»   » ಉಪ್ಪಿ 'ಪ್ರಜಾಕೀಯ'ಕ್ಕೆ ಒಂದು ದಿನದಲ್ಲಿ ಬಂದ 'ಇ-ಮೇಲ್'ಗಳೆಷ್ಟು?

ಉಪ್ಪಿ 'ಪ್ರಜಾಕೀಯ'ಕ್ಕೆ ಒಂದು ದಿನದಲ್ಲಿ ಬಂದ 'ಇ-ಮೇಲ್'ಗಳೆಷ್ಟು?

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯ ವೇದಿಕೆ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ರಾಜಕೀಯ ವ್ಯವಸ್ಥೆಯನ್ನ ಬದಲಿಸಿ, ಪ್ರಜಾಕೀಯ ವ್ಯವಸ್ಥೆಯನ್ನಾಗಿಸುವ ಉದ್ದೇಶದೊಂದಿದೆ ಸ್ಥಾಪಿತವಾಗಿರುವ ಉಪ್ಪಿಯ 'ಪ್ರಜಾಕಾರಣ'ಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.

ಉಪೇಂದ್ರ ತಮ್ಮ ಪ್ರಜಾಕಾರಣದ ಬಗ್ಗೆ ಹೊಸ ಹೊಸ ಆಲೋಚನೆಗಳು, ಹೊಸ ಹೊಸ ಚಿಂತನೆಗಳನ್ನ ಜನರ ಮುಂದೆ ಇಟ್ಟು, ನಿಮ್ಮ ಅಭಿಪ್ರಾಯವನ್ನ ತಿಳಿಸಿ ಎಂದು ಮೂರು ಅಧಿಕೃತವಾದ 'ಇ-ಮೇಲ್' ಖಾತೆಗಳನ್ನ ಸ್ಥಾಪಿಸಿದ್ದರು. prajakarana1@gmail.com, prajakarana2@gmail.com ಮತ್ತು prajakarana3@gmail.com ಎಂದು 'ಇ-ಮೇಲ್' ಗಳಿಗೆ ಚಾಲನೆ ನೀಡಿದ್ದರು.

ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿ ಅಂಶದಲ್ಲಿ ಉಪೇಂದ್ರ ಹೊಸ ಪಕ್ಷ

Upendra Prajakarana received 15 thousand mails in 1 day

ಉಪ್ಪಿಯ ಈ ನಿರ್ಧಾರಕ್ಕೆ ಭರ್ಜರಿ ರೆಸ್ ಪಾನ್ಸ್ ಸಿಕ್ಕಿದ್ದು, ಮೊದಲ ದಿನವೇ ಸುಮಾರು 15 ಸಾವಿರ ಇ-ಮೇಲ್ ಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಕೇವಲ ಕರ್ನಾಟಕದಿಂದ ಮಾತ್ರವಲ್ಲದೇ ದೇಶ-ವಿದೇಶದಲ್ಲಿರುವ ಕನ್ನಡಿಗರಿಂದ ಇ-ಮೇಲ್ ಬಂದಿದೆಯಂತೆ.

ಉಪೇಂದ್ರ 'ಮಹಾ ಕನಸಿನ' ಬಗ್ಗೆ ನಟ ಯಶ್ ಮಾಡಿದ ಕಾಮೆಂಟ್ ಇದು.!

Upendra Prajakarana received 15 thousand mails in 1 day

ಒಟ್ನಲ್ಲಿ, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಪ್ರಜಾಕೀಯ ನಿಧಾನವಾಗಿ ತನ್ನ ಕಾರ್ಯ ಆರಂಭಿಸುತ್ತಿದೆ. ಆರಂಭದಲ್ಲಿ ಇಷ್ಟು ಜನಬೆಂಬಲ ಪಡೆದುಕೊಂಡಿರುವ ಉಪೇಂದ್ರ ಅವರು ಮುಂದಿನ ಹಂತ ಹೇಗಿರುತ್ತೆ ಎಂದು ಕಾದುನೋಡಬೇಕಿದೆ.

English summary
Actor Upendra who is all set to float a new political party has got a humongous response for his entry to politics and has received more than 15 thousand mails in just one day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada