For Quick Alerts
  ALLOW NOTIFICATIONS  
  For Daily Alerts

  ಅಮೀರ್ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಸ್ಯಾಂಡಲ್ ವುಡ್ ಸ್ಟಾರ್ಸ್

  By Suneetha
  |

  ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅವರು ಆಡಿದ ಮಾತುಗಳಿಗೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

  ಅಂದಹಾಗೆ ಅಮೀರ್ ಖಾನ್ ಅವರ ಈ ವಿವಾದಾತ್ಮಕ ಮಾತುಗಳಿಗೆ ಕೆಲವರು ಟೀಕಾಪ್ರಹಾರ ಮಾಡಿ ಜರಿದರೆ, ಇನ್ನು ಕೆಲವು ಬಾಲಿವುಡ್ ನ ಮಹನೀಯರು ಅವರ ಬೆಂಬಲಕ್ಕೆ ನಿಂತು ಇನ್ನು ಧೈರ್ಯ ತುಂಬಿದ್ದಾರೆ.[ಅಸಹಿಷ್ಣುತೆ ಬಗ್ಗೆ ಸೊಲ್ಲೆತ್ತಿದ್ದ ಅಮೀರ್ ಗೆ ಬಹಿರಂಗ ಪತ್ರ]

  ಆದರೆ ನಮ್ಮ ಸ್ಯಾಂಡಲ್ ವುಡ್ ನ ಕನ್ನಡಾಭಿಮಾನಿಗಳು ಹಾಗೂ ದೇಶಾಭಿಮಾನಿಗಳಾದ ಚಂದನವನದ ಕೆಲವು ಸ್ಟಾರ್ ನಟರೂ ಇದನ್ನು ತೀವ್ರವಾಗಿ ವಿರೋಧಿಸಿದ್ದು, ಅಮೀರ್ ಖಾನ್ ಹೇಳಿಕೆ ಬಗ್ಗೆ ತೀವ್ರವಾದ ಟೀಕಾ ಪ್ರಹಾರ ಮಾಡಿದ್ದಾರೆ.

  ದೆಹಲಿಯಲ್ಲಿ ಸೋಮವಾರ ನಡೆದ ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮೀರ್ ಖಾನ್ ಅವರು, ದೇಶದಲ್ಲಿನ ಅಸಹಿಷ್ಣುತೆ, ಅಲ್ಪಸಂಖ್ಯಾತರು, ವಿಚಾರವಾದಿಗಳ ಮೇಲೆ ಆಗುತ್ತಿರುವ ಹಲ್ಲೆ ಹಾಗೂ ಪ್ಯಾರಿಸ್ ನಲ್ಲಿ ನಡೆದ ಭೀಕರ ದಾಳಿಗಳ ಕುರಿತು ಮಂಡಿಸಲಾಗಿರುವ ಅಭಿಪ್ರಾಯಗಳ ಬಗ್ಗೆ ಸದ್ಯಕ್ಕೆ ಎಲ್ಲಾ ಕಡೆ ಹಲವು ಚರ್ಚೆಗಳು ಏರ್ಪಟ್ಟಿವೆ. ಇದಕ್ಕೆ ಸಾಮಾಜಿಕ ಜಾಲತಾಣಗಳು ಹೊರತಾಗಿಲ್ಲ.[ಶಾರುಖ್, ಸಲ್ಮಾನ್ ನಂತರ ಅಮೀರ್ ಗೆ ಅಸಹಿಷ್ಣುತೆ ಬಿಸಿ ಏಕೆ?]

  ಇನ್ನು ಈ ವಿಚಾರವಾಗಿ ನಮ್ಮ ಸ್ಯಾಂಡಲ್ ವುಡ್ ಕ್ಷೇತ್ರದ ಸ್ಟಾರ್ ನಟರು ಕೂಡ ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡು ಎಲ್ಲರನ್ನು ಚಿಂತನೆಗೆ ಹಚ್ಚಿದ್ದಾರೆ. ಯಾರು ಆ ಸ್ಟಾರ್ ನಟರು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

  ನವರಸ ನಾಯಕ ಜಗ್ಗೇಶ್

  ನವರಸ ನಾಯಕ ಜಗ್ಗೇಶ್

  'ಭಾರತದಲ್ಲಿ ಹುಟ್ಟಿದ್ದು ನನ್ನ ಪುಣ್ಯ. ನನ್ನ ದೇಶದ ಬಗ್ಗೆ ಜನ್ಮ ಕೊಟ್ಟವರು ಜರಿದರು ನನ್ನ ಶತ್ರುಗಳೇ! ಅಂದ ಮೇಲೆ ಉಂಡು ಬೆಳೆದವರು ಜರಿದರೇ ಬಿಡುತ್ತೇನೆಯೇ?, ಅಸಹನೆ ವ್ಯಕ್ತಪಡಿಸುವೆ' ಎಂದು ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಅವರು ಅಮೀರ್ ಖಾನ್ ಹೇಳಿಕೆಗೆ ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ನಟ ಜಗ್ಗೇಶ್

  ಸಹ ನಿರ್ದೇಶಕಿ, ಮನೆಮುರುಕಿ, ಸ್ಟಾರ್ ಪತ್ನಿ, ಸೆಲೆಬ್ರಿಟಿ, ಡೋಂಗಿ, ನಾಟಕ ಕಂಪೆನಿ, ಪಬ್ಲಿಸಿಟಿ ಗಿಮಿಕ್ ಮತ್ತು ಕಾಂಗ್ರೆಸ್ ಏಜೆಂಟ್ ಎಂದು ಅಮೀರ್ ಮತ್ತು ಅಮೀರ್ ಪತ್ನಿಯನ್ನು ಈ ರೀತಿಯಾಗಿ ನಟ ಜಗ್ಗೇಶ್ ಅವರು ಜರಿದಿದ್ದಾರೆ.

  ರಿಯಲ್ ಸ್ಟಾರ್ ಉಪ್ಪಿ

  ಅಮೀರ್ ಖಾನ್ ಮತ್ತು ಶಾರುಖ್ ಖಾನ್ ನೀವಿಬ್ಬರು ಚಿಂತಿಸಬೇಡಿ, ಮುಂದಿನ ದಿನಗಳಲ್ಲಿ ನಿಮ್ಮ ಸಿನಿಮಾಗಳು ಸೂಪರ್ ಹಿಟ್ ಆಗುತ್ತವೆ. ಸಹಿಷ್ಣುತೆಯ ಬಗ್ಗೆ ಈಗಾಗಲೇ ಭಾರತೀಯರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ, ಅದನ್ನು ನೀವೇನು ಸಾಬೀತು ಪಡಿಸುವುದು. ಎಂದು ಉಪ್ಪಿ ಅವರು ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

  ರಿಯಲ್ ಸ್ಟಾರ್ ಉಪೇಂದ್ರ

  ಅಮೀರ್ ಖಾನ್ ಅವರೇ ನೀವು ಅಸಹಿಷ್ಣುತೆಗೆ ಹೆದರಿ ಓಡಿಹೋಗುವುದರಿಂದ ನೀವು ಹೇಡಿ ಎಂದು ಕರೆಸಿಕೊಳ್ಳುತ್ತೀರಿ. ಆದರೆ ನೀವು ಇನ್ನು ಮುಂದೆ ನನಗೆ ಹಾಗೂ ನನ್ನ ಹಾಗೆ ಇರುವ ಅನೇಕ ಅಭಿಮಾನಿಗಳಿಗೆ ನೀವು ಒಬ್ಬ ನಾಯಕ ಎಂದು ಹೇಳಲು ವಿಷಾದವಾಗುತ್ತದೆ. ಎಂದು ಉಪ್ಪಿ ಅಮೀರ್ ವಿರುದ್ಧ ಗುಡುಗಿದ್ದಾರೆ.

  ನಟ ಉಪೇಂದ್ರ

  ಪ್ರೀತಿಯ ಅಮೀರ್ ಖಾನ್ ನೀವು ಅಸಹಿಷ್ಣುತೆ ಬಗ್ಗೆ ಇಷ್ಟೊಂದು ಮಾತನಾಡುವವರು, ನೀವೇ ನಾಯಕತ್ವ ತೆಗೆದುಕೊಂಡು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿ. ಆವಾಗ ನಾನು ಅಗತ್ಯವಿದ್ದರೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಎಂದು ರಿಯಲ್ ಸ್ಟಾರ್ ಉಪ್ಪಿ ಅಮೀರ್ ಖಾನ್ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ.

  ನಿರ್ಮಾಪಕಿ ಶಿಲ್ಪಾ ಗಣೇಶ್

  ಅಮೀರ್ ಖಾನ್ ಅವರೇ ನೀವು ಭಾರತ ದೇಶವನ್ನು ಬಿಟ್ಟು ಹೋಗುವಾಗ ನಿಮ್ಮನ್ನು ಸೂಪರ್ ಸ್ಟಾರ್ ಮಾಡಿದ ತಪ್ಪಿಗಾಗಿ, ನಾವು ಭಾರತೀಯರು ನಿಮ್ಮನ್ನು ಬೀಳ್ಕೋಡಲು ವಿಮಾನ ನಿಲ್ದಾಣಕ್ಕೆ ಬರಬೇಕಾಗುತ್ತದೆ. ಎಂದು ಗೋಲ್ಡನ್ ಸ್ಟಾರ್ ಅವರ ಧರ್ಮಪತ್ನಿ ಶಿಲ್ಪಾ ಗಣೇಶ್ ಅವರು ಸಖತ್ ಟಾಂಗ್ ಕೊಟ್ಟು ಟ್ವೀಟ್ ಮಾಡಿದ್ದಾರೆ.

  ನಟ ಸೂರಜ್ ಗೌಡ

  ವಿಚಿತ್ರವಾಗಿದೆ, ಮುಂಬೈ ಧಾಳಿ ಆದ ಸಂದರ್ಭದಲ್ಲಿ ಮತ್ತು ಸರಣಿ ರೈಲು ಸ್ಪೋಟ ಆದ ಸಂದರ್ಭದಲ್ಲೂ ಅಮೀರ್ ಖಾನ್ ಅವರಿಗೆ ಅಲ್ಲಿ ಸೇಫ್ ಅಲ್ಲ ಅಂತ ಅನಿಸಿತ್ತು. ಇದೀಗ ಈ ತರ ಹೇಳಿಕೆ ನೀಡುವ ಮೂಲಕ ಅಮೀರ್ ಖಾನ್ ಅವರು ನಿಜ ಜೀವನದಲ್ಲೂ 'ಗಜನಿ' ತರಾನೇ ಆಡುತ್ತಿದ್ದಾರೆ. ಎಂದು ಸ್ಯಾಂಡಲ್ ವುಡ್ ನ ಚೊಚ್ಚಲ ನಟ 'ಮದುವೆಯ ಮಮತೆಯ ಕರೆಯೋಲೆ' ನಾಯಕ ಸೂರಜ್ ಗೌಡ ಅವರು ಟ್ವಿಟ್ಟರ್ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.

  ನಟಿ ಮಾಳವಿಕಾ ಅವಿನಾಶ್

  ಕತಾರ್ ನಲ್ಲಿ ವಾಸ್ತವ್ಯ ಹೂಡಿದ್ದ ಒಬ್ಬ ಕನ್ನಡಿಗ ಮಹಿಳೆ ಹೇಳುವ ಪ್ರಕಾರ 1.8 ಮಿಲಿಯನ್ ಜನಸಂಖ್ಯೆಯಲ್ಲಿ 6 ಲಕ್ಷ ಮಂದಿ ಕತಾರಿಗಳಿದ್ದರೂ ಕೂಡ ಅವರಿಗೆ ಅಲ್ಲಿನ ಪೌರತ್ವ ಸಿಗುತ್ತಿಲ್ಲವಂತೆ. ಆದರೆ ನಮ್ಮ ವಿಶಾಲ ಭಾರತ ದೇಶದಲ್ಲಿ ಎಮ್ ಎಫ್ ಹುಸೇನ್ ನಂತವರಿಗೂ ಪೌರತ್ವ ಸಿಕ್ಕಿರುವಾಗ, ಅಮೀರ್ ಖಾನ್ ಅವರು ಭಾರತ ದೇಶದಲ್ಲಿನ ಅಸಹಿಷ್ಣುತೆ ಬಗ್ಗೆ ಮಾತನಾಡುವುದು ಎಷ್ಟು ಸರಿ. ಎಂದು ನಟಿ ಮಾಳವಿಕಾ ಅವಿನಾಶ್ ಅವರು ಗುಡುಗುತ್ತಾರೆ.

  ನಟ ನವೀನ್ ಕೃಷ್ಣ

  ನಟ ನವೀನ್ ಕೃಷ್ಣ

  ಅಪ್ಲಿಕೇಶನ್ ಅನ್ ಇನ್ ಸ್ಟಾಲ್ ಮಾಡಿದಷ್ಟು ಸುಲಭವಾಗಿ ಒಬ್ಬ ಕಲಾವಿದ ಅಂತ ನಿಮ್ಮನ್ನು ಅನ್ ಇನ್ ಸ್ಟಾಲ್ ಮಾಡೋಕೆ ಆಗ್ತಿಲ್ಲಾ. ತಪ್ಪು ಮಾತಾಡಿದ್ರಿ ಅಮೀರ್ ಜೀ. ಎಂದು ನಟ ನವೀನ್ ಕೃಷ್ಣ ಅವರು ತಮ್ಮ ಆಕ್ರೋಶವನ್ನು ಈ ತರ ವ್ಯಕ್ತಪಡಿಸಿದ್ದಾರೆ.

  ವೈರಸ್ ವೀರು

  ವೈರಸ್ ವೀರು

  ವೈರಸ್ ವೀರು ಅವರು ಅಮೀರ್ ಖಾನ್ ಅವರು ಅಸಹಿಷ್ಣುತೆ ಬಗ್ಗೆ ಮಾತಾಡಿದ್ದಕ್ಕಾಗಿ ತಮ್ಮ ಅಭಿಪ್ರಾಯವನ್ನು ಈ ರೀತಿಯಾಗಿ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.

  English summary
  Sandalwood stars have come out in the open against Bollywood star Aamir Khan's statements yesterday about historians, writers and academicians returning their awards. But Sandalwood stars are concentrating on Khan's comments about his wife saying if they need to leave India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X