For Quick Alerts
  ALLOW NOTIFICATIONS  
  For Daily Alerts

  ಡೈರೆಕ್ಷನ್ ಮಾಡಿ ಅಂತಿದ್ದವರಿಗೆ 'ಮೆಗಾ ಬ್ರೇಕಿಂಗ್' ನೀಡಿದ ಉಪೇಂದ್ರ

  |

  ಎಲ್ಲರೂ ಅಂದುಕೊಂಡಂತೆ ಉಪೇಂದ್ರ ಡೈರೆಕ್ಷನ್ ನಿಂದ ನಿವೃತ್ತಿಯಾಗಿಲ್ಲ. ಬ್ರೇಕ್ ಕೂಡ ತೆಗೆದುಕೊಂಡಿಲ್ಲ. ನಿರ್ದೇಶನ ಮಾಡೇ ಮಾಡ್ತಾರೆ. ಇದನ್ನ ನಾವು ಹೇಳ್ತಿಲ್ಲ. ನೇರವಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರೇ ಬಹಿರಂಗವಾಗಿ ಹೇಳಿದ್ದಾರೆ.

  ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಉಪ್ಪಿ ಡೈರೆಕ್ಷನ್ ಮಾಡಿ ಎಂದು ದೊಡ್ಡ ಅಭಿಯಾನವೇ ನಡೆದಿತ್ತು. ಪ್ರಜಾಕೀಯ ಕೈಗೆತ್ತಿಕೊಂಡು ನಿರ್ದೇಶನ ಮಾಡ್ತಿಲ್ಲ, ಅಭಿಮಾನಿಗಳನ್ನ ನೀವು ಲೆಕ್ಕಿಸುತ್ತಿಲ್ಲ ಎಂದು ಕಾಲೆಳೆದಿದ್ದರು.

  ''ಬರಿ ರೀಮೇಕ್ ಮಾಡ್ತೀರಾ ಯಾಕೆ'' ಎಂದಿದ್ದಕ್ಕೆ ಉಪೇಂದ್ರ ಹೇಳಿದ್ದೇನು ಗೊತ್ತಾ.?

  ಅದಕ್ಕೆಲ್ಲಾ ತೆರೆ ಎಳೆದ ಉಪೇಂದ್ರ ಅವರು, ತಾವು ನಿರ್ದೇಶನ ಮಾಡುತ್ತಿರುವುದಾಗಿ, ಮತ್ತು ಆ ಚಿತ್ರವನ್ನ ಸದ್ಯದಲ್ಲೇ ಅನೌನ್ಸ್ ಮಾಡುವುದಾಗಿಯೂ ಖಚಿತಪಡಿಸಿದ್ದಾರೆ. ಹಾಗಿದ್ರೆ, ಉಪ್ಪಿ ಡೈರೆಕ್ಷನ್ ಚಿತ್ರದ ಬಗ್ಗೆ ಮತ್ತೇನು ಹೇಳಿದ್ರು.? ಮುಂದೆ ಓದಿ.....

  ಸಿನಿಮಾ ಸ್ಕ್ರಿಪ್ಟ್ ಮಾಡ್ತಿದ್ದೀನಿ

  ಸಿನಿಮಾ ಸ್ಕ್ರಿಪ್ಟ್ ಮಾಡ್ತಿದ್ದೀನಿ

  ''ನನಗೊಂದು ವಿಷ್ಯ ಹೊಳೆಯಬೇಕು. ಅದು ಹೊಳೆದಾಗ, ಅದನ್ನ ಅಭಿವೃದ್ದಿ ಪಡಿಸಬೇಕು. ಅದಕ್ಕೆ ಟೈಂ ಬೇಕು. ನಾನು ಸಿನಿಮಾ ಸ್ಕ್ರಿಪ್ಟ್ ಮಾಡ್ತಿದ್ದೀನಿ. ನನ್ನ ನಿರ್ದೇಶನದ ಸಿನಿಮಾಗಳ ಮೇಲೆ ನೀವು ಇಷ್ಟೊಂದು ನಂಬಿಕೆ ಇಟ್ಟುಕೊಂಡಿರ್ತೀರಾ. ಅದನ್ನ ಕಳೆದುಕೊಳ್ಳಲು ನಾನು ರೆಡಿಯಿಲ್ಲ. ಹಾಗಾಗಿ, ಅದಕ್ಕೆ ಬೇಕಾಗಿರುವ ತಯಾರಿ ಮಾಡ್ತಿದ್ದೇನೆ''

  'ಕೆಜಿಎಫ್' ಟ್ರೈಲರ್ ನೋಡಿ ಉಪೇಂದ್ರ ಕಾಲೆಳೆದ ಅಭಿಮಾನಿ

  ಶೀಘ್ರದಲ್ಲೇ ಘೋಷಣೆ

  ಶೀಘ್ರದಲ್ಲೇ ಘೋಷಣೆ

  ''ನನ್ನ ಸಿನಿಮಾಗಳನ್ನ ನೋಡಿದಾಗ, ನಿಮಗೆ ಅದು ಮನರಂಜನೆ, ವಿಚಾರಗಳು ಮನಮುಟ್ಟಬೇಕು. ನಿಮ್ಮಲ್ಲಿ ಏನಾದರೂ ಬದಲಾವಣೆ ತರಬಲ್ಲದು ಎಂಬ ವಿಷ್ಯಗಳನ್ನ ನೀಡುವ ಪ್ರಯತ್ನ ಮಾಡ್ತಿದ್ದೀನಿ. ಅಂತಹ ಸಿನಿಮಾ ಮಾಡ್ತೀನಿ. ಸದ್ಯದಲ್ಲೇ ಅನೌನ್ಸ್ ಕೂಡ ಮಾಡ್ತೀನಿ'' ಎಂದು ಹೇಳುವ ಮೂಲಕ ಆಲ್ ರೆಡಿ ಉಪ್ಪಿ ನಿರ್ದೇಶನದ ಸ್ಕ್ರಿಪ್ಟ್ ಪಕ್ಕಾ ಆಗಿದೆ ಎಂಬುದನ್ನ ಖಚಿತಪಡಿಸಿದ್ದಾರೆ.

  ಕನಸಿನ 'ಪ್ರಜಾಕೀಯ'ವನ್ನೇ ಬಿಡಲು ಸಿದ್ಧವಾದ ಉಪೇಂದ್ರ.? ಕಾರಣ ಯಾರು.?

  ಡೈರೆಕ್ಷನ್ ಬಿಡಲ್ಲ

  ಡೈರೆಕ್ಷನ್ ಬಿಡಲ್ಲ

  ಪ್ರಜಾಕೀಯವನ್ನ ಕೈಗೆತ್ತಿಕೊಂಡು ಮೇಲೆ ಉಪ್ಪಿ ನಿರ್ದೇಶನ ಬಿಡ್ತಾರೆ, ಸಿನಿಮಾ ಮಾಡಲ್ಲ ಎಂಬ ಮಾತುಗಳು ಕೇಳಿ ಬಂದವು. ಆದ್ರೆ, ಇದರ ಬಗ್ಗೆ ಮತ್ತೆ ಉಪೇಂದ್ರ ಸ್ಪಷ್ಟನೇ ನೀಡಿದ್ದಾರೆ. ''ಪ್ರಜಾಕೀಯ ಎನ್ನುವುದು ಒಂದು ಕೆಲಸ. ಅದರ ಜೊತೆಗೆ ನಮ್ಮ ಕೆಲಸವೂ ಮಾಡಬೇಕು. ನಾನೊಬ್ಬ ಪ್ರಜೆಯಾಗಿ ನನ್ನ ಕೆಲಸದ ಜೊತೆ ಪ್ರಜಾಕೀಯವನ್ನ ಕೂಡ ಮಾಡುತ್ತಿದ್ದೇನೆ. ಬಿಡುವು ಸಿಕ್ಕಾಗ ಸ್ಕ್ರಿಪ್ಟ್ ಮಾಡ್ತೀನಿ'' ಎಂದು ಸಂತಸದ ವಿಷ್ಯವನ್ನ ಹೊರಹಾಕಿದ್ದಾರೆ.

  ಉಪೇಂದ್ರಗೆ 'ಹೀಗೆ ಮಾಡಬೇಡಿ' ಎಂದ '2.0' ನಿರ್ದೇಶಕ ಶಂಕರ್.!

  ಯಾರೂ ನಿರಾಸೆಯಾಗಬೇಡಿ

  ಯಾರೂ ನಿರಾಸೆಯಾಗಬೇಡಿ

  ''ದಯವಿಟ್ಟು ಯಾರೂ ನಿರಾಸೆಯಾಗಬೇಡಿ. ನಾನು ಡೈರೆಕ್ಷನ್ ಮಾಡ್ತೀನಿ. ನಿಮ್ಮ ನಿರೀಕ್ಷೆ, ನಂಬಿಕೆಗೆ ತಕ್ಕನಾದ ಸಿನಿಮಾ ಮಾಡಬೇಕು ಎನ್ನುವುದು ನನ್ನ ಜವಾಬ್ದಾರಿ. ಅದರ ಜೊತೆಗೆ ಪ್ರಜಾಕೀಯ ಎಂಬ ನಿಜ ಜೀವನದ ಚಿತ್ರವನ್ನ ಕೂಡ ಮಾಡುತ್ತೇನೆ' ಎಂದು ಉಪ್ಪಿ ಹೇಳಿದ್ದಾರೆ.

  ಡಾ ರಾಜ್ ಗಾಗಿ ಉಪೇಂದ್ರ ಬರೆದಿದ್ದ ಹಾಡು ನಿಂತು ಹೋದ ಕಥೆ

  English summary
  Kannada actor, director Upendra has give clarification about his direction and prajakeeya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X