For Quick Alerts
  ALLOW NOTIFICATIONS  
  For Daily Alerts

  ದುಬಾರಿ ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

  |

  ಬಿಗ್ ಬಾಸ್ ಕನ್ನಡ ಸೀಸನ್ 7ರ ವಿನ್ನರ್, ಕಿರುತೆರೆ ನಟ ಶೈನ್ ಶೆಟ್ಟಿ ಈಗ ದುಬಾರಿ ಕಾರಿನ ಒಡೆಯನಾಗಿದ್ದಾರೆ. ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಮಂದಿ ಐಷಾರಾಮಿ ಕಾರುಗಳನ್ನು ಖರೀದಿಸಿ ಸುದ್ದಿಯಾಗಿದ್ದರು. ಇದೀಗ ಆ ಸಾಲಿಗೆ ಶೈನ್ ಶೆಟ್ಟಿ ಕೂಡ ಸೇರಿದ್ದಾರೆ. ಬಿಗ್ ಬಾಸ್ ಗೆದ್ದ ಬಳಿಕ ಮತ್ತಷ್ಟು ಖ್ಯಾತಿಗಳಿಸುವ ಜೊತೆಗೆ ಬೇಡಿಕೆ ನಟನಾಗಿ ಹೊರಹೊಮ್ಮಿರುವ ಶೈನ್ ಈಗ ದುಬಾರಿ ಕಾರು ಖರೀದಿಸಿದ ಸಂತಸದಲ್ಲಿದ್ದಾರೆ.

  ಅಂದಹಾಗೆ ಶೈನ್ ಖರೀದಿಸಿದ ಹೊಸ ಕಾರು ಬಿಎಂಡಬ್ಲ್ಯೂ. ನೀಲಿ ಬಣ್ಣದ ಬಿಎಂಡಬ್ಲ್ಯೂ ಕಾರನ್ನು ಖರೀದಿ ಮಾಡಿದ್ದಾರೆ. ತನ್ನ ಕನಸಿನ ಹೊಸ ಕಾರಿನ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟಿದ್ದಾರೆ. ಅಂದಹಾಗೆ ಶೈನ್ ಶೆಟ್ಟಿ ತಾಯಿ ಕೂಡ ಜೊತೆಯಲ್ಲಿದ್ದಾರೆ. ತಾಯಿ ಮತ್ತು ಹೊಸ ಕಾರಿನ ಜೊತೆ ಶೈನ್ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

  ಹೊಸ ಕಾರು ಖರೀದಿಸಿದ್ರಾ ರಕ್ಷಿತ್ ಶೆಟ್ಟಿ? ಯಾವುದು ಈ ದುಬಾರಿ ಕಾರು?ಹೊಸ ಕಾರು ಖರೀದಿಸಿದ್ರಾ ರಕ್ಷಿತ್ ಶೆಟ್ಟಿ? ಯಾವುದು ಈ ದುಬಾರಿ ಕಾರು?

  ಇತ್ತೀಚಿಗಷ್ಟೆ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೊಸ ಕಾರನ್ನು ಖರೀದಿಸಿ ಸುದ್ದಿಯಾಗಿದ್ದರು. ವರಮಹಾಲಕ್ಷ್ಮಿ ಹಬ್ಬದ ದಿನ ಆಡಿ ಕ್ಯೂ8 ಕಾರನ್ನು ಖರೀದಿಸಿದ್ದರು. ಕಾರಿಗೆ ಪೂಜೆ ಮಾಡಿಸಿ ಹೊಸ ಕಾರಿನ ಜೊತೆ ನಿಂತು ಕ್ಲಕ್ಕಿಸಿಕೊಂಡಿರುವ ಫೋಟೋಗೊಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿತ್ತು.

  ಇನ್ನು ಈ ಮೊದಲು ಕಿರುತೆರೆಯ ಖ್ಯಾತ ನಟಿ ಮೇಘಾ ಶೆಟ್ಟಿ ಸಹ ದುಬಾರಿ ಕಾರನ್ನು ಖರೀದಿಸಿ ಸದ್ದು ಮಾಡಿದ್ದರು. ಒಂದೇ ದಿನ ಬಿಎಂಬ್ಲ್ಯೂ ಮತ್ತು ಎಂಜಿ ಹೆಕ್ಟರ್ ಎರಡು ಕಾರನ್ನು ಮೇಘಾ ಖರೀದಿ ಮಾಡಿದ್ದರು. ಮನೆಗೆ ಆಗಮಿಸಿದ ಎರಡು ಕಾರಿನ ಫೋಟೋವನ್ನು ನಟಿ ಮೇಘಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು. ಎರಡು ಕಾರಿನ ಫೋಟೋ ಶೇರ್ ಮಾಡಿ, ಮನೆಗೆ ಸ್ವಾಗತ ಎಂದು ಬರೆದುಕೊಂಡಿದ್ದರು.

  ಇನ್ನು ಶೈನ್ ಶೆಟ್ಟಿ ವಿಚಾರಕ್ಕೆ ಬರುವುದಾದರೆ ಬಿಗ್ ಬಾಸ್ ಮನೆಯಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. 'ಬಿಗ್ ಬಾಸ್-7' ವಿನ್ನರ್ ಪಟ್ಟದ ಜೊತೆಗೆ ಸಾಕಷ್ಟು ಬಹುಮಾನಗಳನ್ನು ಗೆದ್ದು ಬೀಗಿದ್ದರು. ಬಿಗ್ ಬಾಸ್ ವಿನ್ನರ್ ಗೆ ಸಿಗುವ 50 ಲಕ್ಷ ಹಣದ ಜೊತೆಗೆ ಇನ್ನು ಹೆಚ್ಚಿನ ಹಣ ಶೈನ್ ಪಡೆದುಕೊಂಡಿದ್ದರು. ಜೊತೆಗೆ ಒಂದು ಕಾರನ್ನು ಗಿಫ್ಟಾಗಿ ಪಡೆದಿದ್ದರು.

  ಬಿಗ್ ಬಾಸ್ ಮುಗಿದು ವರ್ಷದ ಬಳಿಕ ಬಿಗ್ ಬಾಸ್ ಗಿಫ್ಟ್ ಕಾರು ಶೈನ್ ಶೆಟ್ಟಿ ಮನೆ ಸೇರಿತ್ತು. ಟಾಟಾ ಆಲ್ಟ್ರೋಜ್ ಕಾರನ್ನು ಶೈನ್ ಬಹುಮಾನವಾಗಿ ಪಡೆದಿದ್ದರು. ಕಾರು ಮನೆಸೇರಿದ ಸಂತಸವನ್ನು ಶೈನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಇದೀಗ ದುಬಾರಿ ಕಾರನ್ನು ಖರೀದಿಸಿ ಸಂಭ್ರಮಿಸುತ್ತಿದ್ದಾರೆ.

  TV actor Shine Shetty buys new BMW car

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಶೈನ್ ಶೆಟ್ಟಿ ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೇಮ್ಸ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶೈನ್ ಪಾತ್ರದ ಬಗ್ಗೆ ಹೆಚ್ಚು ಬಿಟ್ಟುಕೊಟ್ಟಿಲ್ಲ. ಮೊದಲ ಬಾರಿಗೆ ಶೈನ್ ಪವರ್ ಸ್ಟಾರ್ ಜೊತೆ ತೆರೆಹಂಚಿಕೊಂಡಿದ್ದು, ಚಿತ್ರದ ಬಗ್ಗೆ ಸಖತ್ ಉತ್ಸುಕರಾಗಿದ್ದಾರೆ. ಬಾಲಿವುಡ್ ನಲ್ಲೂ ಶೈನ್ ಮಿಂಚುತ್ತಿದ್ದಾರೆ. ಹಿಂದಿ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಶೈನ್ ಮತ್ತಷ್ಟು ಶೈನ್ ಆಗಿದ್ದಾರೆ. ಇನ್ನೂ ವಿಶೇಷ ಎಂದರೆ ಸಿನಿಮಾ, ಆಲ್ಬಂ ಸಾಂಗ್ ಜೊತೆಗೆ ಮತ್ತೆ ಕಿರುತೆರೆಯಲ್ಲಿ ಬ್ಯುಸಿಯಾಗುತ್ತಿದ್ದಾರೆ. ಡಾನ್ಸ್ ರಿಯಾಲಿಟಿ ಶೋ ನಿರೂಪಕರಾಗಿ ಶೈನ್ ಮತ್ತೆ ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

  English summary
  Bigg Boss winner, Actor Shine Shetty buys new BMW car. New car photo viral in social media.
  Thursday, August 26, 2021, 9:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X