»   » 'ಉಗ್ರಂ' ರೀಮೇಕ್ ರೈಟ್ಸ್ ನಾಟ್ ಫಾರ್ ಸೇಲ್

'ಉಗ್ರಂ' ರೀಮೇಕ್ ರೈಟ್ಸ್ ನಾಟ್ ಫಾರ್ ಸೇಲ್

Posted By:
Subscribe to Filmibeat Kannada

ಸದ್ದಿಲ್ಲದೇ ಸೈಲೆಂಟಾಗಿ ತೆರೆಗೆ ಬಂದು, ಇಡೀ ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಅಬ್ಬರಿಸಿ ಬೊಬ್ಬಿರಿದಿದ್ದ ಸಿನಿಮಾ 'ಉಗ್ರಂ'. ತೆರೆಮೇಲೆ ಉಗ್ರಂ ಸಿನಿಮಾ ಎಷ್ಟು ಸದ್ದು ಮಾಡ್ತೋ, ಅಷ್ಟೇ ಸುದ್ದಿಯನ್ನ ಮಾಡಿದ್ದು ಚಿತ್ರದ ಕಲೆಕ್ಷನ್, ಸ್ಯಾಟಲೈಟ್ ರೈಟ್ಸ್ ಮತ್ತು ರೀಮೇಕ್ ರೈಟ್ಸ್ ವಿಷಯದಲ್ಲಿ.

ಸ್ಯಾಂಡಲ್ ವುಡ್ ನಲ್ಲಿ 'ಉಗ್ರಂ' ಸಿನಿಮಾ ಸಖತ್ತಾಗಿ ಪೈಸಾ ವಸೂಲ್ ಮಾಡ್ತಿದ್ದಂತೆ, ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ 'ಉಗ್ರಂ' ರೀಮೇಕ್ ರೈಟ್ಸ್ ಗಾಗಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಅದರಂತೆ ಚಿತ್ರತಂಡ, ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಪ್ರಭಾಸ್ ಸೇರಿದಂತೆ ಬಾಲಿವುಡ್ ಬಾಕ್ಸಾಫೀಸ್ ಕಿಂಗ್ ಸಲ್ಮಾನ್ ಖಾನ್ ವರೆಗೂ ಸ್ಪೆಷಲ್ ಸ್ಕ್ರೀನಿಂಗ್ ಮಾಡಿತ್ತು. [ಉಗ್ರಂ‌ ಚಿತ್ರ ವಿಮರ್ಶೆ]

'ಉಗ್ರಂ'ನ ಕೊಂಡಾಡಿದ ಎಲ್ಲಾ ನಟರಿಗೆ, ಚಿತ್ರದ ರೀಮೇಕ್ ವರ್ಷನ್ ನಲ್ಲಿ ಕಾಣಿಸಿಕೊಳ್ಳೋ ಮನಸ್ಸಿದ್ರೂ, ಯಾರೂ ಇನ್ನೂ ಅಫೀಶಿಯಲ್ಲಾಗಿ ಅನೌನ್ಸ್ ಮಾಡಿಲ್ಲ. ಇನ್ನೂ ರೀಮೇಕ್ ರೈಟ್ಸ್ ಗಾಗಿ ಪ್ರೊಡ್ಯೂಸರ್ಸ್ ನಾ ಮುಂದು ತಾ ಮುಂದು ಅಂತ ಕ್ಯೂ ನಿಂತಿದ್ರೂ, ಈವರೆಗೂ 'ಉಗ್ರಂ' ರೀಮೇಕ್ ರೈಟ್ಸ್ ಸೇಲ್ ಮಾಡಿಲ್ಲ..! ಹೆಚ್ಚಿನ ಮಾಹಿತಿಗೆ ಸ್ಲೈಡ್ ಗಳನ್ನ ಕ್ಲಿಕ್ ಮಾಡಿ. [ಉಗ್ರಂ ಸೀಕ್ವೆಲ್]

ದಾಖಲೆ ಮೊತ್ತಕ್ಕೆ ರೈಟ್ಸ್ ಸೇಲ್ ಆಗಿತ್ತಲ್ವಾ..!?

''ಇದೇನಪ್ಪಾ...ಅದಾಗಲೇ ತಿಂಗಳುಗಳ ಹಿಂದೆಯೇ ಉಗ್ರಂ ರೀಮೇಕ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ ಅಂತ ಸುದ್ದಿಯಾಗಿತ್ತಲ್ಲ''. ಅಂತ ನೀವು ಕೇಳ್ಬಹುದು. ಆದ್ರೆ ಅದೆಲ್ಲವೂ ಬರೀ ಗಾಸಿಪ್ ಅಷ್ಟೆ..!

'ನಾಟ್ ಫಾರ್ ಸೇಲ್' ಅಂದ ನಿರ್ದೇಶಕರು!

ಉಗ್ರಂ ರೀಮೇಕ್ ರೈಟ್ಸ್ ಗೆ ಡಿಮ್ಯಾಂಡ್ ಇದ್ದರೂ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಹಕ್ಕುಗಳನ್ನ ಮಾರಟ ಮಾಡದೇ ಇರುವುದಕ್ಕೆ ನಿರ್ಧರಿಸಿದ್ದಾರೆ. ಹಾಗಂತ 'ಫಿಲ್ಮಿಬೀಟ್ ಕನ್ನಡ'ಗೆ ಪ್ರಶಾಂತ್ ತಿಳಿಸಿದ್ದಾರೆ. ಅದರ ಎಕ್ಸ್ ಕ್ಲೂಸಿವ್ ಮಾಹಿತಿ ಇಲ್ಲಿದೆ.

ಮಾರಟಕ್ಕಿಲ್ಲ ಯಾಕೆ...?

''ಉಗ್ರಂ ರೀಮೇಕ್ ರೈಟ್ಸ್ ಗೆ ತುಂಬಾ ಡಿಮ್ಯಾಂಡ್ ಇದೆ. ಬೇರೆಯವರಿಗೆ ಇಂತಹ ಸೇಲಬಲ್ ಸಬ್ಜೆಕ್ಟ್ ಕೊಡುವ ಬದಲು, ನಾವೇ ಬೇರೆ ಭಾಷೆಯಲ್ಲಿ ನಿರ್ಮಾಣ ಮಾಡಬಹುದಲ್ಲಾ...! ಅದಕ್ಕೆ ರೀಮೇಕ್ ರೈಟ್ಸ್ ಸೇಲ್ ಮಾಡುವುದು ಬೇಡ ಅಂದುಕೊಂಡಿದ್ದೀವಿ'' ಅಂತಾರೆ ಪ್ರಶಾಂತ್ ನೀಲ್.

ಪರಭಾಷೆಯಲ್ಲೂ ನಿರ್ದೇಶನ ಮಾಡ್ತಾರಾ ಪ್ರಶಾಂತ್..?

ಪರಭಾಷೆಯಲ್ಲಿ ಉಗ್ರಂ ರೀಮೇಕ್ ನ ನಿರ್ಮಾಣ ಮಾಡಬೇಕು ಅಂದುಕೊಂಡಿರುವ ಪ್ರಶಾಂತ್, ಡೈರೆಕ್ಟರ್ ಕ್ಯಾಪ್ ತೊಟ್ಟರೂ ಅಚ್ಚರಿ ಇಲ್ಲ. ಆದರೆ, ಅದಕ್ಕೂ ಮುಂಚೆ ಪ್ರಶಾಂತ್ ಒಪ್ಪಿಕೊಂಡಿರುವ ಯಶ್ ನಟನೆಯಲ್ಲಿ ಮೂಡಿಬರುವ 'ಕೆ.ಜಿ.ಎಫ್', ಪುನೀತ್ ಅಭಿನಯಿಸುವ 'ಆಹ್ವಾನ', ಉಗ್ರಂ ಸೀಕ್ವೆಲ್ 'ಉಗ್ರಂ ವೀರಂ' ಕಂಪ್ಲೀಟ್ ಆಗಬೇಕು. [ಉಗ್ರಂ ಬಾಕ್ಸಾಫೀಸ್ ಕಲೆಕ್ಷನ್]

ರೀಮೇಕ್ ವರ್ಷನ್ ನ ಹೀರೋ ಯಾರು..?

''ಟಾಲಿವುಡ್ ಮತ್ತು ಕಾಲಿವುಡ್ ನ ಲೀಡಿಂಗ್ ಹೀರೋಗಳು ಉಗ್ರಂ ಚಿತ್ರದ ರೀಮೇಕ್ ವರ್ಷನ್ ನಲ್ಲಿ ಮಿಂಚೋದಕ್ಕೆ ರೆಡಿಯಿದ್ದಾರೆ. ಆದರೆ ಒಂದೇ ವರ್ಷದಲ್ಲಿ, ಒಂದೇ ಚಿತ್ರವನ್ನ ಯಾರೂ ರೀಮೇಕ್ ಮಾಡುವುದಿಲ್ಲ, ಸ್ವಲ್ಪ ದಿನದಲ್ಲೇ ಟಾಪ್ ಹೀರೋ ಒಬ್ಬರು ರೀಮೇಕ್ ವರ್ಷನ್ ಅನೌನ್ಸ್ ಮಾಡ್ತಾರೆ'' ಅಂತ ಪ್ರಶಾಂತ್ ನೀಲ್ ಹೇಳಿದ್ರು. [ಉಗ್ರಂ ರೀಮೇಕ್ ನಲ್ಲಿ ಸಲ್ಮಾನ್ ಖಾನ್]

English summary
2014's Blockbuster Kannada movie Ugramm remake rights is not for sale..! Although the movie created a lot of buzz in record sales of remake rights, the fact is that the remake rights of the movie will not be sold. The director of Ugramm, Prashanth Neel himself is planning to produce the same film in other languages.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X