For Quick Alerts
  ALLOW NOTIFICATIONS  
  For Daily Alerts

  'ಐ ಲವ್ ಯೂ' ಚಿತ್ರದಲ್ಲಿ ಸಖತ್ ಸರ್ಪ್ರೈಸ್ ಕೊಟ್ಟ ಉಪೇಂದ್ರ

  By Bharath Kumar
  |
  ಉಪ್ಪಿ ಪಾತ್ರ ಏನು ಅಂತ ಗೊತ್ತಾಗೋಯ್ತು..! | Filmibeat Kannada

  ಆರ್ ಚಂದ್ರು ನಿರ್ದೇಶನ ಮಾಡುತ್ತಿರುವ 'ಐ ಲವ್ ಯೂ' ಚಿತ್ರದಲ್ಲಿ ರಿಯಲ್ ಸ್ಟಾರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಟೈಟಲ್ ನಿಂದಲೇ ಹೆಚ್ಚು ಸದ್ದು ಮಾಡಿದ್ದ ಈ ಸಿನಿಮಾ ಮೇಕಿಂಗ್ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿತ್ತು.

  ಇದೀಗ, 'ಐ ಲವ್ ಯೂ' ಚಿತ್ರದಲ್ಲಿ ಉಪೇಂದ್ರ ಅವರ ಕುರಿತು ಇಂಟ್ರೆಸ್ಟಿಂಗ್ ವಿಷ್ಯ ಬಹಿರಂಗವಾಗಿದೆ. ಹೌದು, 'ಐ ಲವ್ ಯೂ' ಚಿತ್ರದಲ್ಲಿ ಉಪ್ಪಿ ಅವರ ಪಾತ್ರ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಿರುವಾಗ ಉಪ್ಪಿಯ ಹೊಸ ಲುಕ್ ಬಿಸಿಬಿಸಿ ಚರ್ಚೆಯಾಗುತ್ತಿದೆ.

  ಹೌದು, ಐ ಲವ್ ಯೂ ಚಿತ್ರದಲ್ಲಿ ಉಪೇಂದ್ರ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕಿಳಿದಿದ್ದಾರೆ. ವೃತ್ತಿಪರ ಕ್ರಿಕೆಟಿಗರಂತೆ ಪ್ಯಾಡ್, ಗ್ಲೌಸ್ ಹಾಕಿ ಫೋಸ್ ಕೊಟ್ಟಿರುವ ಫೋಟೋವನ್ನ ಸ್ವತಃ ಉಪ್ಪಿ ಅವರೇ ಶೇರ್ ಮಾಡಿಕೊಂಡಿದ್ದಾರೆ.

  ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ರಚಿತಾ ರಾಮ್ !ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ರಚಿತಾ ರಾಮ್ !

  ಇದು 'ಐ ಲವ್ ಯೂ' ಚಿತ್ರದ್ದೇ ಎನ್ನುವುದಕ್ಕೆ ಈ ಫೋಟೋ ಮೇಲೆ 'ಐ ಲವ್ ಯೂ' ಮತ್ತು ಆರ್ ಚಂದ್ರು ಎಂಬ ವಾಟರ್ ಮಾರ್ಕ್ಸ್ ಇರೋದೇ ಕಾರಣ. ಇನ್ನು ಸಿನಿಮಾದಲ್ಲಿ ಕ್ರಿಕೆಟಿಗನಾಗಿ ಕಾಣಿಸಿಕೊಂಡಿದ್ದಾರಾ ಅಥವಾ ಸಣ್ಣದೊಂದು ದೃಶ್ಯಕ್ಕಾಗಿ ಈ ಗೆಟಪ್ ಹಾಕಿದ್ದಾರೋ ಗೊತ್ತಿಲ್ಲ. ಆದ್ರೆ, ಈ ಫೋಟೋ ಮಾತ್ರ ಸೂಪರ್ ಆಗಿದೆ.

  ಇನ್ನು ಇತ್ತೀಚಿಗಷ್ಟೆ ಐ ಲವ್ ಯೂ ಚಿತ್ರದ ಸೆಟ್ ನಲ್ಲಿ ನಟಿ ರಚಿತಾ ರಾಮ್ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ್ದರು. ಆ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿತ್ತು.

  ಇನ್ನು ಸ್ಯಾಂಡಲ್ ವುಡ್ ತಾರೆಯರೆಲ್ಲಾ ಸೇರಿ ಆಡಲಿರುವ ಕೆಸಿಸಿ ಕ್ರಿಕೆಟ್ ಟೂರ್ನಿ ಎರಡನೇ ಆವೃತ್ತಿಯಲ್ಲಿ ನಟ ಉಪೇಂದ್ರ ಕೂಡ ಆಡಲಿದ್ದು, ತಂಡವೊಂದರಲ್ಲಿ ಆಟಗಾರನಾಗಿ ಆಡಲಿದ್ದಾರೆ. ಮುಂದಿನ ತಿಂಗಳು ಈ ಟೂರ್ನಿ ಆರಂಭವಾಗಲಿದೆ.

  English summary
  Kannada actor Upendra played cricket at the I Love You cinema. may be uppi playing cricketer role in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X