Don't Miss!
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯುಎಫ್ಓ ಬೆಂಬಲದೊಂದಿಗೆ 'ಕೆಜಿಎಫ್', 'ಚಾರ್ಲಿ'ಯನ್ನು 'ಚೇಸ್' ಮಾಡುತ್ತಿದೆ 'ಚೇಸ್'!
ಚೇಸ್ ಸಿನಿಮಾ ಮೊದಲಿನಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಒಂದಷ್ಟು ಮನಸ್ಸುಗಳ ಕಾಯುವಿಕೆಗೂ ಕಾರಣವಾಗಿದೆ. ಇದಕ್ಕೆಲ್ಲಾ ಕಾರಣ ಸಿನಿಮಾದ ಪ್ರತಿ ಎಳೆಯಲ್ಲೂ ಇರುವ ಹೊಸತನ ಮತ್ತು ಗಟ್ಟಿತನ. ಸಿನಿಮಾದ ಬಗ್ಗೆ ಸಾಕಷ್ಟು ಕಾಯುವಿಕೆ ವ್ಯಕ್ತವಾಗಿದೆ. ಇದು ನಿನ್ನೆ ಮೊನ್ನೆಯ ಕಥೆಯಲ್ಲ. ಶುರುವಾಗಿ ಎರಡು ವರ್ಷಗಳೇ ಕಳೆದಿದೆ.
ಕೊರೊನಾ ಸಮಸ್ಯೆಯ ನಡುವೆ ಎಲ್ಲಾ ಸಿನಿಮಾಗಳಂತೆ ಚೇಸ್ ಕೂಡ ನಲುಗಿತ್ತು. ಆದರೆ ಸಿನಿಮಾದೊಳಗಿನ ತಾಕತ್ತು ಇಂದಿಗೂ ನೋಡುವ ಕುತೂಹಲವನ್ನು ಕಾಪಾಡಿಕೊಂಡು ಬಂದಿದೆ. ಹಾಡುಗಳ ಮೂಲಕ ಒಂದಷ್ಟು ಭರವಸೆಯನ್ನು ಮೂಡಿಸಿದ್ದ ಚೇಸ್ ಇದೇ ತಿಂಗಳ 15ಕ್ಕೆ ತೆರೆಗೆ ಬರುತ್ತಿದೆ. ಅದರೊಂದಿಗೆ ಹೊಸ ದಾಖಲೆಯನ್ನು ಬರೆದಿದೆ.
ಚೇಸ್ ಸಿನಿಮಾದ ವಿತರಣ ಹಕ್ಕನ್ನು ಯುಎಫ್ಓ ಪಡೆದುಕೊಂಡಿದೆ. ಈ ಸಂಸ್ಥೆ ಸ್ಟ್ರೀಮಿಂಗ್ ಹಾಗೂ ಡಿಸ್ಟ್ರಿಬ್ಯೂಷನ್ ನಲ್ಲಿ ದೊಡ್ಡ ಹೆಸರನ್ನೇ ಮಾಡಿದೆ. ಆದರೆ ಇದೀಗ ವಿತರಣಾ ಕಾರ್ಯಕ್ಕೂ ಕೈ ಹಾಕಿದೆ. ಅದು ಚೇಸ್ ಮೂಲಕ ಎಂಬುದು ಖುಷಿಯ ವಿಚಾರ. ಮೊದಲ ಬಾರಿಗೆ ಯುಎಫ್ಓ ಕರ್ನಾಟಕಕ್ಕೆ ಪದಾರ್ಪಣೆ ಮಾಡಿದ್ದು, ಇದು ಕನ್ನಡಿಗರ ಪಾಲಿನ ಖುಷಿಯ ವಿಚಾರವಾಗಿದೆ. ಚೇಸ್ ಹಕ್ಕನ್ನು ದೇಶಾದ್ಯಂತ ವಿತರಿಸುವ ಹಕ್ಕು ಪಡೆಯುವ ಮೂಲಕ, ಕನ್ನಡಿಗರ ಮನಗೆಲ್ಲಲು ಹೊರಟಿದೆ.
ಚೇಸ್ ಸಿನಿಮಾ ಹೇಳಿ ಕೇಳಿ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಹೊಸತುಗಳನ್ನು ಹೊಂದಿರುವಂತ ಸಿನಿಮಾ. ಈ ಸಿನಿಮಾವನ್ನು ನೋಡಿದ ಯುಎಫ್ಓ ಅಧಿಕಾರಿಗಳು ಫಿದಾ ಆಗಿದ್ದಾರೆ. ಸಿನಿಮಾದೊಳಗಿನ ಗಟ್ಟಿತನ, ಒಂದಷ್ಟು ಸಂದೇಶಗಳಿಗೆ ಮನಸೋತು ಸಿನಿಮಾ ವಿತರಿಸುವ ಕೆಲಸಕ್ಕೆ ಕೈ ಹಾಕಿದೆ. ಇದೇ ತಿಂಗಳ 15 ರಂದು ಬೆಳ್ಳಿ ಪರದೆ ಮೇಲೆ ಅನಾವರಣವಾಗಲಿದೆ.

ಚೇಸ್ ಮೇಲೆ ಅಪಾರ ಪ್ರೀತಿ ಅಪಾರ ಪ್ರೀತಿ ಇಟ್ಟು ವಿಲೋಕ್ ಶೆಟ್ಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್, ಅರವಿಂದ್ ರಾವ್ ಮುಂತಾದವರ ಬೃಹತ್ ತಾರಾಗಣವಿದೆ. ಮ್ಯಾಕ್ಸ್ ಎಂಬ ಶ್ವಾನ ಕೂಡ ಈ ಸಿನಿಮಾದಲ್ಲಿ ಒಂದೊಳ್ಳೆ ಪಾತ್ರದಲ್ಲಿ ನಟಿಸಿದೆ.