»   » ಅರ್ಜುನ್ ಸರ್ಜಾ ಚಿತ್ರದಲ್ಲಿ ಪಾಂಡುರಂಗ ವಿಠಲ ಜಹಾಂಗೀರ್

ಅರ್ಜುನ್ ಸರ್ಜಾ ಚಿತ್ರದಲ್ಲಿ ಪಾಂಡುರಂಗ ವಿಠಲ ಜಹಾಂಗೀರ್

Posted By:
Subscribe to Filmibeat Kannada
MS Jahangeer
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅವರದೇ ಆದ "ಶ್ರೀರಾಮ್ ಫಿಲಂಸ್ ಇಂಟರ್ ನ್ಯಾಷನಲ್" ಲಾಂಛನದಲ್ಲಿ ನಿರ್ಮಿಸುತ್ತಿರುವ ಚಿತ್ರದ ಹೆಸರು ಅಭಿಮನ್ಯು. ಇದೊಂದು ಕನ್ನಡ, ತೆಲುಗು ಹಾಗೂ ತಮಿಳು ತ್ರಿಭಾಷಾ ಚಿತ್ರವಾಗಿದೆ.

ಈ ಚಿತ್ರಕ್ಕೆ ಜೀ ಕನ್ನಡ ವಾಹಿನಿಯ 'ಪಾಂಡುರಂಗ ವಿಠಲ' ಕಾಮಿಡಿ ಸೀರಿಯಲ್ ನ ಮುಖ್ಯ ಕಲಾವಿದ ಎಂ.ಎಸ್.ಜಹಾಂಗೀರ್ ಆರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಹಾಸ್ಯ ಧಾರಾವಾಹಿಗಳನ್ನು ನೋಡಿರುವ ಸರ್ಜಾ ಅವರು ಸ್ವತಃ ಕರೆ ಮಾಡಿ ತಮ್ಮ ಚಿತ್ರದಲ್ಲಿ ನಟಿಸುವಂತೆ ಆಹ್ವಾಹಿಸಿರುವುದು ವಿಶೇಷ.

ಇಷ್ಟು ದಿನ ಕಿರುತೆರೆಯಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ಜಹಾಂಗೀರ್ ಅವರು ಇದೀಗ ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ. ಅರ್ಜುನ್ ಸರ್ಜಾ ಚಿತ್ರದಲ್ಲಿ ಆಫರ್ ಸಿಕ್ಕ ಬಗ್ಗೆ ಜಹಾಂಗೀರ್ ಹೇಳಿದ್ದನ್ನು ಅವರದೇ ಮಾತುಗಳಲ್ಲಿ ಕೇಳಿ.

ಮೊದಲು ಸರ್ ಫೋನ್ ಮಾಡಿದರು. ಯಾರು ಎಂದು ಗೊತ್ತಾಗದೆ ಪಿಕ್ ಮಾಡಲಿಲ್ಲ. ಬಳಿಕ ಮೆಸೇಜ್ ಮಾಡಿದರು. ನಾನಪ್ಪಾ ಅರ್ಜುನ್ ಸರ್ಜಾ ಫೋನ್ ರಿಸೀವ್ ಮಾಡು ಎಂದರು. ತಮ್ಮ ಚಿತ್ರದಲ್ಲಿ ಅಭಿನಯಿಸುವಂತೆ ಕೇಳಿದರು. ಕೂಡಲೆ ಒಪ್ಪಿಕೊಂಡೆ ಎಂದರು.

ನನಗೆ ಮೊದಲೇ ಕಲರ್ ಇಲ್ಲ, ಲುಕ್ ಇಲ್ಲ. ತಲೆಯಲ್ಲಿ ಸ್ವಲ್ಪ ಕೂದಲು ಇದೆ ಅಷ್ಟೇ. ಇದೂ ಹೋದರೆ ಏನೇನು ಇರಲ್ಲ ಎಂದರು. ಒಟ್ಟಾರೆಯಾಗಿ ಈ ಚಿತ್ರದಲ್ಲಿ ಅವಕಾಶ ಸಿಕ್ಕಿರುವ ಬಗ್ಗೆ ಸಹಜವಾಗಿಯೇ ಅವರಿಗೆ ಖುಷಿಯಾಗಿತ್ತು. (ಒನ್ಇಂಡಿಯಾ ಕನ್ನಡ)

English summary
Zee Kannada's Panduranga Vittala comedy serial artist MS Jahangeer got chance to act with Arjun Sarja trilingual film 'Abhimanyu'. The commercial movie is about an Indian education system. This is the first Kannada movie directing and producing by Arjun Sarja.
Please Wait while comments are loading...