India
  For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷಕ್ಕೆ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದ ಸ್ಟಾರ್ ನಟರು

  |

  2020ನೇ ವರ್ಷದಲ್ಲಿ ಉಂಟಾದ ಕೆಲವು ವಿಘ್ನಗಳಿಂದ ನಿರಾಸೆಯಾಗಿದ್ದ ಸ್ಯಾಂಡಲ್‌ವುಡ್ 2021ನೇ ವರ್ಷ ಚೆನ್ನಾಗಿರಲಿ ಎಂಬ ಭರವಸೆಯಿಂದ ಸ್ವಾಗತ ಮಾಡಿಕೊಂಡಿದೆ. ಕಳೆದ ವರ್ಷ ಕೊರೊನಾದಿಂದ ಉಂಟಾದ ಸಂಕಷ್ಟ ಈ ವರ್ಷ ಬಾರದಿರಲಿ, ಸಿನಿಮಾ ಕೆಲಸಗಳು ನಡೆಯಲಿ, ಸಿನಿಮಾಗಳು ರಿಲೀಸ್ ಆಗಲಿ ಎಂಬ ಅಭಿಲಾಷೆಯಿಂದ ವರ್ಷ ಆರಂಭಿಸಿದ್ದಾರೆ.

  ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲಂಸ್ | Filmibaet Kannada

  ಕನ್ನಡದ ಟಾಪ್ ನಟರ ಚಿತ್ರಗಳು 2021ನೇ ವರ್ಷವನ್ನು ಅದ್ಧುರಿಯಾಗಿ ಸ್ವಾಗತಿಸಿದೆ. ಹೊಸ ಪೋಸ್ಟರ್, ಟೀಸರ್ ಅಥವಾ ಟ್ರೈಲರ್‌ಗಳನ್ನು ಬಿಡುಗಡೆ ಮಾಡಿ ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದೆ. ಯುವರತ್ನ, ಪೊಗರು, ಸಲಗ, ರಾಬರ್ಟ್, ಕಬ್ಜ, ಚಾರ್ಲಿ, ತ್ರಿಬಲ್ ರೈಡಿಂಗ್ ಸೇರಿದಂತೆ ಹಲವು ಚಿತ್ರತಂಡಗಳು ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಮುಂದೆ ಓದಿ....

  ಯುವರತ್ನ ಬಿಡುಗಡೆ ದಿನಾಂಕ

  ಯುವರತ್ನ ಬಿಡುಗಡೆ ದಿನಾಂಕ

  ಪುನೀತ್ ರಾಜ್ ಕುಮಾರ್ ನಟನೆಯಲ್ಲಿ ತಯಾರಾಗಿರುವ ಯುವರತ್ನ ಸಿನಿಮಾ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ಜೊತೆಗೆ ರಿಲೀಸ್ ದಿನಾಂಕ ಸಹ ಘೋಷಿಸಿದೆ. ಪ್ರಸ್ತುತ, ಕನ್ನಡ ಚಿತ್ರರಂಗದ ಪಾಲಿಗೆ ಭಾರಿ ನಿರೀಕ್ಷೆ ಮೂಡಿಸಿರುವ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ತೆರೆಗೆ ಬರ್ತಿದೆ.

  ಡಾನ್ ಜಯರಾಜ್ ಬಯೋಪಿಕ್‌ಗೆ ಎಂಟ್ರಿಕೊಟ್ಟ ತಮಿಳು ಕಲಾವಿದಡಾನ್ ಜಯರಾಜ್ ಬಯೋಪಿಕ್‌ಗೆ ಎಂಟ್ರಿಕೊಟ್ಟ ತಮಿಳು ಕಲಾವಿದ

  ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ

  ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ

  ಹೊಸ ವರ್ಷದ ಪ್ರಯುಕ್ತ ಡಾರ್ಲಿಂಗ್ ಕೃಷ್ಣ ತಮ್ಮ ಹೊಸ ಚಿತ್ರದ ಟೈಟಲ್ ಅನಾವರಣ ಮಾಡಿದ್ದಾರೆ. ಕೃಷ್ಣ ನಟಿಸುತ್ತಿರುವ ಹೊಸ ಚಿತ್ರಕ್ಕೆ 'Mr ಬ್ಯಾಚುಲರ್' ಎಂದು ಟೈಟಲ್ ಇಡಲಾಗಿದೆ. ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ನಾಯ್ಡು ಬಂದರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಿಲನಾ ನಾಗರಾಜ್ ಕಾಣಿಸಿಕೊಳ್ಳುತ್ತಿದ್ದಾರೆ.

  ಕಸ್ತೂರಿ ಮಹಲ್ ಟೀಸರ್

  ಕಸ್ತೂರಿ ಮಹಲ್ ಟೀಸರ್

  ನಿರ್ದೇಶಕ ದಿನೇಶ್ ಬಾಬು ಅವರ 50ನೇ ಸಿನಿಮಾ ಕಸ್ತೂರಿ ಮಹಲ್ ಟೀಸರ್ ಇಂದು ಬಿಡುಗಡೆಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕಸ್ತೂರಿ ಮಹಲ್ ಚಿತ್ರದ ಟೀಸರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಶಾನ್ವಿ ಶ್ರೀವಸ್ತವ್ ನಾಯಕಿಯಾಗಿರುವ ಈ ಚಿತ್ರ 20 ದಿನಗಳಲ್ಲೇ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ರೆಡಿಯಾಗಿದೆ.

  ಬಿಗ್ ಅನೌನ್ಸ್ ಮೆಂಟ್: ಪುನೀತ್ ರಾಜ್ ಕುಮಾರ್ 'ಯುವರತ್ನ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಬಿಗ್ ಅನೌನ್ಸ್ ಮೆಂಟ್: ಪುನೀತ್ ರಾಜ್ ಕುಮಾರ್ 'ಯುವರತ್ನ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ

  ಎಪಿ ಅರ್ಜುನ್ ಹೊಸ ಸಿನಿಮಾ

  ಎಪಿ ಅರ್ಜುನ್ ಹೊಸ ಸಿನಿಮಾ

  ಹೊಸ ವರ್ಷದ ಪ್ರಯುಕ್ತ ಎಪಿ ಅರ್ಜುನ್ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕಿಸ್ ಖ್ಯಾತಿಯ ವಿರಾಟ್ ನಾಯಕನಾಗಿ ನಟಿಸುತ್ತಿದ್ದಾರೆ. ಹೊಸ ವರ್ಷದ ಪ್ರಯುಕ್ತ ಈ ಪ್ರಾಜೆಕ್ಟ್‌ ಘೋಷಣೆ ಮಾಡಿದ್ದಾರೆ.

  ಹೆಡ್‌ಬುಷ್ ಸಿನಿಮಾಗೆ ಹೊಸ ನಟ

  ಹೆಡ್‌ಬುಷ್ ಸಿನಿಮಾಗೆ ಹೊಸ ನಟ

  ಡಾಲಿ ಧನಂಜಯ್ ನಟಿಸುತ್ತಿರುವ ಹೆಡ್‌ಬುಷ್ ಚಿತ್ರದಲ್ಲಿ ತಮಿಳಿನ ನೃತ್ಯ ಸಂಯೋಜಕ ಸ್ಯಾಂಡಿ ನಟಿಸುತ್ತಿದ್ದಾರೆ. ಡಾನ್ ಜಯರಾಜ್ ಅವರ ಬಲಗೈ ಬಂಟ ಸ್ಯಾಮ್‌ಸನ್ ಪಾತ್ರದಲ್ಲಿ ಸ್ಯಾಂಡಿ ನಟಿಸುತ್ತಿದ್ದಾರೆ. ಸ್ಯಾಂಡಿ ಅವರ ಫಸ್ಟ್ ಲುಕ್ ಟೀಸರ್ ಇಂದು ಬಿಡುಗಡೆಯಾಗಿದೆ.

  ಮದುವೆ ಆಗುತ್ತಿದ್ರೂ ನಾನು 'Mr.ಬ್ಯಾಚುಲರ್' ಅಂತಿದ್ದಾರೆ ಡಾರ್ಲಿಂಗ್ ಕೃಷ್ಣಮದುವೆ ಆಗುತ್ತಿದ್ರೂ ನಾನು 'Mr.ಬ್ಯಾಚುಲರ್' ಅಂತಿದ್ದಾರೆ ಡಾರ್ಲಿಂಗ್ ಕೃಷ್ಣ

  ಮದಗಜ ತೆಲುಗು ಟೀಸರ್

  ಮದಗಜ ತೆಲುಗು ಟೀಸರ್

  ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾದ ತೆಲುಗು ಟೀಸರ್ ಹೊಸ ವರ್ಷದ ಪ್ರಯುಕ್ತ ಇಂದು ಬಿಡುಗಡೆಯಾಗಿದೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ತೆಲುಗು ಟೀಸರ್‌ನಲ್ಲು ಶ್ರೀಮುರಳಿ ಅವರೇ ವಾಯ್ಸ್ ಡಬ್ ಮಾಡಿದ್ದಾರೆ.

  ಪೊಗರು ತೆಲುಗು ಟ್ರೈಲರ್

  ಪೊಗರು ತೆಲುಗು ಟ್ರೈಲರ್

  ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದ ತೆಲುಗು ಹಾಗೂ ತಮಿಳಿನ ಡೈಲಾಗ್ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಕನ್ನಡದಲ್ಲಿ ಹಿಟ್ ಆಗಿದ್ದ ಈ ಟ್ರೈಲರ್ ಹೊಸ ವರ್ಷದ ಪ್ರಯುಕ್ತ ಪರಭಾಷೆಯಲ್ಲಿ ತೆರೆಕಂಡಿದೆ. ನಂದಕಿಶೋರ್ ನಿರ್ದೇಶನದ ಈ ಚಿತ್ರ ಮೂರು ಭಾಷೆಯಲ್ಲಿ ರಿಲೀಸ್ ಆಗಲಿದೆ.

  ರೈಡರ್, ಸಲಗ ಪೋಸ್ಟರ್

  ರೈಡರ್, ಸಲಗ ಪೋಸ್ಟರ್

  ಹೊಸ ವರ್ಷದ ಪ್ರಯುಕ್ತ ದುನಿಯಾ ವಿಜಯ್ ನಟಿಸಿರುವ 'ಸಲಗ' ಸಿನಿಮಾದ ಹೊಸ ಪೋಸ್ಟರ್, ನಿಖಿಲ್ ಕುಮಾರ್ ನಟನೆಯ ರೈಡರ್ ಚಿತ್ರದ ಪೋಸ್ಟರ್, ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಪೋಸ್ಟರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

  ರಾಬರ್ಟ್, ತ್ರಿಬಲ್ ರೈಡಿಂಗ್

  ರಾಬರ್ಟ್, ತ್ರಿಬಲ್ ರೈಡಿಂಗ್

  ದರ್ಶನ್ ನಟನೆಯ ರಾಬರ್ಟ್, ಗಣೇಶ್ ನಟನೆಯ ತ್ರಿಬಲ್ ರೈಡಿಂಗ್, ಶ್ರೀನಗರ ಕಿಟ್ಟಿ ಮತ್ತು ಸಿದ್ಧಾರ್ಥ್ ಮಹೇಶ್ ನಟನೆಯ ಗರುಡ, ರಿಷಬ್ ಶೆಟ್ಟಿ ನಿರ್ದೇಶನದ ಹೀರೋ, ಜೆಕೆ ನಟನೆಯ ಐವಾರನ್, ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ರಣಂ ಚಿತ್ರದ ಪೋಸ್ಟರ್ ಸಹ ರಿಲೀಸ್ ಆಗಿದೆ.

  English summary
  Salaga, Yuvarathna, Headbush, Roberrt and some other upcoming Kannada Movies Wishes Happy New Year 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X