»   » ಟ್ವಿಟ್ಟರಲ್ಲಿ Mr ಐರಾವತ, ಅರ್ಜುನ ಅಂಬಾರಿ ಉತ್ಸವ

ಟ್ವಿಟ್ಟರಲ್ಲಿ Mr ಐರಾವತ, ಅರ್ಜುನ ಅಂಬಾರಿ ಉತ್ಸವ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ 'Mr ಐರಾವತ' ಇಂದು ಗ್ರ್ಯಾಂಡ್ ಆಗಿ ತೆರೆ ಕಂಡಿದ್ದು ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್ ನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬರೋಬ್ಬರಿ 11 ತಿಂಗಳ ನಂತರ ಹಿಟ್ ನಿರ್ದೇಶಕ ಎ.ಪಿ ಅರ್ಜುನ್ ಅವರ 'Mr ಐರಾವತ' ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಖಾಕಿ ಡ್ರೆಸ್ಸ್ ನಲ್ಲಿ ಖಡಕ್ ಸೂಪರ್ ಕಾಪ್ ಪಾತ್ರದಲ್ಲಿ ಜಬರ್ದಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.


ಈಗಾಗಲೇ ಚಿತ್ರ ತೆರೆ ಕಂಡಿದ್ದು, ಥಿಯೇಟರ್ ಗಳಲ್ಲಿ ದರ್ಶನ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಅಲ್ಲದೇ ಈಗಾಗಲೇ ಚಿತ್ರ ವೀಕ್ಷಿಸಿದ ಕೆಲವಾರು ಅಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯಯಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ.[ಹೊಸ ದಾಖಲೆ ನಿರ್ಮಿಸಿದ ಚಾಲೆಂಜಿಂಗ್ ಸ್ಟಾರ್ 'Mr.ಐರಾವತ']


ಇನ್ನು ದರ್ಶನ್ ಅವರ 'Mr ಐರಾವತ' ಎಲ್ಲೆಡೆ ಸುದ್ದಿಯಾಗಲು ಪ್ರಮುಖ ಕಾರಣವೆಂದರೆ ತುಂಬಾ ದಿನಗಳ ನಂತರ ದರ್ಶನ್ ಖಾಕಿ ಖದರ್ ನಲ್ಲಿ ಮಿಂಚಿದ್ದಾರೆ. ಜೊತೆಗೆ ಪ್ರತಿಭಾವಂತ ನಟ ಪ್ರಕಾಶ್ ರೈ ಹಾಗೂ ದರ್ಶನ್ ಅವರು ಇದೇ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿದ್ದು, ಅವರಿಬ್ಬರ ಜುಗಲ್ ಬಂದಿ ನೋಡಲು ಪ್ರೇಕ್ಷಕರು ಕಾತರರಾಗಿದ್ದರು. ಇದೀಗ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ.['Mr.ಐರಾವತ' ಟಿಕೆಟ್ ಬೆಲೆ ಅಬ್ಬಬ್ಬಾ...ಅಷ್ಟೊಂದಾ.?!]


ಕರ್ನಾಟಕದಾದ್ಯಂತ ಸುಮಾರು ಸುಮಾರು 200 ಚಿತ್ರಮಂದಿರಗಳಲ್ಲಿ ತೆರೆ ಕಂಡ 'Mr ಐರಾವತ' ಎಲ್ಲೆಡೆ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ದರ್ಶನ್ ಹಾಗೂ ಬಾಲಿವುಡ್ ತಾರೆ ಊರ್ವಶಿ ರೌಟೇಲ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'Mr ಐರಾವತ'ನ ಟ್ವಿಟ್ಟರ್ ಲೈವ್ ರಿಪೋರ್ಟ್ ಗಾಗಿ ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..


ಕರ್ನಾಟಕದಾದ್ಯಂತ Mr ಐರಾವತ ಮೇನಿಯಾ

ಇಡೀ ಕರ್ನಾಟಕ ಸೇರಿದಂತೆ ಎಲ್ಲೆಡೆ ದರ್ಶನ್ ಅವರ Mr ಐರಾವತ ಮೇನಿಯಾ ಪ್ರಾರಂಭವಾಗಿದೆ. ಅಭಿಮಾನಿಗಳು ಸೇರಿದಂತೆ ಪ್ರೇಕ್ಷಕರಿಂದ ಚಿತ್ರ ಉತ್ತಮ ರೆಸ್ಪಾನ್ಸ್ ಗಳಿಸುತ್ತಿದೆ. ಸದ್ಯಕ್ಕೆ ಚಿತ್ರ ಉತ್ತಮ ಆರಂಭ ಪಡೆದುಕೊಂಡಿದೆ.[ಚಾಲೆಂಜಿಂಗ್ ಸ್ಟಾರ್ 'Mr ಐರಾವತ' ನ, ಸ್ಪೆಷಾಲಿಟಿ ಏನು?]


ಕೆ.ಕೆ.ಬಿ.ಡಿ.ಎ ಫ್ಯಾನ್ಸ್ ಕ್ಲಬ್

ಕರ್ನಾಟಕ ಕಲಾಭೂಷಣ ದರ್ಶನ್ ಫ್ಯಾನ್ಸ್ ಕ್ಲಬ್ ಅವರು Mr ಐರಾವತ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫಸ್ಟ್ ಎಂಟ್ರಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಫಸ್ಟ್ ಡೇ ಫಸ್ಟ್ ಶೋ ನೋಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.


ತುಮಕೂರು ಗಾಯತ್ರಿ ಥಿಯೇಟರ್

ತುಮಕೂರಿನ ಗಾಯತ್ರಿ ಥಿಯೇಟರ್ ನಲ್ಲಿ ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಅವರ ಐರಾವತ ಮೇನಿಯಾ ಹೀಗಿತ್ತು. ಚಿತ್ರಮಂದಿರವನ್ನು ಫುಲ್ ಕಟೌಟ್ ಮೂಲಕ ಅಲಂಕರಿಸಲಾಗಿತ್ತು.


ಚಾಮರಾಜನಗರ ಐರಾವತ ಮೇನಿಯಾ

ಚಾಮರಾಜನಗರದಲ್ಲಿ ದರ್ಶನ್ ಅಭಿಮಾನಿಗಳು ಇಡೀ ಚಿತ್ರಮಂದಿರವನ್ನು ಬ್ಯಾನರ್, ಪೋಸ್ಟರ್ ಕಟೌಟ್ ಗಳ ಮೂಲಕ ಅಲಂಕರಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.


ಸಿನಿಲೋಕ ರೇಟಿಂಗ್: 3.75/5

ಸಿನಿಲೋಕ ಡಾಟ್ ಕಾಮ್ ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ Mr ಐರಾವತ ಚಿತ್ರ ವೀಕ್ಷಿಸಿದ್ದು, ಚಿತ್ರಕ್ಕೆ 3.75/5 ಅಂಕಗಳನ್ನು ನೀಡಿದೆ. ಒಟ್ಟಾರೆ 'Mr ಐರಾವತ' ಪರ್ಫೆಕ್ಟ್ ಎಂರ್ಟಟೈನರ್ ಚಿತ್ರವಂತೆ.


ವಿಮರ್ಶಕ ಎಸ್ ಶ್ಯಾಮ್ ಪ್ರಸಾದ್

ದರ್ಶನ್ ಅವರ ಐರಾವತ ಇಂಟರ್ ವಲ್ ನಲ್ಲಿ ಗೊತ್ತಾಗದಂತೆ ಟ್ವಿಸ್ಟ್ ಪಡೆದುಕೊಳ್ಳುತ್ತದೆ ಎಂದು ಚಿತ್ರ ವೀಕ್ಷಿಸುತ್ತಿರುವ ಖ್ಯಾತ ವಿಮರ್ಶಕರಾದ ಎಸ್ ಶ್ಯಾಮ್ ಪ್ರಸಾದ್ ಅವರು ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ಮೂಲಕ ವ್ಯಕ್ತಪಡಿಸಿದ್ದಾರೆ.


ಸಿನಿಲೋಕ: ಚಿತ್ರಮಂದಿರ ತುಂಬಿದೆ

ಸದ್ಯಕ್ಕೆ ಗಾಂಧಿನಗರ ಸೇರಿದಂತೆ ಕರ್ನಾಟಕದಾದ್ಯಂತ ದರ್ಶನ್ ಅವರ Mr ಐರಾವತ ಚಿತ್ರದ ಬಗ್ಗೆಯೇ ಮಾತುಕತೆಗಳಾಗುತ್ತಿವೆ, ಜೊತೆಗೆ ಚಿತ್ರದ ಸ್ಪೆಷಲ್ ಶೋ ಸೇರಿದಂತೆ ಬೆಳಗಿನ ಶೋ, ಮಧ್ಯಾಹ್ನದ ಶೋ, ಸಂಜೆ ಹಾಗು ರಾತ್ರಿಯ ಶೋಗಳು ಕೂಡ ಹೌಸ್ ಫುಲ್ ಆಗಿವೆ


ಕನ್ನಡ ಫಿಲ್ಮ್ ಆಫಿಶೀಯಲ್ ಪೇಜ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ Mr ಐರಾವತ ಫಸ್ಟ್ ಹಾಫ್ ಸಖತ್ ತುಂಬಾ ಚೆನ್ನಾಗಿದೆ. ಪ್ರಕಾಶ್ ರೈ ನಟನೆ ಅದ್ಭುತ ಹಾಗೂ ಹಿದೆಂದೂ ಕಾಣಿಸಿಕೊಳ್ಳದಂತಹ ಸ್ಟೈಲಿಷ್ ಪಾತ್ರದಲ್ಲಿ ದರ್ಶನ್ ಮಿಂಚಿದ್ದಾರೆ.


ಅಭಿಮಾನಿಯೊಬ್ಬರ, ಅಭಿಮಾನ

Mr ಐರಾವತ ಚಿತ್ರದ ಮೇನಿಯಾ ಹೇಗಿದ ಅಂದ್ರೆ ಅಭಿಮಾನಿಯೊಬ್ಬ ದರ್ಶನ್ ಮೇಲಿರುವ ಅಭಿಮಾನವನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ.


English summary
Twitter reaction to 'Mr Airavatha' film which got released on 01 October. Directed by AP Arjun, 'Mr Airavatha' stars Kannada actor Darshan, Actress Urvashi Rautela in the lead roles.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X