»   » ಬಾಲಿವುಡ್ ಗೆ ರಿಯಲ್ ಸ್ಟಾರ್ ಉಪೇಂದ್ರ ಬ್ರಹ್ಮ

ಬಾಲಿವುಡ್ ಗೆ ರಿಯಲ್ ಸ್ಟಾರ್ ಉಪೇಂದ್ರ ಬ್ರಹ್ಮ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಣೀತಾ ಮುಖ್ಯಭೂಮಿಕೆಯಲ್ಲಿರುವ 'ಬ್ರಹ್ಮ' ಚಿತ್ರದ ಡಬ್ಬಿಂಗ್ ರೈಟ್ಸ್ ಬಾಲಿವುಡ್ ಗೆ ಮಾರಾಟವಾಗಿವೆ. ಆದರೆ ಎಷ್ಟೆಕ್ಕೆ ಎಂಬ ಬಗ್ಗೆ ಚಿತ್ರತಂಡದ ಯಾರೂ ಬಾಯಿಬಿಡುತ್ತಿಲ್ಲ.

ಬಹುಶಃ ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಸಿಗಬಹುದೇನೋ. ಚಿತ್ರದ ಟ್ರೇಲರ್ ನೋಡಿದ ಬಾಲಿವುಡ್ ನಿರ್ಮಾಪಕರು ಡಬ್ಬಿಂಗ್ ರೈಟ್ಸ್ ಪಡೆದಿದ್ದಾರೆ. ಅವರು ಯಾರು ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕು.


ಇನ್ನೂ ಚಿತ್ರೀಕರಣ ಹಂತದಲ್ಲೇ 'ಬ್ರಹ್ಮ' ಚಿತ್ರದ ರೈಟ್ಸ್ ಮಾರಾಟವಾಗಿರುವುದು ವಿಶೇಷ. ಈಗಾಗಲೆ ಬ್ರಹ್ಮ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನೆಲಮಂಗಲ ಬಳಿ ಯುದ್ಧದ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ.

ಯುದ್ಧದ ಸನ್ನಿವೇಶಗಳು, ರಾಜಮನೆತನದ ದೃಶ್ಯಗಳು, ಚೇಸಿಂಗ್ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲು ಬ್ಲ್ಯಾಕ್ ಮ್ಯಾಜಿ ಕ್ಯಾಮೆರಾ ಸೇರಿದಂತೆ ಐದು ಕ್ಯಾಮೆರಾಗಳನ್ನು ಬಳಸಿಕೊಂಡಿದ್ದಾರೆ.

ಆರ್ ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ. ಕನ್ನಡ, ತೆಲುಗಿನಲ್ಲಿ ಬ್ರಹ್ಮ ಎಂದೇ ಶೀರ್ಷಿಕೆ ಇಡಲಾಗಿದೆ. ತಮಿಳು ಚಿತ್ರಕ್ಕೆ 'ಕ್ಷತ್ರಿಯನ್' ಎಂದಿಡಲಾಗಿದೆ.

ಮೈಲಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಂಜುನಾಥ ಬಾಬು (ಅಮೃತಹಳ್ಳಿ) ನಿರ್ಮಿಸುತ್ತಿರುವ ಚಿತ್ರ. ಆರ್.ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಉಪೇಂದ್ರ ಅಭಿನಯಿಸುತ್ತಿದ್ದಾರೆ.

ಪ್ರಣೀತಾ, ರಂಗಾಯಣ ರಘು, ಸಾಧುಕೋಕಿಲ, ಶಯ್ಯಾಜಿ ಶಿಂಧೆ, ನಾಜರ್, ರಾಹುಲ್ ದೇವ್, ಸೋನು ಸೂಧ್, ಸುಭಾಷ್ ಶೆಟ್ಟಿ, ಗಿರೀಶ್ ಕಾರ್ನಾಡ್, ಕಾಟ್ ರಾಜು, ಬುಲೆಟ್ ಪ್ರಕಾಶ್, ಜಾನ್ ಕೊಕೇನ್, ಮಂಗಳೂರು ಸುರೇಶ್, ಲಕ್ಷ್ಮಣ್, ಶರಣ್, ಪದ್ಮಜಾರಾವ್, ಸುಚೇಂದ್ರಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಶೇಖರ್ ಚಂದ್ರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್, ಇಸ್ಮಾಯಿಲ್ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು, ವಿಜಯ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಆಂಟೋನಿ ಅವರ ನೃತ್ಯ ನಿರ್ದೇಶನ 'ಬ್ರಹ್ಮ' ಚಿತ್ರಕ್ಕಿದೆ. (ಏಜೆನ್ಸೀಸ್)

English summary
Kannada film Brahma dubbing rights sold for Bollywood. The historical drama romance film directed by R. Chandru and produced by Manjunath Babu. The film stars Upendra, essaying dual roles, and Pranitha Subhash in the lead roles.
Please Wait while comments are loading...