»   » ಡಾ.ವಿಷ್ಣು 'ನಾಗರಹಾವು' ನೋಡಲು ತುದಿಗಾಲಲ್ಲಿ ನಿಂತಿರುವ 'ಸಿಂಗಂ' ಸೂರ್ಯ

ಡಾ.ವಿಷ್ಣು 'ನಾಗರಹಾವು' ನೋಡಲು ತುದಿಗಾಲಲ್ಲಿ ನಿಂತಿರುವ 'ಸಿಂಗಂ' ಸೂರ್ಯ

Posted By:
Subscribe to Filmibeat Kannada

ಡಾ.ವಿಷ್ಣುವರ್ಧನ್ ರವರ 201ನೇ ಸಿನಿಮಾ ಅಂತ ಹೇಳಲಾಗಿರುವ 'ನಾಗರಹಾವು' ಚಿತ್ರ ಅಕ್ಷರಶಃ ಟಾಕ್ ಆಫ್ ದಿ ಟೌನ್ ಆಗಿದೆ. ಬರೀ ಗಾಂಧಿನಗರ ಅಲ್ಲ, ಕರ್ನಾಟಕದ ಮೂಲೆ ಮೂಲೆಯಲ್ಲಿ ಮಾತ್ರ ಅಲ್ಲ. ಅಕ್ಕ-ಪಕ್ಕದ ಟಾಲಿವುಡ್, ಕಾಲಿವುಡ್ ನಲ್ಲೂ 'ನಾಗರಹಾವು' ಬುಸುಗುಡುವ ಸದ್ದು ಜೋರಾಗಿದೆ.

ನಿಮಗೆ ಗೊತ್ತಿರುವ ಹಾಗೆ, 'ನಾಗರಹಾವು' ಸಿನಿಮಾ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿದ್ಧವಾಗಿದೆ. ತಮಿಳು ಹಾಗೂ ಹಿಂದಿ ಭಾಷೆಗೆ ಡಬ್ ಆಗಲಿದೆ. ಈಗಾಗಲೇ 'ನಾಗರಹಾವು' ಚಿತ್ರದ ತೆಲುಗು ಹಾಗೂ ತಮಿಳು ಅವತರಣಿಕೆಯ ಟೀಸರ್ ಬಿಡುಗಡೆ ಆಗಿದೆ. ['ಬಾಹುಬಲಿ' ಚಿತ್ರಕ್ಕೆ ಸವಾಲ್ ಹಾಕಿದ ಕನ್ನಡದ 'ನಾಗರಹಾವು'.!]


ಕೇವಲ 52 ಸೆಕೆಂಡ್ ಇರುವ 'ನಾಗರಹಾವು' ಚಿತ್ರದ ಟೀಸರ್ ನೋಡಿ, ನಿಮ್ಮ ಕುತೂಹಲ ಇಮ್ಮಡಿ ಆಗಿರುವಂತೆ, ತಮಿಳು ನಟ ಸೂರ್ಯ ಕೂಡ 'ನಾಗರಹಾವು' ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.! ಮುಂದೆ ಓದಿ....


ನಂಬಲ್ವಾ ನೀವು.?

'ನಾಗರಹಾವು' ಚಿತ್ರವನ್ನು ನೋಡಲು ತಮಿಳು ನಟ ಸೂರ್ಯ ಕಾತರರಾಗಿರಲು ಹೇಗೆ ಸಾಧ್ಯ ಅಂತ ನೀವು ಬಾಯಿ ಮೇಲೆ ಬೆರಳಿಡುವ ಮುನ್ನ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ, ನಿಮಗೆ ಉತ್ತರ ಸಿಗಲಿದೆ.


ಸೂರ್ಯ ಟ್ವೀಟ್ ಮಾಡಿದ್ದಾರೆ.!

'ನಾಗರಹಾವು' ಚಿತ್ರವನ್ನ ಕಣ್ತುಂಬಿಕೊಳ್ಳಲು ಸೂರ್ಯ ಬಕಪಕ್ಷಿಯಂತೆ ಕಾಯ್ತಿದ್ದಾರೆ ಎಂಬುದು ಜಸ್ಟ್ ಪಬ್ಲಿಸಿಟಿ ಗಿಮಿಕ್ ಅಲ್ಲ. ಹಂಡ್ರೆಡ್ ಪರ್ಸೆಂಟ್ ಸತ್ಯ. ಬೇಕಾದ್ರೆ, ಕೆಲವೇ ಗಂಟೆಗಳ ಹಿಂದೆ ನಟ ಸೂರ್ಯ ಮಾಡಿರುವ ಟ್ವೀಟ್ ನತ್ತ ಒಮ್ಮೆ ಕಣ್ಣಾಡಿಸಿ....


ಸೂರ್ಯ ಟ್ವೀಟ್ ನೋಡಿ....

''ಸಿ.ಜಿ (ಕಂಪ್ಯೂಟರ್ ಗ್ರಾಫಿಕ್ಸ್) ನಿಂದ ಸೃಷ್ಟಿಯಾಗಿರುವ ಡಾ.ವಿಷ್ಣುವರ್ಧನ್ ರವರನ್ನ ತೆರೆಮೇಲೆ ಕಣ್ತುಂಬಿಕೊಳ್ಳಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಇಡೀ ಭಾರತದಲ್ಲಿಯೇ ಇಂತಹ ಪ್ರಯತ್ನ ಮೊಟ್ಟಮೊದಲು. ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು'' ಅಂತ ನಟ ಸೂರ್ಯ ಟ್ವೀಟ್ ಮಾಡಿದ್ದಾರೆ.


ಎಲ್ಲಾ ಅಭಿಮಾನಿಗಳ ಕಾತರಕ್ಕೂ ಇದೇ ಕಾರಣ.!

ಡಾ.ವಿಷ್ಣುವರ್ಧನ್ ನಮ್ಮನ್ನ ಅಗಲಿದ್ದರೂ, ತೆರೆಮೇಲೆ ಅವರನ್ನ ತರುವ ಸಾಹಸಕ್ಕೆ 'ನಾಗರಹಾವು' ಚಿತ್ರತಂಡ ಕೈಹಾಕಿದೆ. ಸಿ.ಜಿ ಹಾಗೂ ಹೆಡ್ ರೀಪ್ಲೇಸ್ಮೆಂಟ್ ತಂತ್ರಜ್ಞಾನದ ಮುಖಾಂತರ 'ನಾಗರಹಾವು' ಚಿತ್ರದಲ್ಲಿ ಹತ್ತು ನಿಮಿಷಗಳ ಕಾಲ ಡಾ.ವಿಷ್ಣುವರ್ಧನ್ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ. ಆ ಅಮೋಘ ಕ್ಷಣಗಳನ್ನ ಕಣ್ಣಾರೆ ನೋಡಲು, ವಿಷ್ಣು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ['ನಾಗರಹಾವು' ಬಗ್ಗೆ 'ನಾಗಿಣಿ' ರಮ್ಯಾ ಉದುರಿಸಿದ ಮಾತಿನ ಮುತ್ತು]


ಟೀಸರ್ ಸೂಪರ್ ಹಿಟ್.!

'ನಾಗರಹಾವು' ಚಿತ್ರದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಹಿಟ್ ಆಗಿದೆ. ಯೂಟ್ಯೂಬ್ ಒಂದರಲ್ಲೇ, ಒಂದುವರೆ ಲಕ್ಷಕ್ಕೂ ಅಧಿಕ ಮಂದಿ 'ನಾಗರಹಾವು' ಚಿತ್ರದ ಟೀಸರ್ ನೋಡಿ ಮೆಚ್ಚಿದ್ದಾರೆ. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]


ರಮ್ಯಾ ಪುನರಾಗಮನ.!

ವಿಶೇಷ ಅಂದ್ರೆ, ಇದೇ 'ನಾಗರಹಾವು' ಚಿತ್ರದಲ್ಲಿ ಲಕ್ಕಿ ಸ್ಟಾರ್ ಹಾಗೂ ಮಂಡ್ಯದ ಮಾಜಿ ಸಂಸದೆ ರಮ್ಯಾ 'ನಾಗಕನ್ಯೆ'ಯಾಗಿ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟ ದಿಗಂತ್ ಕೂಡ ಇದ್ದಾರೆ. [ಅಭಿಮಾನಿಗಳಿಗೆ ಅಚ್ಚರಿ: 'ನಾಗರಹಾವಿನ' ಹೆಡೆ ಮುಂದೆ ನಟಿ ರಮ್ಯಾ.!]


'ಅರುಂಧತಿ' ಖ್ಯಾತಿಯ ಕೋಡಿ ರಾಮಕೃಷ್ಣ

'ಅಮ್ಮೋರು', 'ಅರುಂಧತಿ' ಮುಂತಾದ ಫ್ಯಾಂಟಸಿ ಸಿನಿಮಾಗಳಿಗೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಹೆಸರುವಾಸಿ ಆಗಿರುವ ನಿರ್ದೇಶಕ ಕೋಡಿ ರಾಮಕೃಷ್ಣ 'ನಾಗರಹಾವು' ಚಿತ್ರದ ನಿರ್ದೇಶಕ. ಸದ್ಯದಲ್ಲೇ 'ನಾಗರಹಾವು' ಬಿಡುಗಡೆ ಆಗಲಿದೆ.


English summary
Kollywood Actor Surya (Suriya) has taken his twitter account to express his desire to watch Dr.Vishnuvardhan's 'Nagarahavu' (Tamil Version dubbed as 'Shivanagam') as for the first time in India, Late Legendary Actor Dr.Vishuvardhan's CGI version is created in this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada