twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರ ನೋಡೋಕೆ 300 ಕಿಲೋಮೀಟರ್ ಹೋಗಬೇಕಿತ್ತು, 'ಕಾಂತಾರ'ಕ್ಕೆ ಹಾಗಿಲ್ಲ; ವಿದೇಶಿಗರ ಹರ್ಷ

    |

    ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರ ಕರ್ನಾಟಕ ಮಾತ್ರವಲ್ಲದೇ ಪರ ರಾಜ್ಯ ಹಾಗೂ ವಿದೇಶಿ ನೆಲಗಳಲ್ಲಿಯೂ ಅಬ್ಬರಿಸುತ್ತಿದೆ. ಪ್ರೀಮಿಯರ್ ಶೋ ಮುಗಿದಾಗಿನಿಂದ ಶುರುವಾದ ಕಾಂತಾರ ಚಿತ್ರದ ಜಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಚಿತ್ರಮಂದಿರಕ್ಕೆ ತೆರಳಿ ಚಿತ್ರ ವೀಕ್ಷಿಸಿ ಹೊರಬಂದ ಯಾವೊಬ್ಬ ಪ್ರೇಕ್ಷಕ ಕೂಡ ಚಿತ್ರದ ಕುರಿತು ಯಾವುದೇ ರೀತಿಯ ಮೈನಸ್ ಪಾಯಿಂಟ್ ಹೇಳ್ತಿಲ್ಲ.

    ಹೀಗೆ ಚಿತ್ರ ಸಿನಿ ಪ್ರೇಕ್ಷಕನಿಗೆ ಸಂಪೂರ್ಣವಾಗಿ ಇಷ್ಟವಾಗಿದ್ದು, ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರವನ್ನು ಕನ್ನಡ ಭಾಷೆಯಲ್ಲಿಯೇ ವೀಕ್ಷಿಸಿದ ಬೇರೆ ರಾಜ್ಯಗಳ ಸಿನಿಪ್ರೇಮಿಗಳು ಚಿತ್ರವನ್ನು ತಮ್ಮ ಭಾಷೆಗೂ ಸಹ ಡಬ್ ಮಾಡಿ ಇಲ್ಲಿಯ ಸಿನಿರಸಿಕರೂ ಒಂದೊಳ್ಳೆ ಚಿತ್ರವನ್ನು ವೀಕ್ಷಿಸಲಿ ಎಂದು ಬೇಡಿಕೆ ಇಟ್ಟಿದ್ದರು. ಹೀಗೆ ಕಾಂತಾರ ಚಿತ್ರದ ಡಬ್ಬಿಂಗ್ ಕುರಿತು ವ್ಯಾಪಕ ಮನವಿ ಬಂದ ಕಾರಣ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಸಹ ಇದೀಗ ಡಬ್ ಮಾಡಿ ಮುಗಿಸಿದೆ.

    'ನನ್ನ ಅಚ್ಚುಮೆಚ್ಚಿನ ನಟ ಜೂ.ಎನ್‌ಟಿಆರ್.. ಯಾಕಂದ್ರೆ ಅವರ ಅಮ್ಮನ ಊರು ನನ್ನೂರು'-ರಿಷಬ್ ಶೆಟ್ಟಿ! 'ನನ್ನ ಅಚ್ಚುಮೆಚ್ಚಿನ ನಟ ಜೂ.ಎನ್‌ಟಿಆರ್.. ಯಾಕಂದ್ರೆ ಅವರ ಅಮ್ಮನ ಊರು ನನ್ನೂರು'-ರಿಷಬ್ ಶೆಟ್ಟಿ!

    ಹೀಗೆ ಕಾಂತಾರ ಎರಡನೇ ವಾರ ಪೂರೈಸುವ ವೇಳೆಗೆ ಕಾಂತಾರ ತೆಲುಗು ಹಾಗೂ ಹಿಂದಿ ವರ್ಷನ್ ಬಿಡುಗಡೆಗೊಳ್ಳಲಿದ್ದು, ಚಿತ್ರ ಭಾರತ ಮಾತ್ರವಲ್ಲದೆ ವಿದೇಶಿ ನೆಲದಲ್ಲಿಯೂ ಸಹ ಮೊದಲನೇ ವಾರವನ್ನು ಪೂರೈಸಿ ಮುನ್ನುಗ್ಗುತ್ತಿದೆ. ಉತ್ತರ ಅಮೆರಿಕ ಹಾಗೂ ಇಂಗ್ಲೆಂಡ್ ನೆಲೆಗಳಲ್ಲಿ ಕಾಂತಾರ ಎರಡನೇ ವಾರಕ್ಕೆ ಲಗ್ಗೆ ಇಟ್ಟಿದ್ದು, ಮೊದಲ ವಾರ ಮುಕ್ತಾಯವಾದ ನಂತರ ಕಾಂತಾರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕುರಿತು ಅಲ್ಲಿನ ಕನ್ನಡ ಸಿನಿ ಪ್ರೇಮಿಗಳು ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

    UK and US audience reaction about Kantara movie after 1 week

    ಕಾಂತಾರ ಚಿತ್ರವನ್ನು ಇಂಗ್ಲೆಂಡ್‌ನಲ್ಲಿ ಒಂದು ವಾರದ ಬಳಿಕ ವೀಕ್ಷಿಸಿದ ರೋಹಿತ್ ನಿರಂಜನ್ ವಿ ಎಂಬ ಸಿನಿಪ್ರೇಕ್ಷಕರ ಕಾಂತಾರ ಚಿತ್ರ ಬಿಡುಗಡೆಯಾದಾಗ ಒಂದು ವಾರ ಕಳೆದ ನಂತರ ಕಾಂತಾರ ಕನ್ನಡ ವರ್ಷನ್ ಅನ್ನು ವೀಕ್ಷಿಸಲಿದ್ದೇನೆ ಎಂದು ಊಹಿಸಿಯೂ ಇರಲಿಲ್ಲ, ಆದರೆ ವಾರ ಕಳೆದ ನಂತರವೂ ವೀಕ್ಷಿಸುವುದಕ್ಕೆ ಚಿತ್ರ ಲಭ್ಯವಿದೆ ಎಂದು ಕಾಂತಾರ ಇಂಗ್ಲೆಂಡ್ ನೆಲದಲ್ಲಿ ಯಶಸ್ವಿ ಪ್ರದರ್ಶನವಾಗುತ್ತಿರುವುದರ ಬಗ್ಗೆ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ.

    ಅಮೆರಿಕಾದಲ್ಲಿರುವ ಅಜಿತ್ ಎಚ್‌ಜಿ ಎಂಬ ಸಿನಿ ಪ್ರೇಕ್ಷಕ ಟ್ವೀಟ್ ಮಾಡಿದ್ದು, ಕನ್ನಡ ಚಿತ್ರಗಳನ್ನು ವೀಕ್ಷಿಸಬೇಕೆಂದರೆ 200ರಿಂದ 300 ಕಿಲೋ ಮೀಟರ್ ಪ್ರಯಾಣ ಕೈಗೊಳ್ಳಬೇಕಾದ ಕಾಲವಿತ್ತು. ಆದರೆ ಕಾಂತಾರ ಚಿತ್ರವನ್ನು ನಾನು ಪ್ರತಿದಿನವೂ ವೀಕ್ಷಿಸಬಹುದಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಾಂತಾರ ಅಮೆರಿಕದ ಕನ್ನಡ ಸಿನಿ ಪ್ರೇಕ್ಷಕರಿಗೆ ಸುಲಭವಾಗಿ ಲಭ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.

    English summary
    UK and US fans reaction about Kantara movie after 1 week. Read on
    Thursday, October 13, 2022, 11:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X