ಮಕ್ಕಳ ಸಂಭ್ರಮವನ್ನ ಹಂಚಿಕೊಂಡ ಉಪೇಂದ್ರ ದಂಪತಿ
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರು ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ತಮ್ಮ ಖಾಸಗಿ ಜೀವನವನ್ನ ಹೆಚ್ಚು ಸಂತೋಷವಾಗಿರಿಸಿಕೊಂಡಿದ್ದಾರೆ. ಹೀಗಾಗಿ, ಉಪ್ಪಿ ದಂಪತಿ ಎಲ್ಲರಿಗೂ ಒಂದು ರೀತಿಯಾಗಿ ಮಾದರಿ.
ತಂದೆ-ತಾಯಿ, ಮಕ್ಕಳು ಹೀಗೆ ಕುಟುಂಬದ ಪ್ರತಿಯೊಂದು ಸಂತೋಷ, ಸಂಭ್ರಮವನ್ನ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಉಪ್ಪಿ ಹಾಗೂ ಪ್ರಿಯಾಂಕಾ ದಂಪತಿ, ಇತ್ತೀಚೆಗೆ ತಮ್ಮ ಮಕ್ಕಳ ಸಂತೋಷವನ್ನ ಹಂಚಿಕೊಂಡಿದ್ದಾರೆ.

ಉಪೇಂದ್ರ ದಂಪತಿಯ ಮಕ್ಕಳಾದ ಆಯುಶ್ ಹಾಗೂ ಐಶ್ವರ್ಯ, ಇಬ್ಬರು ತಮ್ಮ ಶಾಲೆಯ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಕೂಡ ಸಾಕ್ಷಿಯಾಗಿದ್ದರು.
ಶಾಲೆಯ ಮಕ್ಕಳೆಲ್ಲಾ ಸೇರಿ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನ ಬಿಂಬಿಸುವಂತಹ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್ ನಲ್ಲಿ ಆಯುಶ್ ಹಾಗೂ ಐಶ್ವರ್ಯ ಕೂಡ ಕಾಣಿಸಿಕೊಂಡಿದ್ದಾರೆ. ಹೀಗೆ, ತಮ್ಮ ಮಕ್ಕಳ ನೃತ್ಯ ನೋಡಿ ಸಂತಸಗೊಂಡ ಉಪ್ಪಿ ದಂಪತಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.


Click it and Unblock the Notifications











