For Quick Alerts
  ALLOW NOTIFICATIONS  
  For Daily Alerts

  ಅಸ್ಸಾಂ ಹುಡುಗಿಯ ಅಭಿಮಾನಕ್ಕೆ ಫಿದಾ ಆದ ಉಪ್ಪಿ

  |
  ಅಸ್ಸಾಂ ಹುಡುಗಿಯ ಅಭಿಮಾನಕ್ಕೆ ಫಿಧಾ ಆದ ಉಪ್ಪಿ..! | FILMIBEAT KANNADA

  ನಟ ಉಪೇಂದ್ರ ಇತ್ತೀಚಿಗಷ್ಟೆ ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಸಿನಿಮಾ ನಿರ್ದೇಶನ, ಪ್ರಜಾಕೀಯ, ರಿಮೇಕ್, ಡಬ್ಬಿಂಗ್ ಹೀಗೆ ಅನೇಕ ವಿಚಾರಗಳ ಬಗ್ಗೆ ಫ್ಯಾನ್ಸ್ ಜೊತೆಗೆ ಮಾತನಾಡಿದ್ದರು.

  ಉಪ್ಪಿ ಮಾತು ಎಲ್ಲರಿಗೆ ಇಷ್ಟ ಆಗುತ್ತಿದೆ. ಆದರೆ, ಇದೀಗ ಉಪೇಂದ್ರ ತಮ್ಮ ಒಬ್ಬ ಅಭಿಮಾನಿಯ ಮಾತಿಗೆ ಫಿದಾ ಆಗಿದ್ದಾರೆ. ಅಸ್ಸಾಂನ ಒಬ್ಬ ಹುಡುಗಿ ಫೇಸ್ ಬುಕ್ ನಲ್ಲಿ ಉಪೇಂದ್ರ ಅವರ ಬಗ್ಗೆ ಒಂದು ವಿಡಿಯೋದಲ್ಲಿ ಮಾತನಾಡಿದ್ದರು. ಇದು ಈಗ ಉಪ್ಪಿಯ ಮೆಚ್ಚುಗೆಗೆ ಕಾರಣವಾಗಿದೆ.

  ಡೈರೆಕ್ಷನ್ ಮಾಡಿ ಅಂತಿದ್ದವರಿಗೆ 'ಮೆಗಾ ಬ್ರೇಕಿಂಗ್' ನೀಡಿದ ಉಪೇಂದ್ರ

  ''ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ. ಉಪೇಂದ್ರ ಎನ್ನುವುದು ಒಂದು ಹೆಸರಲ್ಲ. ಅದು ಸೈಕಾಲಜಿಯನ್ನು ಮೀರಿದ ವಿಷಯ. ಅವರ ನಿರ್ದೇಶನ ಕೇವಲ ಸಿನಿಮಾ ನಿರ್ದೇಶನವಲ್ಲ ಅದು ಮಾನಸಿಕ ಚಿಕಿತ್ಸೆ. ಅವರು ಇಂಡಿಯಾದ ಅದ್ಬುತ ನಿರ್ದೇಶಕರಲ್ಲಿ ಒಬ್ಬರು ಎನ್ನುವುದನ್ನು ಮರೆಯಬೇಡಿ. ಅವರನ್ನು ಬೇರೆ ಯಾರ ಜೊತೆಗೂ ಹೋಲಿಸಬೇಡಿ. ನಾನು ಅವರ ಅಭಿಮಾನಿಯಾಗಿ ಅವರ ನಿರ್ದೇಶನಕ್ಕಾಗಿ ಕಾಯುತ್ತಿದ್ದೇನೆ.'' ಎಂದು ಆ ಹುಡುಗಿ ಹೇಳಿದ್ದರು.

  ಉಪೇಂದ್ರ ಮುಂದಿನ ಚಿತ್ರದ ಬಜೆಟ್ 2 ಲಕ್ಷ 25 ಸಾವಿರ ಕೋಟಿ.!

  ಅಭಿಮಾನಿಯ ಈ ಮಾತು ಕೇಳಿ ಉಪೇಂದ್ರ ಮನಸೋತಿದ್ದಾರೆ. ಆ ಹುಡುಗಿಯ ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಉಪ್ಪಿ ಆಕೆಗೆ ಧನ್ಯವಾದ ತಿಳಿಸಿದ್ದಾರೆ.

  English summary
  watch video : Upendra fan from assam waiting for his direction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X