»   » ಚಿತ್ರಗಳು: 'ಉಪೇಂದ್ರ-ಪ್ರಿಯಾಂಕಾ' ದಂಪತಿಯ 13ನೇ ವಿವಾಹ ವಾರ್ಷಿಕೋತ್ಸವ

ಚಿತ್ರಗಳು: 'ಉಪೇಂದ್ರ-ಪ್ರಿಯಾಂಕಾ' ದಂಪತಿಯ 13ನೇ ವಿವಾಹ ವಾರ್ಷಿಕೋತ್ಸವ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ದಂಪತಿ ತಮ್ಮ 13ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನ ಇತ್ತೀಚೆಗಷ್ಟೇ ಆಚರಿಸಿಕೊಂಡರು. ಸ್ಯಾಂಡಲ್ ವುಡ್ ನ ತಾರಾಜೋಡಿಗಳು ತಮ್ಮ ಸಂತೋಷವನ್ನ ಸಂತಸವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು ವಿಶೇಷ.

'ಉಪೇಂದ್ರ-ಪ್ರಿಯಾಂಕಾ' ದಂಪತಿ ನಿನ್ನೆ (ಡಿಸೆಂಬರ್ 14) ರಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನ ಬನಶಂಕರಿಯ ನಿವಾಸದಲ್ಲಿ ತಮ್ಮ ಅಭಿಮಾನಿಗಳು ಸೆಲೆಬ್ರೇಟ್ ಮಾಡಿದ್ದಾರೆ. ಈ ಸಂಭ್ರಮದ ಕೆಲ ಫೋಟೋಗಳು ಈಗ ನಿಮ್ಮ ಫಿಲ್ಮಿ ಬೀಟ್ ಗೆ ಸಿಕ್ಕಿದೆ. ಇಲ್ಲಿದೆ ನೋಡಿ ಉಪ್ಪಿ ದಂಪತಿಯ ಸೆಲೆಬ್ರೇಷನ್ ಫೋಟೋಸ್.[ಚಿತ್ರಗಳು: ಪ್ರಿಯಾಂಕ ಉಪೇಂದ್ರ ಬರ್ತ್ ಡೇ ಪಾರ್ಟಿಯಲ್ಲಿ ಸ್ಟಾರ್ಸ್ ಮೋಜು-ಮಸ್ತಿ ]

ಅಭಿಮಾನಿಗಳ ಜೊತೆ ವಿವಾಹ ವಾರ್ಷಿಕೋತ್ಸವ ಆಚರಣೆ

ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ವಿವಾಹ ವಾರ್ಷಿಕೋತ್ಸವವನ್ನ ತಮ್ಮ ಅಭಿಮಾನಿಗಳ ಜೊತೆಯಲ್ಲಿ ಆಚರಿಸಿಕೊಂಡಿದ್ದಾರೆ.[ಪ್ರಿಯಾಂಕಾ ಹುಟ್ಟುಹಬ್ಬ: ಮುದ್ದು ಮಡದಿಗೆ ಉಪೇಂದ್ರ ಕೊಟ್ಟ ಸ್ಪೆಷಲ್ ಗಿಫ್ಟ್ ಇದೇ.! ]

ಕೇಕ್ ಕತ್ತರಿಸಿ ಸೆಲೆಬ್ರೇಷನ್

ತಮ್ಮ ನೆಚ್ಚಿನ ತಾರಾಜೋಡಿಯ ವಿವಾಹ ವಾರ್ಷಿಕೋತ್ಸವವನ್ನ ಮತ್ತಷ್ಟು ಅದ್ದೂರಿಯಾಗಿಸಿದ ಅಭಿಮಾನಿಗಳು 'ಉಪೇಂದ್ರ-ಪ್ರಿಯಾಂಕಾ' ಅವರಿಂದ ಕೇಕ್ ಕತ್ತರಿಸುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ.

2003 ರಲ್ಲಿ ಮದುವೆ

2003ರಲ್ಲಿ ಮದುವೆಯಾದ ಈ ತಾರಾಜೋಡಿ ಕಷ್ಟ-ಸುಖವನ್ನ ಸಮನಾಗಿ ಸ್ವೀಕರಿಸಿ, 13 ವರ್ಷಗಳು ಯಶಸ್ವಿಯಾಗಿ ಪೂರೈಸಿದೆ. ಉಪ್ಪಿ-ಪ್ರಿಯಾಂಕ ದಂಪತಿಗೆ ಆಯುಶ್-ಐಶ್ವರ್ಯ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.[ಸೈಲೆಂಟ್ ಆಗಿ ನಡೆದಿದೆ ಉಪೇಂದ್ರ ರವರ 50ನೇ ಚಿತ್ರದ ಸ್ಕ್ರಿಪ್ಟ್ ಪೂಜೆ]

'ಉಪ್ಪಿ-ಪ್ರಿಯಾಂಕಾ' ನೆನಪಿನ ದಿನ

ಹಿಂದಿನ ವರ್ಷಗಳಲ್ಲಿ ಪ್ರಿಯಾಂಕಾ ಹಾಗೂ ಉಪೇಂದ್ರ ಅವರು, ತಮ್ಮ ವಿವಾಹ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿರುವುದು.

ಒಟ್ಟಿಗೆ ಚಿತ್ರದಲ್ಲಿ ಅಭಿನಯ

ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರು ಒಟ್ಟಾಗಿ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ತೆಲುಗಿನ 'ರಾ' ಸೇರಿದಂತೆ 2002 ರಲ್ಲಿ ತೆರೆಕಂಡ 'ಹೆಚ್2ಓ' ಹಾಗೂ 2011 ರಲ್ಲಿ ಬಿಡುಗಡೆಯಾದ 'ಶ್ರೀಮತಿ' ಚಿತ್ರಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.['ಮಮ್ಮಿ' ದೆವ್ವ ನೋಡಿ ಭಯ ಭೀತಗೊಂಡ ವಿಮರ್ಶಕರು.!]

ಸ್ಯಾಂಡಲ್ ವುಡ್ ನ ಸೂಪರ್ ಜೋಡಿ

ಯಾವುದೇ ವಾದ-ವಿವಾದಗಳಿಲ್ಲದೆ, ಒಟ್ಟಾಗಿ ಸಂತೊಷದಿಂದ ಇರುವ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ದಂಪತಿ, ಕನ್ನಡದ ಮಾದರಿ ಜೋಡಿ ಅಂದ್ರೆ ಅತಿಶಯೋಕ್ತಿ ಅಲ್ಲ.

English summary
One of the most loved couple of Sandalwood, Upendra and Priyanka, has been married for 13 years. The couple is celebrating their 13th anniversary yesterday. (14 Dec) Check out the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada