»   » ಉಪೇಂದ್ರ ಗಾಡ್ ಫಾದರ್, 120 ಚಿತ್ರಮಂದಿರಗಳಲ್ಲಿ

ಉಪೇಂದ್ರ ಗಾಡ್ ಫಾದರ್, 120 ಚಿತ್ರಮಂದಿರಗಳಲ್ಲಿ

Posted By:
Subscribe to Filmibeat Kannada

'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಬಳಿಕ ಉಪೇಂದ್ರ ಅಭಿನಯದ ಮತ್ತೊಂದು ಚಿತ್ರ ತೆರೆಗೆ ಬರುತ್ತಿದೆ. ಗಂಡುಗಲಿ ಕೆ ಮಂಜು ನಿರ್ಮಾಣದ 'ಗಾಡ್ ಫಾದರ್' ಚಿತ್ರ ಜುಲೈ 27ರ ವರಮಹಾಲಕ್ಷ್ಮಿ ಹಬ್ಬದ ದಿನ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಸುಮಾರು ರು.7 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರವಿದು.

ಈ ಚಿತ್ರದ ವಿತರಣೆ ಹಕ್ಕುಗಳನ್ನು ಸಮರ್ಥ್ ವೆಂಚೂರ್ಸ್ ಮಾಲೀಕ ಪ್ರಸಾದ್ ಪಡೆದಿದ್ದು, ಚಿತ್ರವನ್ನು ಅವರು 120 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಸೇತು ಶ್ರೀರಾಮ್.


ಜುಲೈ 27ಕ್ಕೆ ಬಿಡುಗಡೆಯಾಗಬೇಕಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅದ್ದೂರಿ 'ಶಿವ' ಚಿತ್ರದ ಬಿಡುಗಡೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ. ಆದರೆ ವರಮಹಾಲಕ್ಷ್ಮಿ ಹಬ್ಬಕ್ಕೆ ಉಪೇಂದ್ರ ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿದೆ ಬರುತ್ತಿದ್ದಾನೆ 'ಗಾಡ್ ಫಾದರ್'.

"ಈ ಬಾರಿ ಚಿತ್ರವನ್ನು ನಿಯಮಿತ ಸಂಖ್ಯೆಯ ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಈ ಪ್ರಯೋಗದ ಮೂಲಕ ಚಿತ್ರವನ್ನು ಹೆಚ್ಚು ದಿನ ಚಿತ್ರಮಂದಿರದಲ್ಲಿ ನಿಲ್ಲಿಸುವ ಪ್ರಯತ್ನ ವಿತರಕ ಪ್ರಸಾದ್ ಅವರದು. ಚಿತ್ರದಲ್ಲಿ ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ತಾಂತ್ರಿಕವಾಗಿಯೂ ಅದ್ಭುತವಾಗಿ ಮೂಡಿಬಂದಿದೆ.

ಚಿತ್ರಮಂದಿರಕ್ಕೆ ಹೆಚ್ಚು ಹೆಚ್ಚು ಜನ ಬರಲಿ ಎಂದ ಉದ್ದೇಶದಿಂದ ನಿಯಮಿತ ಸಂಖ್ಯೆಯ ಚಿತ್ರಮಂದಿರಗಳಲ್ಲಿ 'ಗಾಡ್ ಫಾದರ್' ಬಿಡುಗಡೆ ಮಾಡುತ್ತಿರುವುದಾಗಿ ಪ್ರಸಾದ್ ತಿಳಿಸಿದ್ದಾರೆ. ಖಂಡಿತವಾಗಿಯೂ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂದಿದ್ದಾರೆ.

ಚಿತ್ರದ ಇನ್ನೊಂದು ಆಕರ್ಷಣೆ ಎಂದರೆ ಎ ಆರ್ ರೆಹಮಾನ್ ಅವರ ಸಂಗೀತ ಸಂಯೋಜನೆ. ಈಗಾಗಲೆ ಚಿತ್ರದ ಹಾಡುಗಳು ಸುಮಾರಾಗಿ ಜನಪ್ರಿಯವಾಗಿದ್ದು ಚಿತ್ರದ ಬಗ್ಗೆ ಒಂಚೂರು ಕುತೂಹಲವನ್ನೂ ಹುಟ್ಟಿಸಿದೆ. ಈ ಹಿಂದೆ 'ಕಠಾರಿವೀರ' ಹಾಗೂ 'ಗಾಡ್ ಫಾದರ್' ಚಿತ್ರಗಳ ನಡುವೆ ಜಟಾಪಟಿ ನಡೆದಿತ್ತು.

ಮೊದಲು ಶೂಟಿಂಗ್ ಆರಂಭಿಸಿದ್ದು ನಾನು. ಹಾಗಾಗಿ ನನ್ನ ಚಿತ್ರ 'ಗಾಡ್ ಫಾದರ್' ಮೊದಲು ಬಿಡುಗಡೆಯಾಗಲಿ ಎಂಬುದು ಕೆ ಮಂಜು ವಾದಿಸಿದ್ದರು. ಈ ವಾದನ್ನು 'ಕಠಾರಿವೀರ' ಚಿತ್ರದ ನಿರ್ಮಾಪಕ ಮುನಿರತ್ನ ಸುತಾರಾಂ ಒಪ್ಪದೆ ವಿವಾದ ತಾರಕ್ಕೇರಿ ಬಳಿಕ ತಣ್ಣಗಾಗಿತ್ತು. ವಿಶೇಷ ಎಂದರೆ ಈ ಎರಡೂ ಚಿತ್ರಗಳಿಗೆ ಉಪೇಂದ್ರ ಅವರೇ ನಾಯಕ ಎಂಬುದು.

ಇನ್ನು 'ಗಾಡ್ ಫಾದರ್' ಚಿತ್ರದ ವಿಷಯಕ್ಕೆ ಬಂದರೆ ತಮಿಳಿನ ಯಶಸ್ವಿ ಚಿತ್ರ 'ವರಲಾರು' ರೀಮೇಕ್ ಇದಾಗಿದೆ. ಉಪೇಂದ್ರ ತ್ರಿಪಾತ್ರದಲ್ಲಿ ಅಭಿನಯಿಸಿದ್ದು ಜಯಮಾಲಾ ಪುತ್ರಿ ಸೌಂದರ್ಯಾ ನಾಯಕಿ. ಚಿತ್ರದಲ್ಲಿ ಸದಾ, ಭೂಮಿಕಾ ಚಾವ್ಲಾ ಹಾಗೂ ಕ್ಯಾಥೆರಿನ್ ತ್ರೆಸಾ ಕೂಡ ಇದ್ದಾರೆ. ಸೌಂದರ್ಯಾ ಜಯಮಾಲಾ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. (ಏಜೆನ್ಸೀಸ್)

English summary
Superstar Upendra and Soundarya Jayamala lead Kannada film Godfather all set to release on 27th July on Varamahalakshmi festival. Sadha and Catherine Teresa also play the prominent roles and Bhumika Chawla makes a special appearance. The film is remake of the 2006 Tamil blockbuster Varalaru.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada