»   » ಕೆರೆಗಳ ಅಭಿವೃದ್ಧಿಗೆ ಉಪೇಂದ್ರ 'ಪ್ರಜಾಕೀಯ'ದಲ್ಲಿದೆ ಮಾಸ್ಟರ್ ಪ್ಲಾನ್.!

ಕೆರೆಗಳ ಅಭಿವೃದ್ಧಿಗೆ ಉಪೇಂದ್ರ 'ಪ್ರಜಾಕೀಯ'ದಲ್ಲಿದೆ ಮಾಸ್ಟರ್ ಪ್ಲಾನ್.!

Posted By:
Subscribe to Filmibeat Kannada
upendra prajaakarana : upendra has master plan about lake development

ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯ ಕಳಪೆ ಕಾಮಗಾರಿ ಹಾಗೂ ಅದಕ್ಕೆ ಪರಿಹಾರ ಸೂಚಿಸಿ ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗ ಸೌರವ್ ಬಾಬು ಜೊತೆ ಉಪೇಂದ್ರ ಕಳೆದ ವಾರ 'ನಗ್ನಸತ್ಯ ಪಾರ್ಟ್ - 1' ಶೀರ್ಷಿಕೆ ಅಡಿ ಫೇಸ್ ಬುಕ್ ಲೈವ್ ಮಾಡಿದ್ದರು.

ಮಹಾಮಳೆಗೆ ತತ್ತರಿಸಿದ ಬೆಂಗಳೂರು: ಉಪೇಂದ್ರ 'ಪ್ರಜಾ'ಕೀಯದಲ್ಲಿದೆ ಶಾಶ್ವತ ಪರಿಹಾರ.!

ಇಂದು 'ನಗ್ನಸತ್ಯ ಪಾರ್ಟ್ - 2' ಶೀರ್ಷಿಕೆ ಅಡಿ ಆನಂದ್ ಎಂಬುವರ ಜೊತೆ ಉಪೇಂದ್ರ ಫೇಸ್ ಬುಕ್ ಲೈವ್ ಮಾಡಿದ್ದಾರೆ. ಅದು ಕೆರೆಗಳ ಅಭಿವೃದ್ಧಿ ಕುರಿತ ಮಹತ್ವದ ಯೋಜನೆ ಕುರಿತು... ಮುಂದೆ ಓದಿರಿ...

ಕೆರೆಗಳಿಗೆ ಮರುಜೀವ

ಮಳೆ ಅಭಾವದಿಂದ ಅದೆಷ್ಟೋ ಕೆರೆಗಳು ಬತ್ತಿ ಹೋಗಿವೆ. ಎಷ್ಟೋ ಕೆರೆಗಳಲ್ಲಿ ಹೂಳು ತುಂಬಿಕೊಂಡು ನೀರು ಸಂಗ್ರಹ ಪ್ರಮಾಣ ಕುಸಿದಿದೆ. ಅನೇಕ ಕಡೆ ಕೆರೆ ಜಾಗವೇ ಮಾಯ ಆಗಿದೆ. ಕೆರೆಗಳ ಸಂಖ್ಯೆ ಕಮ್ಮಿ ಆಗುತ್ತಿರುವುದರಿಂದ ಬೇಸಿಗೆ ಕಾಲದಲ್ಲಿ ನೀರಿನದ್ದೇ ದೊಡ್ಡ ಸಮಸ್ಯೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು ಅಂದ್ರೆ ಕೆರೆಗಳಿಗೆ ಪುನರ್ ಜೀವ ನೀಡಬೇಕು. ಕಡಿಮೆ ಖರ್ಚಿನಲ್ಲಿ ಕೆರೆಗಳ ಅಭಿವೃದ್ಧಿ ಮಾಡುವ ಕುರಿತು ಉಪೇಂದ್ರ 'ಪ್ರಜಾಕೀಯ'ದಲ್ಲಿದೆ ಒಂದು ಮಾಸ್ಟರ್ ಪ್ಲಾನ್.!

45 ದಿನಗಳಲ್ಲಿ ಕೆರೆ ಅಭಿವೃದ್ಧಿ ಸಾಧ್ಯ

ಆನಂದ್ ಎಂಬುವರು ಆನೇಕಲ್ ತಾಲ್ಲೂಕಿನಲ್ಲಿ ಕೇವಲ 45 ದಿನಗಳಲ್ಲಿ ಒಂದು ಕೋಟಿ ರೂಪಾಯಿ ಒಳಗೆ ಒಂದು ಕೆರೆಯ ಹೂಳೆತ್ತಿ, ಅದರ ಮೇಲೆ ದ್ವೀಪ ತರಹ ಮಾಡಿ 18,000 ಸಸಿ ನೆಟ್ಟು ಕೆರೆ ಅಭಿವೃದ್ಧಿ ಮಾಡಿದ್ದಾರೆ.

ಕಂಪನಿಯ ಫಂಡ್ ನಿಂದ ಆದ ಕೆಲಸ

ಒಂದು ಫೌಂಡೇಶನ್ ಫಂಡ್ ನಿಂದ ಒಂದು ಕೆರೆ ನಿರ್ಮಾಣ ಮಾಡಲಾಗಿದೆ. 5-10 ಅಡಿ ಹೂಳು ತುಂಬಿಕೊಂಡಿದ್ದ ಆನೇಕಲ್ ಕೆರೆಗೆ ಆನಂದ್ ಮರುಜೀವ ನೀಡಿದ್ದಾರೆ.

ಮತ್ತೆ ಹೂಳು ತುಂಬಲು ಸಾಧ್ಯ ಇಲ್ಲ

ಕೆರೆಯ ಸುತ್ತ ಸಿಲ್ಟ್ ಟ್ರ್ಯಾಪ್ ಮಾಡಿರುವುದರಿಂದ ಮತ್ತೆ ಕೆರೆಗೆ ಹೂಳು ತುಂಬಿಕೊಳ್ಳುವುದಿಲ್ಲ ಎನ್ನುತ್ತಾರೆ ಆನಂದ್.

ಎಲ್ಲ ಕೆರೆಗಳಿಗೂ ಹೀಗೆ ಮಾಡಬಹುದು.!

ಬೆಂಗಳೂರಿನಲ್ಲಿ ಒಟ್ಟು 300ಕ್ಕೂ ಹೆಚ್ಚು ಕೆರೆಗಳಿವೆ. ಇಡೀ ಕರ್ನಾಟಕದಲ್ಲಿ 30,000 ಕ್ಕಿಂತ ಹೆಚ್ಚು ಕೆರೆಗಳಿವೆ. ಒಂದು ಕೆರೆಯ ಅಭಿವೃದ್ಧಿ ಕಾರ್ಯ 50 ದಿನಗಳಲ್ಲಿ ಒಂದು ಕೋಟಿ ವೆಚ್ಚದಲ್ಲಿ ಆದರೆ ಕಮ್ಮಿ ಅವಧಿಯಲ್ಲಿ ಕಮ್ಮಿ ಖರ್ಚಿನಲ್ಲಿ ಅನೇಕ ಕೆರೆಗಳಿಗೆ ಮರುಜೀವ ನೀಡಿದಂತಾಗುತ್ತದೆ ಎಂಬುದು ಉಪೇಂದ್ರ 'ಪ್ರಜಾಕೀಯ'ದ ಆಶಯ.

ಸರ್ಕಾರಕ್ಕೆ ಇಂಟ್ರೆಸ್ಟ್ ಇಲ್ಲ.!

ಕೆರೆಗಳ ಅಭಿವೃದ್ಧಿ ಮಾಡುವ ಯೋಜನೆ ಬಗ್ಗೆ ಸರ್ಕಾರದ ಕೆಲವು ಗಣ್ಯ ವ್ಯಕ್ತಿಗಳನ್ನ ಭೇಟಿ ಮಾಡಿದರೂ, ಅವರು ಅಷ್ಟು ಇಂಟ್ರೆಸ್ಟ್ ತೋರಿಸಲಿಲ್ಲ ಎನ್ನುತ್ತಾರೆ ಆನಂದ್.

ಸರ್ಕಾರ ಗಮನ ಹರಿಸಿದರೆ....

ಸರ್ಕಾರ ಗಮನ ಹರಿಸಿದರೆ, ಕಡಿಮೆ ಖರ್ಚಿನಲ್ಲಿ ಅನೇಕ ಕೆರೆಗಳ ಅಭಿವೃದ್ದಿ ಕಾರ್ಯ ಸಾಧ್ಯ ಎಂಬುದು ಉಪೇಂದ್ರ ಹಾಗೂ ಆನಂದ್ ಅವರ ಅಭಿಪ್ರಾಯ.

ಬೆಳ್ಳಂದೂರು ಕೆರೆಯ ನೊರೆ ಸಮಸ್ಯೆಗೂ ಪರಿಹಾರ ಇದೆ

''ಬೆಳ್ಳಂದೂರು ಕೆರೆಯಲ್ಲಿ ಕೆಮಿಕಲ್ ರಿಯಾಕ್ಷನ್ ನಿಂದಾಗಿ ನೊರೆ ಸೃಷ್ಟಿ ಆಗುತ್ತಿದೆ. ಕೆರೆ ಕುರಿತು ಅಧ್ಯಯನ ಮಾಡಿದರೆ ಪರಿಹಾರ ಖಂಡಿತ ಸಾಧ್ಯ'' - ಆನಂದ್

ವಿಡಿಯೋ ನೋಡಿ....

ಕೆರೆ ಅಭಿವೃದ್ಧಿ ಕಾರ್ಯದ ಬಗ್ಗೆ ಉಪೇಂದ್ರ ಹಾಗೂ ಆನಂದ್ ಮಾತನಾಡಿರುವ ವಿಡಿಯೋ ಇಲ್ಲಿದೆ, ಲಿಂಕ್ ಕ್ಲಿಕ್ ಮಾಡಿ ಪೂರ್ತಿ ನೋಡಿ...

ನೀವೇನಂತೀರಾ.?

ಕೆರೆಗಳಿಗೆ ಪುನರ್ ಜೀವ ನೀಡುವ ಆನಂದ್ ರವರ ಪ್ಲಾನ್ ಬಗ್ಗೆ ಉಪೇಂದ್ರ ರವರಿಗೆ ಭರವಸೆ ಮೂಡಿದೆ. ಈ ಐಡಿಯಾ ಬಗ್ಗೆ ನೀವೇನಂತೀರಾ.? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ....

English summary
'Prajaakarani' Upendra has come up with a master plan along with Anand to develop and revive lakes in Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada