»   » ಬ್ರೇಕಿಂಗ್ ನ್ಯೂಸ್; 'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!'

ಬ್ರೇಕಿಂಗ್ ನ್ಯೂಸ್; 'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಹುಟ್ಟುಹಾಕಿರುವ 'ಕರ್ವ' ಚಿತ್ರದ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಒಂದು ಎಕ್ಸ್ ಕ್ಲೂಸಿವ್ ಸುದ್ದಿಯನ್ನ ನಿಮಗಾಗಿ ಹೊತ್ತು ತಂದಿದೆ.

ಕರ್ನಾಟಕದ ಜನಪ್ರಿಯ ಸುದ್ದಿ ವಾಹಿನಿ 'ಟಿವಿ9' ನಲ್ಲಿ ಪ್ರಸಾರವಾಗುವ 'ಹೀಗೂ ಉಂಟೇ.!' ಕಾರ್ಯಕ್ರಮವನ್ನ ನೀವೆಲ್ಲಾ ನೋಡಿದ್ದೀರಾ ತಾನೇ..?

tv9-program-heegu-unte-in-kannada-movie-karva

ಭೂತ, ಪ್ರೇತ, ನಂಬಿಕೆ, ಅಪನಂಬಿಕೆ, ದೇವರು, ಅಗೋಚರ ಶಕ್ತಿಗಳ ಸುತ್ತ ಹುಟ್ಟಿಕೊಳ್ಳುವ ವಿಶಿಷ್ಟ ಬಗೆಯ ಘಟನೆಗಳನ್ನು ತಿಳಿಸುವ ಕಾರ್ಯಕ್ರಮ 'ಹೀಗೂ ಉಂಟೇ.!'. ತರ್ಕಕ್ಕೆ ನಿಲುಕದ, ವೈಜ್ಞಾನಿಕ ತಳಹದಿಯಲ್ಲಿ ಉತ್ತರ ಕಂಡುಕೊಳ್ಳದ ವಿಸ್ಮಯಕಾರಿ ಘಟನೆಗಳನ್ನು ಕಾರ್ಯಕ್ರಮದ ನಿರ್ಮಾಪಕ ವೈ.ಎ.ನಾರಾಯಣಸ್ವಾಮಿ ಪ್ರತಿ ವಾರ ನಿಮ್ಮ ಮುಂದೆ ತರುತ್ತಾರೆ.

ಈಗ 'ಹೀಗೂ ಉಂಟೇ.!' ಕಾರ್ಯಕ್ರಮದ ಬಗ್ಗೆ ನಾವು ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೂ ಒಂದು ಕಾರಣ ಇದೆ. ಅದೇನಪ್ಪಾ ಅಂದ್ರೆ, 'ಕರ್ವ' ಚಿತ್ರದ ಕಥೆಗೂ 'ಹೀಗೂ ಉಂಟೇ.!' ಕಾರ್ಯಕ್ರಮಕ್ಕೂ ಲಿಂಕ್ ಇದೇ. ಆ ಲಿಂಕ್ ಏನು ಅನ್ನೋದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದ್ರೆ, 'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!' ಕಾರ್ಯಕ್ರಮ ನಡೆಯಲಿದೆ. [ಮೀಟರ್ ಇರುವವರಿಗೆ ಮತ್ತೊಂದು ಕೊಡುಗೆ 'ಕರ್ವ'.!]

tv9-program-heegu-unte-in-kannada-movie-karva

'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!' ಕಾರ್ಯಕ್ರಮದ ನಿರ್ಮಾಪಕ ವೈ.ಎ.ನಾರಾಯಣಸ್ವಾಮಿ ಕೂಡ ಅಭಿನಯಿಸಿದ್ದಾರೆ. ಅದರ ಎಕ್ಸ್ ಕ್ಯೂಸಿವ್ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ.

'6-5=2' ಚಿತ್ರದ ನಂತರ ನಿರ್ಮಾಪಕ ಕೃಷ್ಣಚೈತನ್ಯ ನಿರ್ಮಿಸುತ್ತಿರುವ ಚಿತ್ರ 'ಕರ್ವ'. ದೇವರಾಜ್, ತಿಲಕ್, ರೋಹಿತ್ ಮುಖ್ಯ ಭೂಮಿಕೆಯಲ್ಲಿರುವ 'ಕರ್ವ' ಚಿತ್ರಕ್ಕೆ ನವ ಪ್ರತಿಭೆ ನವನೀತ್ ಆಕ್ಷನ್ ಕಟ್ ಹೇಳಿದ್ದಾರೆ. ['ಕರ್ವ' ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಗೆ ಏನು ಕೆಲಸ?]

English summary
Karva, Another horror-thriller film from the makers of '6-5=2'. 'Karva' story line is based on Popular News Channel TV9 Kannada's program 'Heegu Unte'. The movie features Kannada Actor Devaraj, Tilak, Rohit and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada