»   » 250 ಚಿತ್ರ ಮಂದಿರಗಳಲ್ಲಿ 'ಉಪ್ಪಿ 2' ಲಭ್ಯ

250 ಚಿತ್ರ ಮಂದಿರಗಳಲ್ಲಿ 'ಉಪ್ಪಿ 2' ಲಭ್ಯ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ 'ಉಪ್ಪಿ 2' ಚಿತ್ರದ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಕರ್ನಾಟಕದಾದ್ಯಂತ ಸುಮಾರು 250 ಸಿಂಗಲ್ ಸ್ಕ್ರೀನ್ ನ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಉಪ್ಪಿ 2' ಭರ್ಜರಿಯಾಗಿ ತೆರೆ ಕಾಣಲಿದೆ.

ಉಪೇಂದ್ರ ಅವರ 'ಸೂಪರ್' ಚಿತ್ರದ ನಂತರ ಇದೇ ಮೊದಲ ಬಾರಿಗೆ 250 ಚಿತ್ರಮಂದಿರಗಳಲ್ಲಿ ಬಿಗ್ಗೆಸ್ಟ್ ಓಪನಿಂಗ್ ಪಡೆದುಕೊಳ್ಳುತ್ತಿರುವ, 'ಉಪ್ಪಿ 2' ಚಿತ್ರದ ಬಗ್ಗೆ ಪ್ರೇಕ್ಷಕರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.[ರಿಯಲ್ ಸ್ಟಾರ್ 'ಉಪ್ಪಿ 2' ಗೆ ಟ್ರೈಲರೇ ಇಲ್ವಂತೆ!]


Upendra's Kannada movie 'Uppi 2' Releasing in 250 Screens

ಸಾಮಾನ್ಯವಾಗಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರ ಅಂದ್ರೆ ಅಭಿಮಾನಿಗಳಲ್ಲಿ ಸ್ವಲ್ಪ ಕುತೂಹಲ ಜಾಸ್ತಿನೇ ಇರುತ್ತೆ. ಅಷ್ಟರಮಟ್ಟಿಗೆ ಡಿಫರೆಂಟಾಗಿ ಇರುವ ಉಪೇಂದ್ರ ಚಿತ್ರಗಳು ಅಭಿಮಾನಿಗಳ ನಿರೀಕ್ಷೆಯನ್ನು ಮೀರಿರುತ್ತದೆ, ಅಂದರೂ ತಪ್ಪಾಗ್ಲಿಕ್ಕಿಲ್ಲ.


ಈಗಾಗಲೇ ಚಿತ್ರದ ಬಗ್ಗೆ ಪ್ರೇಕ್ಷಕರಿಗಿರುವ ಅಭಿಪ್ರಾಯ ನೋಡುತ್ತಿದ್ದಂತೆ 'ಉಪ್ಪಿ 2' ಬಿಡುಗಡೆಯ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ಧೂಳಿಪಟ ಮಾಡೋದು ಗ್ಯಾರಂಟಿ ಅಂತ ಗಾಂಧಿನಗರದ ಮಂದಿ ಮಾತನಾಡುತ್ತಿದ್ದಾರೆ.[ಬಿಟ್ಟಿ ಪ್ರಚಾರ ಕೊಟ್ಟ ನವರಸ ನಾಯಕ ಜಗ್ಗೇಶ್.!]


ಉಪೇಂದ್ರ ಹೋಮ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದ್ದು, ಆಗಸ್ಟ್ 14ರಂದು ಭರ್ಜರಿ ಒಪನ್ನಿಂಗ್ ಪಡೆದುಕೊಳ್ಳುತ್ತಿದೆ. 'ಉಪ್ಪಿ 2' ಬಿಡುಗಡೆಗೆ ಮೊದಲೇ ಆನ್ ಲೈನ್ ಮೂಲಕ ಟಿಕೇಟ್ ಕಾದಿರಿಸಬಹುದಾಗಿದೆ ಎಂದು ಚಿತ್ರ ವಿತರಕರು ತಿಳಿಸಿದ್ದಾರೆ.


ಈ ಮೊದಲು ಉಪೇಂದ್ರ ನಿರ್ದೇಶಿಸಿ-ನಟಿಸುತ್ತಿರುವ, 'ಉಪ್ಪಿ 2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮಿ' ಹಾಡಿನ ಮೂಲಕ ಸುಮಾರು ವಿವಾದಗಳಿಗೆ ಗುರಿಯಾಗಿದ್ದ ರಿಯಲ್ ಸ್ಟಾರ್ ತುಟಿ ಬಿಚ್ಚದೆ ಸೈಲೆಂಟ್ ಆಗಿ ಎಲ್ಲವನ್ನೂ ಮ್ಯಾನೇಜ್ ಮಾಡಿದ್ದು, ಇವರ ಸ್ಪೆಷಾಲಿಟಿಯಲ್ಲೊಂದು.[ಉಪ್ಪಿಗಿಂತ ರುಚಿ ಬೇರೆ ಇಲ್ಲ! ಯಾಕೆ ಗೊತ್ತಾ?]


ಅದೇನೇ ಇರಲಿ ಒಟ್ನಲ್ಲಿ ಉಪೇಂದ್ರ ಚಿತ್ರ ಅನ್ನುತ್ತಿದ್ದಂತೆ ಅಭಿಮಾನಿಗಳು ಅವರವರ ಯಾವುದೇ ಕೆಲಸಗಳಿದ್ದರೂ ಅದೆಲ್ಲವನ್ನೂ ಪಕ್ಕಕ್ಕೆ ಸರಿಸಿ ಚಿತ್ರಮಂದಿರಗಳಿಗೆ ದೌಡಾಯಿಸುತ್ತಾರೆ. ಅಂದಹಾಗೆ 'ಉಪ್ಪಿ 2' ಚಿತ್ರದ ತೆಲುಗು ವರ್ಷನ್ ಕೂಡ ಆಗಸ್ಟ್ 14ರಂದು ತೆರೆ ಕಾಣುತ್ತಿದ್ದು, ನಿರೀಕ್ಷೆ ಹುಟ್ಟಿಸಿದಂತೆ ಚಿತ್ರ ಪ್ರೇಕ್ಷಕರನ್ನು ಕಮಾಲ್ ಮಾಡುತ್ತಾ ಅನ್ನೋದನ್ನ ನೋಡಲು ಕೊಂಚ ಕಾಯಬೇಕಿದೆ.

English summary
Kannada actor Upendra's latest film 'Uppi 2' will be released in around 250 single screens apart from Multiplexes in Karnataka. Actor Upendra, Actress Kristina Akheeva have played lead in 'Uppi 2'. The movie is directed by Upendra. Releasing on August 14th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada