»   » ರಾಜಕೀಯ ಎಂಟ್ರಿ ಬಗ್ಗೆ ಉಪೇಂದ್ರ ಗ್ರೀನ್ ಸಿಗ್ನಲ್

ರಾಜಕೀಯ ಎಂಟ್ರಿ ಬಗ್ಗೆ ಉಪೇಂದ್ರ ಗ್ರೀನ್ ಸಿಗ್ನಲ್

Posted By:
Subscribe to Filmibeat Kannada

ರಾಜಕೀಯ ಎಂಟ್ರಿ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಶಿವಮೊಗ್ಗದಲ್ಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹಿಂದೊಮ್ಮೆ ಅವರ ರಾಜಕೀಯ ಪ್ರವೇಶದ ಬಗ್ಗೆ ಸುದ್ದಿ ಇತ್ತು. ಇದೀಗ ಅವರು ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರದಲ್ಲಿ ಭಾಗಿಯಾಗಿ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಮೌನ ಮುರಿದರು.

ಉಪೇಂದ್ರ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಯಾವ ಸ್ಟಾರ್ ನಟನಿಗೂ ಕಡಿಮೆ ಇಲ್ಲದಷ್ಟು ಜನಪ್ರಿಯತೆ ಅವರಿಗೂ ಇದೆ. ಇದರ ಲಾಭ ಪಡೆಯಲು ಹಲವಾರು ರಾಜಕೀಯ ಪಕ್ಷಗಳು ರತ್ನಗಂಬಳಿ ಹಾಸಲು ಸದಾ ಸಿದ್ಧವಾಗಿವೆ. ಆದರೆ ಬುದ್ಧಿವಂತ ಉಪೇಂದ್ರ ಅಷ್ಟು ಬೇಗ ರಾಜಕೀಯಕ್ಕೆ ಎಂಟ್ರಿ ಕೊಡುವವರಲ್ಲ. [ಶಿವಮೊಗ್ಗದಲ್ಲಿ ಗೀತಾ ಪರ ಉಪೇಂದ್ರ ರೋಡ್ ಶೋ]

ಸದ್ಯಕ್ಕೆ ರಾಜಕೀಯ ಎಂಟ್ರಿ ಬಗ್ಗೆ ತೀರ್ಮಾನಿಸಿಲ್ಲ. ಮುಂದಿನ ದಿನಗಳಲ್ಲಿ ಹೊಸ ಚಿಂತನೆ, ನವೀನ ಯೋಜನೆಗಳೊಂದಿಗೆ ರಾಜಕೀಯ ಪ್ರವೇಶ ಮಾಡುವುದಾಗಿ ಹೇಳಿದ್ದಾರೆ ಉಪೇಂದ್ರ. ಸ್ಲೈಡ್ ನಲ್ಲಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರದ ಚಿತ್ರಗಳ ಜೊತೆಗೆ ಇನ್ನಷ್ಟು ಮಾಹಿತಿ ನೋಡಿ.

ರಾಜಕೀಯ ಎಂಬುದು ಕಪ್ಪು ಬಿಳುಪು

ಚಿತ್ರರಂಗದಂತೆ ರಾಜಕೀಯ ಕಲಲ್ ಫುಲ್ ಅಲ್ಲ, ಅದು ಏನಿದ್ದರೂ ಕಪ್ಪು ಬಿಳುಪು. ನನ್ನ ರಾಜಕೀಯ ಚಿಂತನೆ ಬೇರೆ ಇದೆ ಎಂದಿದ್ದಾರೆ. ನಾನು ಯಾವುದೇ ಒಂದು ಪಕ್ಷದ ಪರ ಪ್ರಚಾರ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಆತ್ಮೀಯರು, ಶಿವಣ್ಣ ಗೆಳೆಯ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಆತ್ಮೀಯರು. ಶಿವಣ್ಣ ನನಗೆ ಒಳ್ಳೆಯ ಗೆಳೆಯ. ಒಂದು ವೇಳೆ ರಮ್ಯಾ ಅವರು ಆಹ್ವಾನಿಸಿದರೆ ಅವರ ಪರ ಪ್ರಚಾರ ಮಾಡುತ್ತೀರಾ ಎಂದರೆ, ಅವರೇ ದೊಡ್ಡ ಸ್ಟಾರ್ ಎಂದರು.

ಎರಡು ದಿನಗಳ ಕಾಲ ಭರ್ಜರಿ ಪ್ರಚಾರ

ಏಪ್ರಿಲ್ 6 ಮತ್ತು 7ರಂದು ಗೀತಾ ಶಿವರಾಜ್ ಕುಮಾರ್ ಪರ ಉಪೇಂದ್ರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಎರಡು ದಿನಗಳ ಕಾಲ ಅವರ ಪ್ರಚಾರಕ್ಕೆ ಭರ್ಜರಿ ಪ್ರಚಾರ ಸಿಕ್ಕಿದೆ.

ಗೀತಾ ಪರ ಉಪೇಂದ್ರ ಮತಯಾಚನೆ

ಏಪ್ರಿಲ್ 6ರ ಭಾನುವಾರ ಮಧ್ಯಾಹ್ನ 11.30ಕ್ಕೆ ಶಿಕಾರಿಪುರ ಬಸ್ ಸ್ಟ್ಯಾಂಡ್ ನಿಂದ ರೋಡ್ ಶೋ ಮೂಲಕ ಮತ ಯಾಚನೆ ಹಾಗೂ ಅದೇ ದಿನ ಮಧ್ಯಾಹ್ನ 12.30ಕ್ಕೆ ಶಿರಾಳಕೊಪ್ಪದಲ್ಲಿ ರೋಡ್ ಶೋನೊಂದಿಗೆ ಮತಯಾಚನೆ ಮಾಡಿದರು ಉಪೇಂದ್ರ. ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಜೊತೆಗಿದ್ದರು.

ಇನ್ನಷ್ಟು ಕಲಾವಿದರು ಗೀತಾ ಪರ ಪ್ರಚಾರ

ಏಪ್ರಿಲ್ 10 ಮತ್ತು 11ರಂದು ಚಿತ್ರನಟರಾದ ಜೈ ಜಗದೀಶ್, ಶ್ರೀಮುರಳಿ ಸಹ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಉಪೇಂದ್ರ ಹಾಗೂ ಶಿವಣ್ಣ ಅವರು ಪ್ರೀತ್ಸೆ ಮತ್ತು ಲವಕುಶ ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಉಪ್ಪಿ ನಿರ್ದೇಶನದ ಶಿವಣ್ಣ ಅಭಿನಯದ ಓಂ ಚಿತ್ರದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.

English summary
Real Star Upendra was seen with Hat trick Hero Shivrajkumar in Shimoga in the election campaign of Geetha Shivaraj Kumar, who is the JDS contestant for upcoming Lok Sabha polls. 
Please Wait while comments are loading...