»   » ಸ್ಟಾರ್ ಡೈರೆಕ್ಟರ್ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾ!

ಸ್ಟಾರ್ ಡೈರೆಕ್ಟರ್ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾ!

Posted By:
Subscribe to Filmibeat Kannada

ಕೆಲ ದಿನಗಳ ಹಿಂದೆಯಷ್ಟೇ ನಟ ಉಪೇಂದ್ರ ಅವರ 'ಹೋಮ್ ಮಿನಿಸ್ಟರ್' ಸಿನಿಮಾ ಸೆಟ್ಟೇರಿತ್ತು. ಆದರೆ ಈಗ ಉಪೇಂದ್ರ ಅವರ ಇನ್ನೊಂದು ಸಿನಿಮಾದ ಸುದ್ದಿ ಕೇಳಿ ಬಂದಿದೆ. ವಿಶೇಷ ಅಂದರೆ ಈ ಚಿತ್ರಕ್ಕೆ ನಿರ್ದೇಶಕ ಆರ್.ಚಂದ್ರು ಆಕ್ಷನ್ ಕಟ್ ಹೇಳಲಿದ್ದಾರೆ.

'ಹೋಮ್ ಮಿನಿಸ್ಟರ್' ಟೈಟಲ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾ!

ಈ ಹಿಂದೆ ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್ ನಲ್ಲಿ 'ಬ್ರಹ್ಮ' ಸಿನಿಮಾ ಬಂದಿತ್ತು. ಇದೀಗ ನಾಲ್ಕು ವರ್ಷಗಳ ನಂತರ ಮತ್ತೆ ಉಪ್ಪಿ ಹಾಗೂ ಚಂದ್ರು ಜೋಡಿ ಒಂದಾಗಿದೆ. ಅಂದಹಾಗೆ, ಚಿತ್ರಕ್ಕೆ ಈಗಾಗಲೇ ಟೈಟಲ್ ಫಿಕ್ಸ್ ಆಗಿದ್ದು, 'ಕರಗ' ಎಂದು ಹೆಸರಿಡಲಾಗಿದೆ.

Upendra's new movie 'Karaga' will launch on August 4
Upendra Upcoming Movie | Filmibeat Kannada

ಚಿತ್ರದ ಟೈಟಲ್ 'ಕರಗ' ಅಂತ ಇರುವುದರಿಂದ ಬೆಂಗಳೂರಿನಲ್ಲಿ ನಡೆಯುವ 'ಕರಗ' ಉತ್ಸವಕ್ಕೂ ಮತ್ತು ಈ ಸಿನಿಮಾದ ಕಥೆಗೂ ಏನಾದರೂ ನಂಟು ಇದೆಯಾ? ಎಂಬ ಅನುಮಾನ ಮೂಡಿದೆ. ಉಪೇಂದ್ರ ಅವರ ಈ ಹೊಸ ಸಿನಿಮಾದ ಮುಹೂರ್ತ ಆಗಸ್ಟ್ 4ರಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ನಡೆಯಲಿದೆ.

English summary
Upendra's new movie 'Karaga' will launch on August 4. The movie will be directed by R.Chandru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada