twitter
    For Quick Alerts
    ALLOW NOTIFICATIONS  
    For Daily Alerts

    ರೈತರಿಗೆ ಒಳ್ಳೆಯ ಸುದ್ದಿ: ಉಪೇಂದ್ರ ಅವರ ವಿನಂತಿಯನ್ನೊಮ್ಮೆ ನೋಡಿ

    |

    ಕೊರೊನಾ ವೈರಸ್‌ನಿಂದ ರೈತಾಪಿ ವರ್ಗ ಬಹಳ ದೊಡ್ಡ ಮಟ್ಟದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಬೆಳೆದ ಬೆಳೆಯನ್ನು ಸೂಕ್ತ ಸಮಯಕ್ಕೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಸೂಕ್ತ ಸಮಯಕ್ಕೆ ಮಾರುಕಟ್ಟೆಗಳಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ತೋರುತ್ತಿರುವ ಘಟನೆಗಳು ವರದಿಯಾಗಿದೆ.

    ಆಡಳಿತ ವ್ಯವಸ್ಥೆ ಹಾಗೂ ಲಾಕ್‌ಡೌನ್ ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸುವ ಹಿನ್ನೆಲೆ ಬೆಳೆದ ಬೆಳೆಯನ್ನು ರಸ್ತೆ ಬದಿ, ಹಳ್ಳಗಳಿಗೆ ಬಿಸಾಕುತ್ತಿರುವ ದೃಶ್ಯಗಳು ಕಾಣ ಸಿಗುತ್ತಿವೆ.

    ಬಾಲನಟನಿಂದ ನೆರವು, ರೈತರಿಂದ ನೇರವಾಗಿ ಬೆಳೆ ಖರೀದಿಗೆ ಮುಂದಾದ ಉಪೇಂದ್ರಬಾಲನಟನಿಂದ ನೆರವು, ರೈತರಿಂದ ನೇರವಾಗಿ ಬೆಳೆ ಖರೀದಿಗೆ ಮುಂದಾದ ಉಪೇಂದ್ರ

    ಇಂತಹ ರೈತ ವರ್ಗಕ್ಕೆ ಒಂದಿಷ್ಟು ಸಹಾಯವಾಗಲಿ ಎಂಬ ಕಾರಣಕ್ಕೆ ನಟ-ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಕಾರ್ಯಕ್ರಮ ಹಂಚಿಕೊಂಡಿದ್ದಾರೆ. ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ದೇಣಿಗೆ ಸಂಗ್ರಹಿಸುತ್ತಿರುವ ಉಪೇಂದ್ರ ರೈತರಿಂದ ನೇರವಾಗಿ ಬೆಳೆ ಖರೀದಿಸಿ ಅದನ್ನು ಜನಸಾಮಾನ್ಯರಿಗೆ ದಿನಸಿ ಕಟ್ ಅಥವಾ ರೇಷನ್ ಕಿಟ್‌ನಲ್ಲಿ ಕೊಡಲು ನಿರ್ಧರಿಸಿದ್ದಾರೆ.

     Upendra Decided To Purchase Crop from Directly Farmers

    ಹಾಗಾಗಿ, ರೈತರಿಂದಲೇ ನೇರವಾಗಿ ಬೆಳೆ ಖರೀದಿ ಮಾಡುತ್ತೇನೆ ಎಂದು ಇತ್ತೀಚಿಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈಗ ರೈತರಲ್ಲಿ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. ನೀವು ಬೆಳೆದ ಬೆಳೆಗಳ ಬಗ್ಗೆ ಮಾಹಿತಿ ಒದಗಿಸಿ, ಅದನ್ನು ನಾವು ಖರೀದಿಸುತ್ತೇವೆ ಎಂದು ಕರೆ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಉಪೇಂದ್ರ ''ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ.... ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ. ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ( 24 ಮೇ 2021 ರ ಒಳಗೆ ) Mbl no 9845763396'' ಎಂದು ಕೇಳಿಕೊಂಡಿದ್ದಾರೆ.

    ರೈತರು ಹಂಚಿಕೊಳ್ಳಬೇಕಾದ ಮಾಹಿತಿ

    1. ನೀವು ಬೆಳೆದ ಬೆಳೆ ಯಾವುದು ?

    2. ಆ ಬೆಳೆ ಎಷ್ಟು ಕೆಜಿ/ ಕ್ವಿಂಟಾಲ್ ಇದೆ ?

    3. ಅದರ ಅಂತಿಮ ಬೆಲೆ ಎಷ್ಟು ?

    4. ಅದನ್ನು ಬೆಂಗಳೂರಿಗೆ ಸಾಗಿಸಲು ಸಾರಿಗೆ ವಚ್ಚ ಎಷ್ಟು ?

    ಈ ವಿವರಗಳನ್ನು ದಯವಿಟ್ಟು ಕಳಿಸಿಕೊಡಿ.

    Recommended Video

    Prashant Sambargi ಕಿತ್ತೂರು ರಾಣಿ ಚೆನ್ನಮ್ಮ ಕುಟುಂಬದವರಾ? | Filmibeat Kannada

    5. ವಾಟ್ಸ್ಅಪ್ ನಂಬರ್ +91 98457 63396 ಎಂದು ಉಪ್ಪಿ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.

    English summary
    Kannada actor, Prajakiya Founder Upendra Decided To Purchase crop and Vegetables from Directly Farmers.
    Saturday, May 15, 2021, 13:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X