»   » ಕರ್ನಾಟಕದೆಲ್ಲೆಡೆ 'ವಜ್ರಕಾಯ' ಶಿವಣ್ಣನ ಗುಣಗಾನ

ಕರ್ನಾಟಕದೆಲ್ಲೆಡೆ 'ವಜ್ರಕಾಯ' ಶಿವಣ್ಣನ ಗುಣಗಾನ

Posted By:
Subscribe to Filmibeat Kannada

ನಿರ್ದೇಶಕ ಎ ಹರ್ಷ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಜೋಡಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಫಲವಾಗಿದೆ. ಶುಕ್ರವಾರ ತೆರೆ ಕಂಡಿರುವ 'ವಜ್ರಕಾಯ' ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ನಟಿಯರಾದ ಕಾರುಣ್ಯ ರಾಮ್, ನಭಾ ನಟೇಶ್ ಹಾಗೂ ಶುಭ್ರಾ ಆಯ್ಯಪ್ಪ ಅವರು ಮೊದಲ ಬಾರಿಗೆ ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಪುಳಕಿತರಾಗಿದ್ದಾರೆ.

ಬೆಂಗಳೂರಿನ ಸಂತೋಷ್ ಚಿತ್ರಮಂದಿರದ ಸುತ್ತಾಮುತ್ತಾ ವಜ್ರಕಾಯನ ಭಜನೆ ಆರಂಭವಾಗಿದೆ. ಟಿಕೆಟ್ ಸಿಗದ ಅಭಿಮಾನಿಗಳು ಕ್ಯೂ ನಿಂತು ಮುಂದಿನ ಶೋಗೆ ಚಿತ್ರಮಂದಿರದೊಳಗೆ ಹೋಗುವ ನಿರೀಕ್ಷೆಯಲ್ಲಿದ್ದಾರೆ. [ಶಿವಣ್ಣನ ವಜ್ರಕಾಯ ಏಕೆ ನೋಡಬೇಕು?]

ಟಿಕೆಟ್ ಸಿಕ್ಕವರು ಚಿತ್ರಮಂದಿರದಲ್ಲಿ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ. ಮೈಸೂರು, ತುಮಕೂರಿನ ಚಿತ್ರಮಂದಿರಗಳಲ್ಲೂ ಶಿವರಾಜ್ ಕುಮಾರ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿರುವ ವರದಿಗಳು ಬಂದಿವೆ.

ಸುದೀಪ್ ಅವರ ರನ್ನ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕ ಮೇಲೆ ಕನ್ನಡ ಚಿತ್ರರಂಗ ಮತ್ತೊಮ್ಮೆ ಪುಟಿದೇಳುವ ಆಶಾಭಾವನೆ ಹುಟ್ಟುಕೊಂಡಿತ್ತು. ಈಗ ಶಿವರಾಜ್ ಕುಮಾರ್ ಅವರ ಸ್ವಮೇಕ್ ಚಿತ್ರ ವಜ್ರಕಾಯ ಟ್ರ್ರೆಂಡಿಂಗ್ ಗಮನಿಸಿದರೆ ಶುಭ ಕಾಲ ಬಂದೈತೆ ಎಂದು ಹಾಡಬಹುದು. ಮೊದಲ ದಿನದ ಶೋ, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಬಗ್ಗೆ ಇನ್ನಷ್ಟು ವಿವರ ಮುಂದಿದೆ.

ಹಲವು ವಿಶೇಷಗಳನ್ನು ಒಂದುಗೂಡಿಸಿದ ಹರ್ಷ

ಹರ್ಷ ಹಾಗೂ ಶಿವರಾಜ್ ಅವರ ಭಜರಂಗಿ ಚಿತ್ರದ ಯಶಸ್ಸಿನ ನಂತರ ವಜ್ರಕಾಯ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳು ಹುಟ್ಟಿಕೊಂಡಿದ್ದು ಸಹಜ. ಅದಕ್ಕೆ ತಕ್ಕಂತೆ ಕಥೆ, ಶೂಟಿಂಗ್, ನೃತ್ಯ, ನಟಿಯರು, ಸಾಹಸ ಎಲ್ಲವೂ ಸರಿಯಾಗಿ ಹರ್ಷ ಒಂದುಗೂಡಿಸಿದ್ದಾರೆ. ಶಿವಣ್ಣನ ಎನರ್ಜಿಗೆ ಪ್ರೇಕ್ಷಕ ಫಿದಾ ಆಗಿದ್ದಾನೆ.

ಮೂವರು ನಟಿಯರಿಗೆ ಪ್ರಮುಖ ಪಾತ್ರ

ಕರ್ನಾಟಕದವರೇ ಆದ ಮೂವರು ನಟಿಯರಿಗೆ ಒಂದೇ ಚಿತ್ರದಲ್ಲಿ ಉತ್ತಮ ಅವಕಾಶ ನೀಡುವ ಮೂಲಕ ಹರ್ಷ ಹಾಗೂ ಶಿವಣ್ಣ ಈ ಮೂವರಿಗೆ ಒಳ್ಳೆ ಬ್ರೇಕ್ ನೀಡುತ್ತಿದ್ದಾರೆ. ಚಿತ್ರದಲ್ಲಿ ಕಾರುಣ್ಯ, ಶುಭ್ರಾ ಹಾಗೂ ನಭಾ ಜೊತೆ ಶಿವರಾಜ್ ಕುಮಾರ್.

ಸಂತೋಷ್ ಚಿತ್ರಮಂದಿರದಲ್ಲಿ ನಟಿಯರು

ಸಂತೋಷ್ ಚಿತ್ರಮಂದಿರದಲ್ಲಿ ಮೊದಲ ಶೋ ನೋಡಲು ಬಂದ ನಟಿಯರಾದ ಕಾರುಣ್ಯ ರಾಮ್, ಶುಭ್ರಾ ಅಯ್ಯಪ್ಪ ಹಾಗೂ ನಭಾ ನಟೇಶ್.

ಇಂಟರ್ವೆಲ್ ತನಕದ ರಿಪೋಟ್

ಇಂಟರ್ವೆಲ್ ತನಕದ ಚಿತ್ರ ಹೇಗಿದೆ ಎಂದು ರಿಪೋಟ್ ನೀಡುತ್ತಿರುವ ವೆಬ್ ಸೈಟ್ಸ್, ಸಿನಿಪ್ರಿಯರು.

ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳು

ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ದಂಡು.

ಇಲ್ಲಿ ತನಕ ಸಿನಿಮಾ ಹೇಗಿದೆ

ಇಲ್ಲಿ ತನಕ ಸಿನಿಮಾ ಹೇಗಿದೆ ಎಂದು ಪ್ರೇಕ್ಷಕರ ಅಭಿಪ್ರಾಯ.

ಚೆನ್ನೈನಲ್ಲೂ ವಜ್ರಕಾಯ ಸಿನಿಮಾ ಪ್ರದರ್ಶನ

ಚೆನ್ನೈನಲ್ಲೂ ವಜ್ರಕಾಯ ಸಿನಿಮಾ ಪ್ರದರ್ಶನ ಭಾಗ್ಯ.

ತುಮಕೂರಿನಲ್ಲಿ ವಜ್ರಕಾಯ ಕ್ರೇಜ್

ತುಮಕೂರಿನ ಚಿತ್ರಮಂದಿರವೊಂದರಲ್ಲಿ ವಜ್ರಕಾಯ ಚಿತ್ರದ ಕ್ರೇಜ್ ಹೀಗಿತ್ತು.

ನಟ ಶಿವಕಾರ್ತಿಕೇಯನ್ ರಿಂದ ಶುಭ ಹಾರೈಕೆ

ತಮಿಳಿನ ಜನಪ್ರಿಯ ನಟ ಶಿವಕಾರ್ತಿಕೇಯನ್ ರಿಂದ ಶುಭ ಹಾರೈಕೆ

ಮೈಸೂರಿನ ಚಿತ್ರಮಂದಿರದಲ್ಲಿ ಕ್ರೇಜ್ ಹೇಗಿದೆ

ಮೈಸೂರಿನ ಚಿತ್ರಮಂದಿರದಲ್ಲಿ ಕ್ರೇಜ್ ಹೇಗಿದೆ ಎಂಬುದನ್ನು ನೋಡಿ...

English summary
Century Star Shivarajkumar and director A Harsha's much awaited movie Vajrakaya is getting positive reponse from all over the state. The movie produced by CR Manohar and CN Gopi released today. Nabha Natesh, Karunya Rama and Subhra Aiyappa are the leading lass in the movie. Here are twitter reaction and first day first show report.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada