For Quick Alerts
  ALLOW NOTIFICATIONS  
  For Daily Alerts

  ಭಯಂಕರ ಬ್ಯುಸಿಯಾದ ಹೆಲ್ಮೆಟ್ ಹುಡುಗಿ ಶ್ರದ್ಧಾ ಶ್ರೀನಾಥ್

  By Suneetha
  |

  ಚೊಚ್ಚಲ ಚಿತ್ರದ ಯಶಸ್ಸಿನಿಂದ ಬೀಗುತ್ತಿರುವ ನಟಿ ಶ್ರಧ್ಧಾ ಶ್ರೀನಾಥ್ ಅವರು ತಮ್ಮ 'ಯು-ಟರ್ನ್' ಚಿತ್ರದ ಮೂಲಕ ಹೆಲ್ಮೆಟ್ ಹುಡುಗಿ ಅಂತಲೇ ಕರೆಸಿಕೊಳ್ಳುತ್ತಾರೆ. ಇದೀಗ ಮೊದಲ ಚಿತ್ರದ ಯಶಸ್ಸಿನ ಪರಿಣಾಮ ಶ್ರದ್ಧಾ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸಮಯ ಇಲ್ಲದಂತಾಗಿದೆ.

  ನಟ ನಿವಿನ್ ಪೌಲ್ ಅವರ ಜೊತೆ ಇನ್ನೂ ಹೆಸರಿಡದ ತಮಿಳು ಚಿತ್ರದಲ್ಲಿ ಶ್ರದ್ಧಾ ನಟಿಸುತ್ತಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ. [ಕಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಪಡೆದುಕೊಂಡ ಶ್ರದ್ಧಾ ಶ್ರೀನಾಥ್] ಮಾತ್ರವಲ್ಲದೇ ನಿರ್ದೇಶಕ ಸಿಂಪಲ್ ಸುನಿ ಅವರ ಹೊಸ ಚಿತ್ರ 'ಆಪರೇಷನ್ ಅಲಮೇಲಮ್ಮ' ಸೆಟ್ ಗೆ ಸೇರಿಕೊಂಡಿದ್ದಾರೆ.

  'ಥ್ರಿಲ್ಲರ್-ಪ್ರೀತಿ ಮತ್ತು ನಿಗೂಢತೆಯ ಜೊತೆಗೆ ಹಾಸ್ಯವುಳ್ಳ 'ಆಪರೇಷನ್ ಅಲಮೇಲಮ್ಮ' ಚಿತ್ರ ಒಂದು ಅಪಹರಣದ ಪ್ರಕರಣವನ್ನು ಹೊಂದಿದೆ. ಈ ಚಿತ್ರದ ಮೂಲಕ ರಂಗಭೂಮಿ ಹಾಗೂ ಕಿರುತೆರೆ ಕಲಾವಿದ ಮನೀಶ್ ರಿಷಿ ನಾಯಕ ನಟನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.[ಅಲಮೇಲಮ್ಮನಿಗೆ ಆಪರೇಶನ್ ಮಾಡಲು ಹೊರಟ ಸಿಂಪಲ್ ಸುನಿ]

  ಈಗಾಗಲೇ 'ಊರ್ವಿ' ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಟ್ಟಿರುವ ಶ್ರದ್ಧಾ ಶ್ರೀನಾಥ್ ಅವರು ಸಿಂಪಲ್ ಸುನಿ ಅವರ ಜೊತೆ ಕೆಲಸ ಮಾಡಬೇಕೆಂದು ಹಲವು ದಿನಗಳಿಂದ ಕಟ್ಟಿಕೊಂಡಿದ್ದ ಕನಸು ನನಸಾಗಿದ್ದಕ್ಕೆ ಫುಲ್ ಖುಷ್ ಆಗಿದ್ದಾರೆ.

  English summary
  'U-Turn' fame kannada actress Shraddha Srinath has just wrapped up the first schedule of her yet to be titled Tamil movie with Nivin Pauly. And she will be joining director Suni's new kannada film 'Operation Alamelamma'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X