For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ನಿರ್ಮಾಪಕನಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಸುದ್ದಿ ವರದಿಯಾಗಿದೆ.

  ಉಮಾಪತಿ ವೈರಿಯನ್ನು ನೇಪಾಳದಲ್ಲಿ ಲಾಕ್ ಮಾಡಿದ ಬೆಂಗಳೂರು ಪೊಲೀಸ್ | Filmibeat Kannada

  ಕಳೆದ ವರ್ಷ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ಸಹೋದರ ದೀಪಕ್ ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದಲ್ಲಿ ಏಳು ಜನರನ್ನು ಬಂಧಿಸಲಾಗಿತ್ತು. ಹತ್ಯೆಗೆ ಸ್ಕೆಚ್ ಹಾಕಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಮಂಜುನಾಥ್, ಭರತ್ ಕುಮಾರ್ ಸೇರಿದಂತೆ ಏಳು ಜನರನ್ನು ಅರೆಸ್ಟ್ ಮಾಡಿದ್ದರು.

  'ರಾಬರ್ಟ್' ನಿರ್ಮಾಪಕ ಉಮಾಪತಿ ಸೇರಿ ನಾಲ್ವರ ಕೊಲೆಗೆ ಸ್ಕೆಚ್: 7 ಜನ ವಶಕ್ಕೆ 'ರಾಬರ್ಟ್' ನಿರ್ಮಾಪಕ ಉಮಾಪತಿ ಸೇರಿ ನಾಲ್ವರ ಕೊಲೆಗೆ ಸ್ಕೆಚ್: 7 ಜನ ವಶಕ್ಕೆ

  ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ರಾಜೇಶ್ ಅಲಿಯಾಸ್ ಕರಿಯ ರಾಜೇಶ್ ಪ್ರಮುಖ ಆರೋಪಿ ಎಂದು ತಿಳಿದ ಪೊಲೀಸರು 'ಆಪರೇಷನ್ ಬ್ಲಾಕ್ ಡಾಗ್' ಎಂಬ ಹೆಸರಿನಲ್ಲಿ ಶೋಧ ಮುಂದುವರಿಸಿದ್ದರು.

  ಇದೀಗ, ಆರೋಪಿ ರಾಜೇಶ್‌ನನ್ನು ದಕ್ಷಿಣ ವಿಭಾಗದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಾಂಬೆ ರವಿ ತಂಡದ ಸದಸ್ಯನಾಗಿದ್ದ ರಾಜೇಶ್ ನೇಪಾಳದಲ್ಲಿದ್ದ ತಲೆಮರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

  ಬಾಂಬೆ ರವಿ ಮತ್ತು ಸಹಚರರು ಬೆಂಗಳೂರಿನಿಂದ ಹೊರಗಡೆ ಇದ್ದುಕೊಂಡೆ, ಉದ್ಯಮಿಗಳಿಗೆ ಧಮ್ಕಿ ಹಾಕಿ ಹಣ ವಸೂಲಿ ಮಾಡುವುದು, ದರೋಡೆ ಮಾಡುವುದು ವೃತ್ತಿ ಮಾಡಿಕೊಂಡಿದ್ದರು. ಭೂಗತ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.

  ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಸಹೋದರ ದೀಪಕ್, ಸೈಕಲ್ ರವಿ, ಬೇಕರಿ ರಘು ನಾಲ್ವರನ್ನು ಹತ್ಯೆ ಮಾಡುವುದಾಗಿ ಕರಿಯ ರಾಜೇಶ್ ಧಮ್ಕಿ ಹಾಕಿದ್ದ. ಇತ್ತ ಸಹಚರರು ಬಂಧನವಾಗುತ್ತಿದ್ದಂತೆ ಬೆಂಗಳೂರಿನಿಂದ ಓಡಿಹೋಗಿದ್ದ ರಾಜೇಶ್ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

  ಮಾರ್ಚ್ 11, 2021ರಂದು ರಾಬರ್ಟ್ ಸಿನಿಮಾ ತೆರೆಕಂಡು ಭರ್ಜರಿ ಬಿಸಿನೆಸ್ ಮಾಡಿತ್ತು. ದರ್ಶನ್, ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿದ್ದರು. ತರುಣ್ ಸುಧೀರ್ ಈ ಚಿತ್ರ ನಿರ್ದೇಶಿಸಿದ್ದರು.

  English summary
  Roberrt producer Umapathy Srinivas Gowda life threatening case: Police arrested Rajesh alias Kiriya Rajesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X