»   »  ನಿರ್ದೇಶನಕ್ಕೆ ಮತ್ತೆ ರಿಯಲ್ ಸ್ಟಾರ್ ಉಪೇಂದ್ರ

ನಿರ್ದೇಶನಕ್ಕೆ ಮತ್ತೆ ರಿಯಲ್ ಸ್ಟಾರ್ ಉಪೇಂದ್ರ

Subscribe to Filmibeat Kannada
Upendra back to direction
'ಲಂಡನ್ ಗೌಡ' ಚಿತ್ರವೇ ಕೊನೆ, ಇನ್ನು ಮುಂದೆ ಬೇರೆಯವರ ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುವುದಿಲ್ಲವಂತೆ. ತಾವೇ ಕತೆ, ಚಿತ್ರಕತೆ ಬರೆದು ನಿರ್ದೇಶಿಸುವ ಕಾಲ ಹತ್ತಿರವಾಗಿದೆ. ಲಂಡನ್ ಗೌಡ ಚಿತ್ರದ ಮುಗಿದ ಬಳಿಕ ತಮ್ಮ ಸ್ವಂತ ನಿರ್ಮಾಣದ ಕನಸು ಮತ್ತೆ ನನಸಾಗಲಿದೆ ಎನ್ನುತ್ತಾರೆ ಉಪೇಂದ್ರ.

ಇತ್ತೀಚೆಗೆ ತೆರೆಕಂಡ 'ದುಬಯ್ ಬಾಬು' ಚಿತ್ರ ಉಪ್ಪಿಗೆ ಸಮಾಧಾನ ತಂದಿದೆಯಂತೆ. ಈ ಹಿಂದಿನ 'ಬುದ್ಧಿವಂತ' ಚಿತ್ರದ ಗೆಲುವು ತಮಗೆ ಹೊಸ ಉತ್ಸಾಹ ತುಂಬಿದೆ. ರುಪ್ಪಿ ರೆಸಾರ್ಟ್ ವ್ಯವಹಾರಗಳು ಮುಗಿದಿವೆ. ಹಾಗಾಗಿ ತಾವು ಮತ್ತೆ ಆಕ್ಷನ್, ಕಟ್ ಹೇಳುವ ಕಾಲ ಸನ್ನಿಹಿತವಾಗಿದೆ ಎನ್ನುತ್ತಾರೆ ಉಪೇಂದ್ರ.

ಉಪೇಂದ್ರ ಅವರು ಮರಳಿ ನಿರ್ದೇಶನಕ್ಕೆ ಬರಲಿ ಎಂಬುದು ಅವರ ಪ್ರೇಕ್ಷಕರ ಒತ್ತಾಸೆ. ಮತ್ತೆ ನಿರ್ದೇಶನಕ್ಕೆ ಬರುವ ಮೂಲಕ ಉಪೇಂದ್ರ ಅವರ ಆಸೆಯನ್ನು ಪೂರೈಸಿದಂತಾಗುತ್ತದೆ. ಅಂದಿನ ಉಪೇಂದ್ರ ಹಾಗೂ ಇಂದಿನ ಪ್ರೇಕ್ಷಕ ಇಬ್ಬರೂ ಬದಲಾಗಿದ್ದಾರೆ. ಇಂದಿನ ಪೀಳಿಗೆಯ ಪ್ರೇಕ್ಷಕನಿಗೆ ಯಾವ ರೀತಿಯ ಚಿತ್ರ ಕೊಡಬೇಕು ಎಂಬುದು ಸದ್ಯಕ್ಕೆ ಉಪ್ಪಿ ತಲೆಯಲ್ಲಿ ಕೊರೆಯುತ್ತಿರುವ ವಿಷಯ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada