For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಗೆಳೆಯರಿಗೆ ಸವಾಲು ಹಾಕಿದ ಉಮಾಪತಿ ಶ್ರೀನಿವಾಸ್

  |

  ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಕೆಲವರು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಉಮಾಪತಿ ಹಾಗೂ ಮಹಿಳೆ ಅರುಣ ಕುಮಾರಿ ನಡುವೆ ನಡೆದ ವಾಟ್ಸ್‌ಆಪ್ ಸಂಭಾಷಣೆಯನ್ನು ಸಹ ಯಾರೋ ಲೀಕ್ ಮಾಡಿ ಅದು ವೈರಲ್ ಆಗಿತ್ತು.

  ಅದಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ ಉಮಾಪತಿ ಶ್ರೀನಿವಾಸ್ ಗೌಡ ಸುದ್ದಿಗೋಷ್ಟಿ ನಡೆಸಿದ್ದು, ದರ್ಶನ್ ಗೆಳೆಯರಿಗೆ ನೇರವಾಗಿ ಸವಾಲು ಎಸೆದಿದ್ದಾರೆ.

  ''ದರ್ಶನ್ ನನ್ನ ತೇಜೋವಧೆಗೆ ಯತ್ನಿಸಿದ್ದಾರೆ. ದರ್ಶನ್‌ ಅಮಾಯಕರು ಅವರಿಗೆ ಏನೂ ಗೊತ್ತಿಲ್ಲ ಅವರ ತೆಲೆಗೆ ಇಲ್ಲ-ಸಲ್ಲದ್ದು ತುಂಬಲಾಗಿದೆ. ದರ್ಶನ್ ಅನ್ನು ಕಳೆದುಕೊಳ್ಳುವ ಇಷ್ಟವಿಲ್ಲದ ಕಾರಣ ನಾನು ಸುಮ್ಮನಿದ್ದೇನೆ. ಇಲ್ಲವಾದರೆ ದರ್ಶನ್ ಗೆಳೆಯರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡುತ್ತಿದ್ದೆ'' ಎಂದಿದ್ದಾರೆ ಉಮಾಪತಿ.

  ಅಂಥಹಾ ನೂರು ಪಬ್ ಕಟ್ಟಬಲ್ಲೆ ನಾನು: ಉಮಾಪತಿ

  ಅಂಥಹಾ ನೂರು ಪಬ್ ಕಟ್ಟಬಲ್ಲೆ ನಾನು: ಉಮಾಪತಿ

  ''ಮೈಸೂರಿನಲ್ಲಿ ಎಕರೆ ಪಬ್ ಇಟ್ಟುಕೊಂಡು ಅಷ್ಟೆಲ್ಲಾ ಹಾರಾಡುತ್ತಾರೆ. ಅಂಥಹಾ ನೂರು ಪಬ್ ಮಾಡ್ತೀನಿ ನಾನು. ಬೆಂಗಳೂರಿನಲ್ಲಿ ಎಕರೆಗಟ್ಟಲೆ ಜಾಗ ಹೊಂದಿದ್ದೀನಿ. ಆದರೂ ಅವರಂತೆ ತೋರ್ಪಡಿಕೆ ಮಾಡಲ್ಲ. ನಾನಾಯಿತು ನನ್ನ ಕೆಲಸವಾಯಿತು ಎಂದು ಇದ್ದೇನೆ'' ಎಂದಿದ್ದಾರೆ ಉಮಾಪತಿ.

  ಅರೆಸ್ಟ್ ಮಾಡಿಸಲು ಅವರ ಕೈಯಲ್ಲಿ ಸಾಧ್ಯವಾ: ಉಮಾಪತಿ

  ಅರೆಸ್ಟ್ ಮಾಡಿಸಲು ಅವರ ಕೈಯಲ್ಲಿ ಸಾಧ್ಯವಾ: ಉಮಾಪತಿ

  ''ವಿಚಾರಣೆಗೆ ಹಾಜರಾದ ದಿನ ನಾನು ಮೈಸೂರಿನಿಂದ ಹೊರಗೆ ಹೋಗುತ್ತಿದ್ದೀನಿ ಎಂದುಕೊಂಡು ಪೊಲೀಸರ ಕೈಯಿಂದ ನನಗೆ ಕರೆ ಮಾಡಿಸಿದ್ದರು. ಮಂಡ್ಯದಲ್ಲಿ ಅರೆಸ್ಟ್ ಮಾಡಿಸಿ ಬಿಡ್ತೀವಿ ಎಂದರು. ನನ್ನನ್ನು ಸಾಮಾನ್ಯದವನು ಎಂದುಕೊಂಡಿದ್ದಾರೆ. ಅರೆಸ್ಟ್ ಮಾಡಿಸಲು ನಾನೇನು ಅವರಪ್ಪನ ಆಸ್ತಿ ತಿಂದಿದ್ದೀನ? ಅರೆಸ್ಟ್ ಮಾಡಿಸಲು ಅವರ ಕೈಲಿ ಸಾಧ್ಯವಾ? ನಾನು ಸುಮ್ಮನೆ ಬಿಟ್ಟುಬಿಡುತ್ತೀನ?'' ಎಂದು ಉಮಾಪತಿ ಪ್ರಶ್ನೆ ಮಾಡಿದ್ದಾರೆ.

  ತಲೆ ಒಡೆದು ಸಂಪಾದನೆ ಮಾಡಿದ್ದಲ್ಲ: ಉಮಾಪತಿ

  ತಲೆ ಒಡೆದು ಸಂಪಾದನೆ ಮಾಡಿದ್ದಲ್ಲ: ಉಮಾಪತಿ

  ''ಯಾರ ತಲೆ ಒಡೆದು ಸಂಪಾದಿಸಿದ್ದಲ್ಲ, ಕಷ್ಟ ಪಟ್ಟು ದುಡಿದಿದ್ದು. ರಾಕೇಶ್ ಪಾಪಣ್ಣ, ಪೊಲೀಸರನ್ನು ಹ್ಯಾಂಡಲ್ ಮಾಡ್ತೀನಿ ಅಂತಾನೆ ಹಾಗಿದ್ದರೆ ಅವರ ಬ್ಯಾಕ್‌ಗ್ರೌಂಡ್ ಎಂಥಹದ್ದು ಎಂಬುದು ಅರ್ಥವಾಗುತ್ತದೆ. ನನಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ, ಅವರ ಹಿನ್ನೆಲೆ ಎಂಥಹದ್ದು ಎಂಬುದು ನನಗೆ ಗೊತ್ತಿದೆ'' ಎಂದಿದ್ದಾರೆ ಉಮಾಪತಿ. ರಾಕೇಶ್ ಹಾಗೂ ಹರ್ಷಾಗೆ ದರ್ಶನ್ ಕ್ಲೀನ್‌ಚಿಟ್ ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಉಮಾಪತಿ, ''ಕ್ಲೀನ್ ಚಿಟ್ ಕೊಡಬೇಕಿರುವುದು ನ್ಯಾಯಾಲಯ'' ಎಂದರು.

  ವಿಜಯ್ ಸೇತುಪತಿಯ ಹೊಸ ರಿಯಾಲಿಟಿ ಶೋ | Filmibeat Kannada
   ಪೊಲೀಸ್ ಠಾಣೆಯಲ್ಲಿಯೇ ಪ್ರಕರಣ ಇತ್ಯರ್ಥವಾಗಲಿ: ಉಮಾಪತಿ

  ಪೊಲೀಸ್ ಠಾಣೆಯಲ್ಲಿಯೇ ಪ್ರಕರಣ ಇತ್ಯರ್ಥವಾಗಲಿ: ಉಮಾಪತಿ

  ದರ್ಶನ್ ಗೆಳೆಯರಾದ ರಾಕೇಶ್ ಪಾಪಣ್ಣ ಹಾಗೂ ಹರ್ಷ ಮಿಲಂಟ ಅವರುಗಳು ನನ್ನ ತೇಜೋವಧೆ ಮಾಡಲು ಯತ್ನಿಸಿದ್ದಾರೆ. ಮಹಿಳೆ ಅರುಣ್ ಕುಮಾರಿ ಅನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಮೊಬೈಲ್ ಕಿತ್ತುಕೊಂಡು ಬೆದರಿಕೆ ಸಹ ಹಾಕಿದ್ದಾರೆ. ಇದೀಗ ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಅಲ್ಲಿಯೇ ಪ್ರಕರಣ ಇತ್ಯರ್ಥವಾಗಲಿ ಎಂದಿದ್ದಾರೆ ನಟ ಉಮಾಪತಿ.

  English summary
  Producer Umapathy Srinivasa Gowda Challenged Darshan's friends Rakesh Papanna and Harsha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X