»   » ಹುಡುಗಿ ವೇಷದಲ್ಲಿರುವ ಕನ್ನಡದ ಈ ನಟನನ್ನು ಗುರುತಿಸಿ

ಹುಡುಗಿ ವೇಷದಲ್ಲಿರುವ ಕನ್ನಡದ ಈ ನಟನನ್ನು ಗುರುತಿಸಿ

Posted By:
Subscribe to Filmibeat Kannada

ಸ್ಟಾರ್ ನಟರು ಕೆಲ ಸಿನಿಮಾದ ಪಾತ್ರಕ್ಕಾಗಿ ಈಗಾಗಲೇ ಹುಡುಗಿಯ ವೇಷ ಹಾಕಿದ್ದಾರೆ. ಈಗ ಕನ್ನಡದ ನಟರೊಬ್ಬರು ಹುಡುಗಿ ವೇಷದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಅದು ಬೇರೆ ಯಾರು ಅಲ್ಲ ರಿಯಲ್ ಸ್ಟಾರ್ ಉಪೇಂದ್ರ.

ಉಪೇಂದ್ರ ತಮ್ಮ ಹೊಸ ಚಿತ್ರ 'ಹೋಮ್ ಮಿನಿಸ್ಟರ್' ಸಿನಿಮಾದಲ್ಲಿ ಈ ರೀತಿಯ ಒಂದು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಉಪೇಂದ್ರ ಮತ್ತು ಸಾಧುಕೋಕಿಲ ನಡುವೆ ಈ ಸನ್ನಿವೇಶ ಇದಾಗಿದ್ದು, ಸಿಕ್ಕಾಪಟ್ಟೆ ಕಾಮಿಡಿಯಾಗಿ ಇದೆಯಂತೆ. ಅಂದಹಾಗೆ, ಸದ್ಯ ಈ ದೃಶ್ಯದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದೆ.

Upendra dressed as a lady in 'Home Minister'

'ಹೋಮ್ ಮಿನಿಸ್ಟರ್' ಚಿತ್ರವನ್ನು ಶ್ರೀ ಹರಿ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣ ಚಂದ್ರ ನಾಯ್ಡು ಸಿನಿಮಾಗೆ ಬಂಡವಾಳ ಹಾಕಿದ್ದಾರೆ. 'ಶಿವಲಿಂಗ' ಖ್ಯಾತಿಯ ನಟಿ ವೇದಿಕಾ ಉಪೇಂದ್ರ ಜೊಡಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

English summary
Upendra dressed as a lady in 'Home Minister' movie. Actress Vedhika has been paired opposite Upendra in the movie. ಉಪೇಂದ್ರ ತಮ್ಮ ಹೊಸ ಚಿತ್ರ 'ಹೋಮ್ ಮಿನಿಸ್ಟರ್' ಸಿನಿಮಾದಲ್ಲಿ ಹುಡುಗಿ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada