಗನ್ ಕೋಚ್
- Automobiles
ಪ್ರತಿ ಚಾರ್ಜ್ 150 ಕಿ.ಮೀ ಮೈಲೇಜ್ ನೀಡುವ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಕೊಮಾಕಿ
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡೇಟಿಂಗ್ Appನಲ್ಲಿ ಪರಿಚಯ, ಅತ್ಯಾಚಾರ ನಂತರ ಬ್ಲಾಕ್ ಮೇಲ್: ಕಿರುತೆರೆ ನಟ ಬಂಧನ
ಕಿರುತೆರೆ ನಟ ಹಾಗೂ ಗಾಯಕ ಕರಣ್ ಒಬೆರಾಯ್ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದ್ದು, ಬಂಧನಕ್ಕೆ ಒಳಗಾಗಿದ್ದಾರೆ. ಯುವತಿಯೊಬ್ಬಳ ಜೊತೆ ಪರಿಚಯ ಬೆಳಸಿಕೊಂಡು, ಅತ್ಯಾಚಾರವೆಸಗಿ ನಂತರ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಆ ಯುವತಿ ದೂರಿದ್ದಾಳೆ.
ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಸ್ವತಃ ದೌರ್ಜನ್ಯಕ್ಕೆ ಒಳಗಾದ ಆ ಯುವತಿಯೇ ದೂರು ನೀಡಿದ್ದಾಳೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮಾಡಿ ಯುವತಿ ವಿಚಾರಣೆ ನಡೆಸಿದ ಪೊಲೀಸರಿಗೆ ಅನೇಕ ಆಘಾತಕಾರಿ ವಿಷ್ಯಗಳು ತಿಳಿದಿದೆಯಂತೆ.
ಇಲ್ಲಿ ಗಮನಿಸಬೇಕಾದ ವಿಚಾರ ಏನಪ್ಪಾ ಅಂದ್ರೆ ಇವರಿಬ್ಬರಿಗೂ ಪರಿಚಯವಾಗಿದ್ದು ಡೇಟಿಂಗ್ APPನಲ್ಲಿ ಎಂಬುದು. ಅಷ್ಟಕ್ಕೂ, ಕರಣ್ ಒಬೆರಾಯ್ ಯಾರು? ಈ ಆಪ್ ನಲ್ಲಿ ಪರಿಚಯ ಹೇಗಾಯ್ತು? ಏನಿದು ಅತ್ಯಾಚಾರ ಪ್ರಕರಣ ಮುಂದೆ ಓದಿ....

ಅತ್ಯಾಚಾರವೆಗಿಸಿರುವುದು ನಿಜವಂತೆ
ನನ್ನ ಮೇಲೆ ಅತ್ಯಾಚಾರವೆಸಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರು ನೀಡಿದ ನಂತರ ಮುಂಬೈ ಪೊಲೀಸರು ಕರಣ್ ಒಬೆರಾಯ್ ಅವರನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಅತ್ಯಾಚಾರವೆಸಗಿರುವುದು ಸತ್ಯವೆಂದು, ನಂತರ ದುಡ್ಡಿಗಾಗಿ ಬ್ಲಾಕ್ ಮೇಲ್ ಮಾಡಿರುವುದು ನಿಜವೆಂದು ತಿಳಿದು ಬಂದಿದೆ.

ವಿಡಿಯೋ ರಿಲೀಸ್ ಮಾಡುವುದಾಗಿ ಎಚ್ಚರಿಕೆ
ದುಡ್ಡು ನೀಡಿಲ್ಲ ಅಂದ್ರೆ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡುತ್ತೇನೆ ಕರಣ್ ಒಬೆರಾಯ್, ಆ ಯುವತಿಗೆ ಬ್ಕಾಕ್ ಮೇಲ್ ಮಾಡುತ್ತಿದ್ದನಂತೆ. ಅಷ್ಟೇ ಅಲ್ಲದೇ ಜ್ಯೋತಿಷ್ಯಿ ಒಬ್ಬರ ಬಳಿಯೂ ದುಡ್ಡು ಪೀಕಲು ಪ್ರಯತ್ನಿಸುತ್ತಿದ್ದನಂತೆ.

ಡೇಟಿಂಗ್ ಆಪ್ ನಲ್ಲಿ ಪರಿಚಯ
ಮುಂಬೈ ಪೊಲೀಸರು ತಿಳಿಸಿರುವ ಪ್ರಕಾರ, 2016ರಿಂದ ನೊಂದ ಯುವತಿಯ ಜೊತೆ ಕರಣ್ ಒಬೆರಾಯ್ ಪರಿಚಯ ಹೊಂದಿದ್ದಾರೆ. ಇವರಿಬ್ಬರು ಡೇಟಿಂಗ್ ಮೊಬೈಲ್ ಆಪ್ ಮೂಲಕ ಸ್ನೇಹ ಬೆಳಸಿಕೊಂಡಿದ್ದರು. ಸುಮಾರು ತಿಂಗಳುಗಳಿಂದ ಮಹಿಳೆಯರ ಜೊತೆ ಕರಣ್ ಡೇಟಿಂಗ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆ ಆಗೋಣ ಎಂದು ಮೋಸ
ಮದುವೆ ಆಗುವುದಾಗಿ ನಂಬಿಸಿ ನನಗೆ ವಂಚನೆ ಮಾಡಿದ್ದಾನೆ. ಮದುವೆ ಆಗೋಣ ಎಂದು ಹೇಳಿ ನನ್ನನ್ನು ದೈಹಿಕವಾಗಿ ಬಳಿಸಿಕೊಂಡಿದ್ದ. ನನ್ನ ಮೇಲೆ ಅತ್ಯಾಚಾರವೆಸಗಿದ್ದ. ಅದನ್ನ ವಿಡಿಯೋ ಮಾಡಿ ಇಟ್ಟುಕೊಂಡಿದ್ದ. ಬಳಿಕ ದುಡ್ಡು ಕೊಡು, ಇಲ್ಲವಾದರೇ ಈ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಆ ಯುವತಿ ತನ್ನ ಅಳಲು ತೋಡಿಕೊಂಡಿದ್ದಾಳೆ.

ಪೊಲೀಸರ ವಶಕ್ಕೆ ಕರಣ್
ಮತ್ತೊಂದೆಡೆ ಆ ಯುವತಿ ಮಾಡಿರುವ ಆರೋಪಗಳು ನಿರಾಧಾರ ಎಂದು ಕರಣ್ ಕೋರ್ಟ್ ಗೆ ತಿಳಿಸಿದ್ದಾರೆ. ನನ್ನ ಮೇಲೆ ಬಂದಿರುವ ಆರೋಪ ಸುಳ್ಳ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಂಗಳವಾರ ವಿಚಾರಣೆ ನಡೆಸಿದ್ದ ಕೋರ್ಟ್ ಗುರುವಾರದವರೆಗೂ ಕರಣ್ ಒಬೆರಾಯ್ ಅವರನ್ನ ಪೊಲೀಸ್ ವಶಕ್ಕೆ ನೀಡಿದೆ.