»   » ಗಾಂಧಿನಗರದಲ್ಲಿ ಅರ್ಥವಾಗ್ದೇ ಇರೋದು ಒಂದಿದೆ

ಗಾಂಧಿನಗರದಲ್ಲಿ ಅರ್ಥವಾಗ್ದೇ ಇರೋದು ಒಂದಿದೆ

By: ಜೀವನರಸಿಕ
Subscribe to Filmibeat Kannada

ಅದೊಂದು ವರ್ಷ ಕನ್ನಡ ಸಿನಿಮಾಗಳಿಗೆ ಅದ್ಯಾವ ಲೆವೆಲ್ ಗೆ ಭಯ ಶುರುವಾಗಿತ್ತು ಅಂದ್ರೆ. ವರ್ಷದ ಆರಂಭದ ವಾರ ಯಾವ ಸಿನಿಮಾಗಳೂ ರಿಲೀಸೇ ಆಗಲಿಲ್ಲ. ಹೊಸ ವರ್ಷಕ್ಕೆ ಸಿನಿಮಾ ರಿಲೀಸ್ ಮಾಡ್ಬೇಕು ಅಂತ ಕಾಯ್ತಿದ್ದ ಕ್ರೇಜ್ ಇದ್ದ ದಿನಗಳಲ್ಲಿ ಹೊಸ ವರ್ಷ ಶುರುವಾಗಿ 10 ದಿನಗಳಾದ್ರೂ ಯಾವ ಸಿನಿಮಾಗಳು ರಿಲೀಸಾಗ್ಲಿಲ್ಲ.

ಅದು 2013ನೇ ವರ್ಷ. ಬಹಳ ಹಿಂದೆ ಏನಲ್ಲ, ಒಂದು ವರ್ಷ ಹಿಂದೆ ಅಷ್ಟೆ. 2012ರಲ್ಲಿ ಕನ್ನಡ ಸಿನಿಮಾಗಳು ಸೋತ ಭಯದಿಂದ 2013ರ ಮೊದಲವಾರ ಯಾವ ಸಿನಿಮಾಗಳೂ ತೆರೆಗೆ ಬರ್ಲಿಲ್ಲ.

unfounded fear in Kannada film industry

ರಿಲೀಸಾಗೋಕೆ ಹೊರಟಿದ್ದ ಒಂದೆರೆಡು ಸಿನಿಮಾಗಳೂ ಕೂಡ ಸೋಲಿನ ಭಯದಿಂದ ಹಿಂದೆ ಬಂದಿದ್ವು. ಮತ್ತೊಂದು ಭಯ ಸಿನಿಮಾದವ್ರನ್ನ ಕಾಡಿತ್ತು ವರ್ಷದ ಮೊದಲ ಸಿನಿಮಾ ಸೋತ್ರೆ ಆ ವರ್ಷವಿಡೀ ಸೋಲೇ ಅಂತ.

ಅಂತಹಾ ಕೆಟ್ಟ ಸಿನಿಮಾ ನಾವು ಯಾಕೆ ಆಗಬೇಕು ಅಂತ 2012ರ ಸೋಲಿನ ಭಯದಿಂದ ಮೊದಲ ವಾರ ಯಾವ ಸಿನಿಮಾಗಳು ಬಂದಿರಲಿಲ್ಲ. ಪ್ರಜ್ವಲ್ ದೇವರಾಜ್ ಅಭಿನಯದ 'ಗಲಾಟೆ' ಚಿತ್ರ ಹೊಸ ವರ್ಷದಲ್ಲಿ ರಿಲೀಸಾದ ಮೊದಲ ಚಿತ್ರ ಅನ್ನಿಸಿಕೊಳ್ತು. 2014

ಬಂತು ಮೊದಲ ವಾರದಲ್ಲೇ ಕನ್ನಡದಲ್ಲಿ ಮೂರು ಸಿನಿಮಾಗಳು ತೆರೆಗೆ ಬಂದಿವೆ. ಎರಡನೇ ವಾರಕ್ಕೆ ನಾಲ್ಕು ಸಿನಿಮಾಗಳು ಸರತಿಯಲ್ಲಿ ನಿಂತಿವೆ. ಕಳೆದ ವರ್ಷದ ಭಯ ಈಗಿಲ್ಲ. ಯಾಕಂದ್ರೆ 2013ರಲ್ಲಿ ಕನ್ನಡದ ಸಿನಿಮಾಗಳ ಯಶಸ್ಸಿನ ಪಾಲು ಜಾಸ್ತಿ ಇದೆ.

ಒಳ್ಳೆಯ ಸಿನಿಮಾ ಮಾಡಿದ್ರೆ ಸೋಲಿನ ಭಯ ಯಾಕೆ ಅಂತ ಅನ್ಕೋತೀರಾ. ಏನೇ ಒಳ್ಳೇ ಸಿನಿಮಾ ಮಾಡಿದ್ರೂ ಸ್ಯಾಂಡಲ್ ವುಡ್ ನಲ್ಲಿ ಸೋತು ಬಿಡ್ತವೆ. ಆದರೆ ಕೆಲವೊಮ್ಮೆ ಸಾಮಾನ್ಯ ಸಿನಿಮಾಗಳೂ ದೊಡ್ಡ ಹಿಟ್ ಆಗಿಬಿಡ್ತವೆ.

ಸಿನಿಮಾ ಅನ್ನೋದು ಜೂಜು ಇದ್ದಂಗೆ ಅಂತ ದೊಡ್ಡವರು ಹೇಳಿದ್ದು ಸತ್ಯ ಅನ್ನಿಸೋದು ಇಲ್ಲೇ ಅಲ್ವಾ? ಆಮೇಲೆ ಕೊನೇ ಮಾತು ಗಾಂಧೀನಗರದಲ್ಲಿ ಗೊತ್ತಾಗದೇ ಇರೋದು ಒಂದಿದೆ ಅದೇನು ಗೊತ್ತಾ? ಅದು ಸಿನಿಮಾ.

English summary
One thing the Sandalwood film industry didn't understand. Kannada film industry experiences unfounded fear in the year 2013, because they believe in Superstition. But in 2014 Sandalwood producers changed their mind set.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada