For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಿತ್ರದಂತೆ 'ಕಬ್ಜ' ಚಿತ್ರವೂ ಡಬಲ್ ಧಮಾಕ

  |

  ಕೆಜಿಎಫ್ ಚಿತ್ರದ ಬಳಿಕ ಕನ್ನಡದಲ್ಲಿ ಅಷ್ಟು ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ಚಿತ್ರ ಕಬ್ಜ. ಏಕಂದ್ರೆ, ಈ ಸಿನಿಮಾ 100 ಕೋಟಿಗೂ ಹೆಚ್ಚು ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ಭಾರತದ ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

  ಆರ್ ಚಂದ್ರು ನಿರ್ದೇಶನದ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿದ್ದಾರೆ. 1945ರ ಕಾಲದ ಅಂಡರ್‌ವರ್ಲ್ಡ್ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಈಗಾಗಲೇ ಫೋಟೋಶೂಟ್, ಮೋಷನ್ ಪೋಸ್ಟರ್ ರಿಲೀಸ್ ಆಗಿ ಟಾಕ್ ಆಪ್ ದಿ ಟೌನ್ ಆಗಿದೆ. ಈ ನಡುವೆ ಕಬ್ಜ ಚಿತ್ರತಂಡದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ...

  'ಕಬ್ಜ' ಸಿನಿಮಾ ಎರಡು ಭಾಗ

  'ಕಬ್ಜ' ಸಿನಿಮಾ ಎರಡು ಭಾಗ

  ಬಾಹುಬಲಿ ಹಾಗೂ ಕೆಜಿಎಫ್ ಸಿನಿಮಾಗಳ ನಂತರ ಕಬ್ಜ ಸಿನಿಮಾ ಸಹ ಎರಡು ಭಾಗಗಳಲ್ಲಿ ತಯಾರಾಗಲಿದೆ ಎಂಬ ಮಾಹಿತಿ ಚಿತ್ರತಂಡ ಬಿಟ್ಟುಕೊಟ್ಟಿದೆ. ಈ ಸುದ್ದಿ ಸ್ಯಾಂಡಲ್ ವುಡ್ ಪಾಲಿಗೆ ಸರ್ಪ್ರೈಸ್ ಆಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.

  'ಕೆಜಿಎಫ್ ನೋಡಿದ್ಮೇಲೆ ಆ ನಿರ್ಧಾರಕ್ಕೆ ಬಂದಿದ್ದು'- ಆರ್ ಚಂದ್ರು'ಕೆಜಿಎಫ್ ನೋಡಿದ್ಮೇಲೆ ಆ ನಿರ್ಧಾರಕ್ಕೆ ಬಂದಿದ್ದು'- ಆರ್ ಚಂದ್ರು

  ಲಾಕ್‌ಡೌನ್ ಸಮಯದಲ್ಲಿ ಸ್ಕ್ರಿಪ್ಟ್ ಬದಲಾಯ್ತು

  ಲಾಕ್‌ಡೌನ್ ಸಮಯದಲ್ಲಿ ಸ್ಕ್ರಿಪ್ಟ್ ಬದಲಾಯ್ತು

  ಕಬ್ಜ ಸಿನಿಮಾ ಮಾಡಬೇಕೆಂದು ಆರಂಭಿಸಿದಾಗ ಒಂದೇ ಭಾಗ ಗಮನದಲ್ಲಿ ಇದ್ದಿದ್ದು. ಆದ್ರೆ, ಲಾಕ್‌ಡೌನ್ ಸಮಯದಲ್ಲಿ ಚಿತ್ರದ ಸ್ಕ್ರಿಪ್ಟ್ ಮೇಲೆ ಮತ್ತೊಂದು ಸುತ್ತು ಕೆಲಸ ನಡೆದಿದ್ದು, ಈ ವೇಳೆ ಮತ್ತೊಂದು ಭಾಗ ತಯಾರಿಸಬಹುದು ಎಂಬ ನಿರ್ಧಾರಕ್ಕೆ ಬರಲಾಗಿದೆಯಂತೆ.

  ಉಪೇಂದ್ರ ಸಹ ಗ್ರೀನ್ ಸಿಗ್ನಲ್!

  ಉಪೇಂದ್ರ ಸಹ ಗ್ರೀನ್ ಸಿಗ್ನಲ್!

  ಕಬ್ಜ ಎರಡು ಭಾಗ ತಯಾರಿಸುವ ಕುರಿತು ನಟ ಉಪೇಂದ್ರ ಅವರ ಬಳಿ ಸಹ ನಿರ್ದೇಶಕ ಆರ್ ಚಂದ್ರು ಚರ್ಚಿಸಿದ್ದು, ಉಪ್ಪಿ ಕೂಡ ಖುಷಿಯಾಗಿದ್ದಾರಂತೆ. ವಿಜೇಂದ್ರ ಪ್ರಸಾದ್ ಅವರ ಬಳಿ ಕೆಲಸ ಮಾಡುತ್ತಿದ್ದ ಬರಹಗಾರರು ಕಬ್ಜ ತಂಡದಲ್ಲಿ ಭಾಗಿಯಾಗಿದ್ದು, ಸ್ಕ್ರಿಪ್ಟ್‌ನಲ್ಲಿ ದಿ ಬೆಸ್ಟ್ ಅಂಶಗಳನ್ನು ಸೇರಿಸಲಾಗಿದೆಯಂತೆ.

  ಆರ್ ಚಂದ್ರು ಜೀವನದಲ್ಲಿ ದೊಡ್ಡ ಬಿಸಿನೆಸ್ ಮಾಡಿದ್ದು 'ಬ್ರಹ್ಮ' ಚಿತ್ರ!ಆರ್ ಚಂದ್ರು ಜೀವನದಲ್ಲಿ ದೊಡ್ಡ ಬಿಸಿನೆಸ್ ಮಾಡಿದ್ದು 'ಬ್ರಹ್ಮ' ಚಿತ್ರ!

  ಕಣ್ಣಿಲ್ಲದೆ ಅರಳಿತು ರಶ್ಮಿಕಾ ಸುಂದರ ಚಿತ್ರ | Filmibeat Kannada
  ರವಿ ಬಸ್ರೂರ್ ಸಂಗೀತ

  ರವಿ ಬಸ್ರೂರ್ ಸಂಗೀತ

  ಕೆಜಿಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕಬ್ಜ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ಅರ್ಜುನ್ ಶೆಟ್ಟಿ ಛಾಯಾಗ್ರಹಣವಿದೆ. ಎಂಟಿಬಿ ನಾಗರಾಜ್ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಇನ್ನುಳಿದಂತೆ ನಾಯಕಿಯ ಆಯ್ಕೆ ಆಗಿಲ್ಲ. ಸೆಪ್ಟೆಂಬರ್ ತಿಂಗಳಿನಿಂದ ಕಬ್ಜ ಚಿತ್ರದ ಶೂಟಿಂಗ್ ಮತ್ತೆ ಆರಂಭಿಸಿದ್ದು, ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಸಿನಿಮಾ ತಯಾರಿಸುತ್ತಿದ್ದು, ನಂತರ ಉಳಿದ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ.

  English summary
  Kannada actor Upendra starrer pan-India Kabza Movie set to release in two parts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X