»   » 'ಐ ಲವ್ ಯೂ' ಎಂದು ಯೂ ಟರ್ನ್ ಹೊಡೆದ ಉಪೇಂದ್ರ

'ಐ ಲವ್ ಯೂ' ಎಂದು ಯೂ ಟರ್ನ್ ಹೊಡೆದ ಉಪೇಂದ್ರ

Posted By:
Subscribe to Filmibeat Kannada
ಉಪ್ಪಿ I love you ಅಂತ ಯಾರಿಗೆ ಹೇಳ್ತಿದ್ದಾರೆ ಗೊತ್ತಾ ??| Filmibeat Kannada

ನಟ ಉಪೇಂದ್ರ ಈಗ ಮತ್ತೆ ತಮ್ಮ ಫಿಲ್ಡ್ ಗೆ ಮರಳಿದ್ದಾರೆ. ಪ್ರಜಾಕೀಯ, ರಾಜಕೀಯ ಅಂತ ತಲೆ ಕಡೆದಿಕೊಂಡಿದ್ದ ಉಪ್ಪಿ ಈಗ ಮತ್ತೆ ಸಿನಿಮಾದಲ್ಲಿ ಬಿಜಿ ಆಗುತ್ತಿದ್ದಾರೆ. ಯೂ ಟರ್ನ್ ತೆಗೆದುಕೊಂಡಿರುವ ಉಪೇಂದ್ರ ಇದೀಗ ಒಂದು ಹೊಸ ಸಿನಿಮಾ ಶುರು ಮಾಡುತ್ತಿದ್ದಾರೆ.

ನಿರ್ದೇಶಕ ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾ ಬರುತ್ತಿದೆ ಎಂಬ ಸುದ್ದಿ ಕೆಲ ದಿನದಿಂದ ಹರಿದಾಡಿದು ಈಗ ಅದು ನಿಜ ಆಗಿದೆ. 'ಬ್ರಹ್ಮ' ನಂತರ ಮತ್ತೆ ಈ ಜೋಡಿ ಒಂದಾಗಿದೆ. ಚಿತ್ರಕ್ಕೆ 'ಐ ಲವ್ ಯೂ' ಎಂಬ ಹೆಸರನ್ನು ಇಡಲಾಗಿದೆ. ಇಂದು ಆ ಸಿನಿಮಾದ ಟೈಟಲ್ ಲಾಂಚ್ ಆಗಿದೆ.

upendras i love you movie poster launch

ಉಪೇಂದ್ರ 'ಐ ಲವ್ ಯೂ' ಹೇಳುವುದು ಯಾರಿಗೆ.?

ಪ್ರೀತಿ ಪ್ರೇಮ ಪುಸ್ತಕದ ಬದನೇಕಾಯಿ ಅಂತ ಹೇಳಿದ್ದ ಉಪೇಂದ್ರ ಈಗ 'ಐ ಲವ್ ಯೂ' ಎಂದು ಹೇಳಲು ಹೊರಟಿದ್ದಾರೆ. ಇನ್ನು ಈ ಸಿನಿಮಾದ ಬಗ್ಗೆ ನಿರ್ದೇಶಕ ಆರ್.ಚಂದ್ರು 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದು, ಸಿನಿಮಾದ ಮುಹೂರ್ತ ಇದೇ ತಿಂಗಳ 18ಕ್ಕೆ ಆಗಲಿದೆ ಹಾಗೂ ಇಂದು ಸಂಜೆ ಮತ್ತೊಂದು ಲುಕ್ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

upendras i love you movie poster launch

ಚಿತ್ರದ ಹೆಸರಿಗೆ ತಕ್ಕಂತೆ ಇದೊಂದು ಇಂದಿನ ಕಾಲದ ಲವ್ ಸ್ಟೋರಿ ಸಿನಿಮಾವಾಗಿದೆ. 'ಚಾರ್ ಮಿನಾರ್' ನಂತರ ಮತ್ತೆ ಚಂದ್ರ ಪಕ್ಕಾ ಪ್ರೇಮಕಥೆಯೊಂದಿಗೆ ಮರಳಿದ್ದಾರೆ.

English summary
Actor Upendra's 'I Love You' movie poster launch. Upendra and director Chandru's combination are coming back on screen after Brahma.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X