For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ-ರವಿಚಂದ್ರನ್ ಚಿತ್ರಕ್ಕೆ ಮೂರನೇ ಬಾರಿ ಟೈಟಲ್ ಬದಲಾವಣೆ

  |

  ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಜೋಡಿಯಲ್ಲಿ ಮೂಡಿಬರುತ್ತಿರುವ ಚಿತ್ರ ಮತ್ತೊಮ್ಮೆ ಟೈಟಲ್ ಬದಲಾಯಿಸಿಕೊಂಡಿದೆ. ಈಗಾಗಲೇ ಎರಡು ಬಾರಿ ಚಿತ್ರದ ಹೆಸರು ಬದಲಿಸಿರುವ ಚಿತ್ರತಂಡ ಮೂರನೇ ಸಲ ಮತ್ತೊಂದು ಹೊಸ ಶೀರ್ಷಿಕೆಯೊಂದಿಗೆ ಬರ್ತಿದೆ.

  ಇದೀಗ, ಈ ಚಿತ್ರದ ಟೈಟಲ್ ಜೊತೆ ಟೀಸರ್ ಸಹ ಬಿಡುಗಡೆ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ. ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಹಿನ್ನೆಲೆ ಸ್ಪಷೆಲ್ ಟೀಸರ್ ರಿಲೀಸ್ ಮಾಡುತ್ತಿದೆ. ಹಾಗಾದ್ರೆ, ಉಪ್ಪಿ-ರವಿಮಾಮ ನಟಿಸುತ್ತಿರುವ ಚಿತ್ರದ ಹೆಸರೇನು?

  ಉಪೇಂದ್ರ-ರವಿಚಂದ್ರನ್ ಜೋಡಿಯ ಚಿತ್ರಕ್ಕೆ ಟೈಟಲ್ ಬದಲಾವಣೆ

  'ವೇದವ್ಯಾಸ' ಬದಲಾಯ್ತು

  'ವೇದವ್ಯಾಸ' ಬದಲಾಯ್ತು

  ರವಿಚಂದ್ರನ್ ಮತ್ತು ಉಪೇಂದ್ರ ಜೋಡಿಯ ಚಿತ್ರಕ್ಕೆ ಆರಂಭದಲ್ಲಿ 'ರವಿಚಂದ್ರ' ಎಂದು ಹೆಸರಿಡಲಾಗಿತ್ತು. ಆಮೇಲೆ ಆ ಹೆಸರು ಬದಲಾಯಿಸಿ 'ವೇದವ್ಯಾಸ' ಎಂದು ಶೀರ್ಷಿಕೆ ಬದಲಾಯಿಸಿದರು. ಇದೀಗ, ಈ ಹೆಸರು ಸಹ ಬದಲಾಗಿದ್ದು, ಈಗ 'ತ್ರಿಶೂಲಂ' ಎಂದು ಟೈಟಲ್ ಫಿಕ್ಸ್ ಆಗಿದೆ.

  ಟೀಸರ್ ಬಿಡುಗಡೆ ಮಾಡಲಿದ್ದಾರೆ ರಕ್ಷಿತ್

  ಟೀಸರ್ ಬಿಡುಗಡೆ ಮಾಡಲಿದ್ದಾರೆ ರಕ್ಷಿತ್

  ಅಂದ್ಹಾಗೆ, ಉಪೇಂದ್ರ ಅವರ ಹುಟ್ಟುಹಬ್ಬದ ವಿಶೇಷವಾಗಿ 'ತ್ರಿಶೂಲಂ' ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ಇದನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಲೀಸ್ ಮಾಡುತ್ತಿದ್ದಾರೆ. ಸೆಪ್ಟೆಂಬರ್ 18 ರಂದು ಸಂಜೆ 6 ಗಂಟೆಗೆ ರಕ್ಷಿತ್ ಶೆಟ್ಟಿ ತ್ರಿಶೂಲಂ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ಮಾಡಲಿದ್ದಾರೆ.

  ತೆಲುಗು ಚಿತ್ರದ ರೀಮೇಕ್!

  ತೆಲುಗು ಚಿತ್ರದ ರೀಮೇಕ್!

  ತ್ರಿಶೂಲಂ ಸಿನಿಮಾ ತೆಲುಗಿನ ಬಲುಪು ಚಿತ್ರದ ರೀಮೇಕ್ ಎಂದು ಹೇಳಲಾಗಿದೆ. ರವಿತೇಜ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ತಂದೆಯ ಪಾತ್ರ ಮಾಡಿದ್ದರು. ಅಲ್ಲಿ ತಂದೆ-ಮಗನ ಕಥೆಯನ್ನು ಕನ್ನಡಕ್ಕೆ ಅಣ್ಣ-ತಮ್ಮನ ಕಥೆಯನ್ನಾಗಿ ಬದಲಾವಣೆ ಮಾಡಲಾಗಿದೆ. ಉಪೇಂದ್ರ ಅವರು ರವಿತೇಜರ ಪಾತ್ರಕ್ಕೆ ಹಾಗೂ ರವಿಚಂದ್ರನ್ ಸಹೋದರನ ಪಾತ್ರದಲ್ಲಿ ನಟಿಸಲಿದ್ದಾರೆ.

  'ಯಾರೆ ನೀನು ಚೆಲುವೆ' ಸಿನಿಮಾಕ್ಕೆ ಮೊದಲ ಆಯ್ಕೆ ರವಿಚಂದ್ರನ್ ಅಲ್ಲ, ಈ ನಟ

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
  ಓಂ ಪ್ರಕಾಶ್ ರಾವ್ ನಿರ್ದೇಶನ

  ಓಂ ಪ್ರಕಾಶ್ ರಾವ್ ನಿರ್ದೇಶನ

  ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಲಿದ್ದಾರೆ. ಕನಕಪುರ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಉಪೇಂದ್ರಗೆ ಜೋಡಿಯಾಗಿ ಶಾನ್ವಿ ಶ್ರೀವತ್ಸವ್ ನಟಿಸುತ್ತಿದ್ದಾರೆ. ನಿಮಿಕಾ ರತ್ನಾಕರ್ ಸಹ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ನೀಡಲಿದ್ದಾರೆ.

  English summary
  Realistar Upendra and Crazystar Ravichandran's new Movie Title Vedavyasa Changed To Trishulam; Teaser on September 18th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X