For Quick Alerts
  ALLOW NOTIFICATIONS  
  For Daily Alerts

  ಮೊಮ್ಮಗಳ ಸಿನಿಮಾ ನೋಡಿ ಭಾವುಕವಾದ ಉಪೇಂದ್ರ ತಾಯಿ

  |

  ಕಳೆದ ವಾರ ಬಿಡುಗಡೆಯಾದ 'ದೇವಕಿ' ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ತಾಯಿ ಮಗಳ ಈ ಸಿನಿಮಾದ ಎಲ್ಲರಿಗೂ ಇಷ್ಟ ಆಗಿದೆ. ಪ್ರೇಕ್ಷಕರ ಜೊತೆಗೆ ಉಪೇಂದ್ರ ತಾಯಿ ಕೂಡ ಸಿನಿಮಾವನ್ನು ಬಹಳ ಮೆಚ್ಚಿಕೊಂಡಿದ್ದಾರೆ.

  Devaki Review : 'ರೆಡ್ ಲೈಟ್'ನಲ್ಲಿ ಅರಳಿದ ತಾಯಿ ಮಗಳ ಅನುಬಂಧ

  ಸಿನಿಮಾ ನೋಡಿ ಬಂದ ಮೇಲೆ ಉಪ್ಪಿ ತಾಯಿ ಅನುಸೂಯ ಭಾವುಕವಾದರು. ಸಿನಿಮಾ ನೆನೆದು ಕಣ್ಣೀರು ಹಾಕಿದ ಅವರು, ಮಾತುಗಳೆ ಬರುತ್ತಿಲ್ಲ ಎಂದರು. ಪ್ರತಿ ತಾಯಂದಿರು ತಮ್ಮ ಮಗಳ ಜೊತೆಗೆ ಈ ಸಿನಿಮಾ ನೋಡಬೇಕು ಎಂದು ಅನುಸೂಯ ಸಿನಿಮಾ ಪೂರ್ಣ ಅಂಕ ನೀಡಿದ್ದಾರೆ.

  ಉಪೇಂದ್ರ ತಾಯಿ ಅನುಸೂಯ ಸಿನಿಮಾಗಳನ್ನು ನೋಡುವುದು ಕಡಿಮೆ. ಆದರೆ, ಸೊಸೆ ಪ್ರಿಯಾಂಕ ಅವರ ಸಿನಿಮಾವನ್ನು ಮಿಸ್ ಮಾಡದೆ ನೋಡಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಅವರ ಮೊಮ್ಮಗಳು ಐಶ್ವರ್ಯ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.

  ಪ್ರಿಯಾಂಕಾ ಉಪೇಂದ್ರ-ಅನಸೂಯ: ಅತ್ತೆ-ಸೊಸೆ ಅಂದ್ರೆ ಹೀಗಿರ್ಬೇಕು.!

  ಉಪೇಂದ್ರ ಅವರ ಇಡೀ ಕುಟುಂಬ ಈ ಸಿನಿಮಾವನ್ನು ನೋಡಿದೆ. ಉಪೇಂದ್ರ ತಂದೆ, ತಾಯಿ, ಮಗ, ಅಣ್ಣ, ಅತ್ತಿಗೆ ಎಲ್ಲರೂ ಸಿನಿಮಾವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.

  'ದೇವಕಿ' ತಾಯಿ ಮಗಳ ಸೆಂಟಿಮೆಂಟ್ ಜೊತೆಗೆ ಥ್ರಿಲ್ಲರ್ ಕಥೆ ಹೊಂದಿದೆ. ಕೊಲ್ಕತ್ತಾದಲ್ಲಿ ಚಿತ್ರೀಕರಣವಾದ ಇಡೀ ಸಿನಿಮಾ ರೋಚಕವಾಗಿ ಮೂಡಿ ಬಂದಿದೆ. ಮೇಕಿಂಗ್ ಹಾಗೂ ಸೌಂಡ್ ಸಿನಿಮಾದ ದೊಡ್ಡ ಹೈಲೈಟ್ ಆಗಿದೆ.

  ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

  English summary
  Kannada actor Upendra mother Anusuya gets emotional after watching Priyanka Upendra's 'Devaki' kannada movie. The movie directed by Lohith H.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X