»   » ಚಂದ್ರು ಜನ್ಮದಿನದಂದೇ ಉಪ್ಪಿ 'ಬ್ರಹ್ಮ'ನಾಗಿ ತೆರೆಗೆ

ಚಂದ್ರು ಜನ್ಮದಿನದಂದೇ ಉಪ್ಪಿ 'ಬ್ರಹ್ಮ'ನಾಗಿ ತೆರೆಗೆ

Posted By:
Subscribe to Filmibeat Kannada

ಯಶಸ್ವಿ ನಿರ್ದೆಶಕ ಆರ್ ಚಂದ್ರು ಅವರ ಹುಟ್ಟುಹಬ್ಬದ ದಿನದಂದು ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಅವರು 'ಬ್ರಹ್ಮ' ನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. 2014ರ ಬಹು ನಿರೀಕ್ಷಿತ ಚಿತ್ರ ಎಂದೇ ಜನಪ್ರಿಯತೆ ಪಡೆದುಕೊಂಡಿರುವ ಬ್ರಹ್ಮ ಇತ್ತೀಚೆಗಷ್ಟೇ ಪೋಸ್ಟ್ ಪ್ರೊಡೆಕ್ಷನ್ ಕೆಲಸ ಮುಗಿಸಿ ರಿಲೀಸ್ ಆಗಲು ಸಿದ್ಧವಾಗಿದೆ.

ಫೆಬ್ರವರಿ ಮೊದಲ ವಾರದಲ್ಲ್ಲೇ ಆರ್ ಚಂದ್ರು ಅವರ ಶತದಿನೋತ್ಸವ ಕಂಡ 'ಚಾರ್ಮಿನಾರ್' ಚಿತ್ರ ತೆರೆಕಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. 'ಬ್ರಹ್ಮ'ನನ್ನೂ ಫೆಬ್ರವರಿ ಮೊದಲ ವಾರದಲ್ಲಿ ತೆರೆಗೆ ತರಲು ಆರ್ ಚಂದ್ರುಹಾಗೂ ಅವರ ತಂಡ ಬಹು ಹಿಂದೆಯೇ ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ಉಪೇಂದ್ರ ಅವರ ಜೋಡಿ ಮೊದಲ ಬಾರಿಗೆ ಪ್ರಣೀತಾ ನಾಯಕಿಯಾಗಿದ್ದು ಚಿತ್ರ ಫೆ.7ರಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಡಬ್ಬಿಂಗ್ ಬೇಕೇ? ಬೇಡವೇ ಎಂಬ ವಿವಾದ ಭೂತಾಕಾರವಾಗಿ ಬೆಳೆಯುತ್ತಿರುವ ಸಂದರ್ಭದಲ್ಲೇ ಕನ್ನಡದ 'ಬ್ರಹ್ಮ' ನಿಗೆ ಪರಭಾಷೆಯಲ್ಲೂ ಬೇಡಿಕೆ ಬಂದಿದ್ದು, ತೆಲುಗು, ತಮಿಳು ಭಾಷೆಗೆ ಚಿತ್ರ ಡಬ್ ಆಗುತ್ತಿದೆ. ತಾಜ್ ಮಹಲ್, ಮೈಲಾರಿ, ಚಾರ್ಮಿನಾರ್ ನಂಥ ಹಿಟ್ ಚಿತ್ರಗಳನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಆರ್ ಚಂದ್ರು ಅವರ 'ಬ್ರಹ್ಮ' ಚಿತ್ರದ ಮೇಲೆ ಅಭಿಮಾನಿಗಳಷ್ಟೇ ಅಲ್ಲ ನ್ನಡ ಚಿತ್ರರಂಗದ ವ್ಯವಹಾರಸ್ಥರು ಕೂಡಾ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ನಿನ್ನಿಂದಲೇ ಚಿತ್ರಕ್ಕೆ ಸಿಕ್ಕಿರುವ ಸಪ್ಪೆ ಪ್ರತಿಕ್ರಿಯೆಯಿಂದ ಚಿತ್ರರಂಗ ಕೂಡಾ ಕಂಗಾಲಾಗಿರುವುದು ಸುಳ್ಳಲ್ಲ. ಹೀಗಾಗಿ ವರ್ಷಾರಂಭದಲ್ಲಿ ಒಂದು ಭರ್ಜರಿ ಹಿಟ್ ನಿರೀಕ್ಷೆ ಇದ್ದೇ ಇದೆ.

2014ರ ಬಹುನಿರೀಕ್ಷಿತ ಚಿತ್ರ ಉಪೇಂದ್ರ-ಬ್ರಹ್ಮ

ಸುಮಾರು 1000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಉಪೇಂದ್ರ ಹಾಗೂ ಪ್ರಣೀತಾ ಅಭಿನಯದ ಬ್ರಹ್ಮ ಬರಲಿದ್ದಾನೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಉಪೇಂದ್ರ-ಬ್ರಹ್ಮ ಚಿತ್ರದ ಡಬ್ಬಿಂಗ್ ಗೆ ಭಾರಿ ಬೇಡಿಕೆ

ರಿಯಲ್ ಸ್ಟಾರ್ ಅವರ ಉಪೇಂದ್ರ ಅವರ ಬ್ರಹ್ಮ ಚಿತ್ರ ಕನ್ನಡದ ಜತೆಗೆ ತೆಲುಗು, ತಮಿಳು ಭಾಷೆಯಲ್ಲೂ ಡಬ್ ಆಗಿ ಬರುತ್ತಿದೆ. ಅಲ್ಲದೆ ಚಿತ್ರದ ರಿಮೇಕ್ ಹಕ್ಕು ಮಾರಾಟಕ್ಕೂ ಬೇಡಿಕೆ ಬಂದಿದೆಯಂತೆ. ಚಿತ್ರದ ಹಕ್ಕುಗಳು 15ಕೋಟಿ ರುಗೂ ಅಧಿಕ ಮೊತ್ತಕ್ಕೆ ಸೇಲ್ ಆಗಿದೆಯಂತೆ

ಹೊರ ದೇಶಗಳಲ್ಲೂ ಬ್ರಹ್ಮ ಬಿಡುಗಡೆಗೆ ಬೇಡಿಕೆ

ತೆಲುಗು ಹಾಗೂ ತಮಿಳು ಆವೃತ್ತಿ ಬ್ರಹ್ಮ ಬಿಡುಗಡೆ ಜತೆಗೆ ಸಾಗರೋತ್ತರ ದೇಶಗಳಲ್ಲಿ ಬ್ರಹ್ಮ ಚಿತ್ರ ಬಿಡುಗಡೆಗೆ ಬೇಡಿಕೆ ಹೆಚ್ಚುತ್ತಿದೆಯಂತೆ. ಮಲೇಷಿಯಾ, ಸಿಂಗಪುರ, ಅಮೆರಿಕ, ಆಸ್ಟ್ರೇಲಿಯಾದಲ್ಲೂ ಸಿನಿರಸಿಕರಿಗೆ ಬ್ರಹ್ಮನ ದರ್ಶನ ಭಾಗ್ಯ ಸಿಗುವ ಸಾಧ್ಯತೆಯಿದೆ.

ಮಜಾ ಎಂದ್ರೆ ಚಿತ್ರದ ಸೆನ್ಸಾರ್ ಇನ್ನೂ ಆಗಿಲ್ಲ

ಜನವರಿ ಕೊನೆ ವಾರದೊಳಗೆ ಚಿತ್ರದ ಸೆನ್ಸಾರ್ ಮಾಡಿ ಮುಗಿಸುವ ಆತುರದಲ್ಲಿ ಆರ್ ಚಂದ್ರು ಅವರ ತಂಡವಿದೆ.ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಗ್ಯಾರಂಟಿ ಎನ್ನಲಾಗಿದೆ.

ಬ್ರಹ್ಮ ಚಿತ್ರದಲ್ಲಿದೆ ಭರ್ಜರಿ ತಾರಾಗಣ

ಉಪೇಂದ್ರ ಹಾಗೂ ಪ್ರಣೀತಾ ಅವರು ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಸೋನು ಸೂದ್, ಅನಂತ್ ನಾಗ್, ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಸುಚೇಂದ್ರ ಪ್ರಸಾದ್, ಸುಮಿತ್ರಾ ಮುಂತಾದ ಕಲಾವಿದ

ಬ್ರಹ್ಮ ವಿಡಿಯೋಗಳು ಸದ್ದು ಮಾಡುತ್ತಿವೆ

ಚಿತ್ರದ ಮೇಕಿಂಗ್ ವಿಡಿಯೋ, ಫಸ್ಟ್ ಲುಕ್ ಝಲಕ್ ಲಕ್ಷಾಂತರ ಹಿಟ್ ನೀಡಿದೆ. 'The Leader' ಎಂಬ ಅಡಿಬರಹ ಹೊಂದಿರುವ ಮೈಲಾರಿ ಎಂಟರ್ ಪ್ರೈಸಸ್ ನ ಈ ಚಿತ್ರದ ಟ್ರೇಲರ್ ಕೂಡಾ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.

English summary
Superstar Upendra starrer Brahma - The Leader, which has wrapped up its post production work recently, has announced its release date. The makers of the much hyped movie have revealed that the movie will be released on February 7, 2014.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada