twitter
    For Quick Alerts
    ALLOW NOTIFICATIONS  
    For Daily Alerts

    ಉಪ್ಪಿಯ ಈ ಐಡಿಯಾಗಳು ಜಾರಿಯಾದ್ರೆ ಭವ್ಯ ಭಾರತ ನಿರ್ಮಾಣ ಶತಸಿದ್ಧ

    By Bharath Kumar
    |

    ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಪ್ರವೇಶ ಬಹುತೇಕ ಖಚಿತವಾಗಿದೆ. ಆದ್ರೆ, ಯಾವ ಪಕ್ಷ ಸೇರುತ್ತಾರೆ ಎಂಬುದರ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಹೀಗಿರುವಾಗ, ತಮ್ಮದೇ ಹೊಸ ಪಕ್ಷ ಸ್ಥಾಪನೆ ಮಾಡುವ ಸೂಚನೆ ಕೊಟ್ಟಿದ್ದಾರೆ ಸೂಪರ್ ಹೀರೋ.

    ಇಂದು ಅಧಿಕೃತವಾಗಿ ಉಪ್ಪಿ ರಾಜಕೀಯದ ಬಗ್ಗೆ ಘೋಷಣೆ ಮಾಡಲಿದ್ದಾರೆ. ಆದ್ರೆ, ಅದಕ್ಕೂ ಮುಂಚೆ ಉಪೇಂದ್ರ ಅವರು ತಮ್ಮ ರಾಜಕೀಯ ಕಲ್ಪನೆ ಬಗ್ಗೆ ಒಂದು ಆಡಿಯೋ ಬಿಡುಗಡೆ ಮಾಡಿದ್ದು, ತಮ್ಮ ಆಲೋಚನೆ, ಉದ್ದೇಶದ ಬಗ್ಗೆ ಮಾತನಾಡಿದ್ದಾರೆ.

    ಉಪ್ಪಿ ತಲೆಯಲ್ಲಿರುವ ಈ ಐಡಿಯಾಗಳು ಜಾರಿಗೆ ಬಂದ್ರೆ ಭವಿಷ್ಯದ ಭಾರತ ಬೇರೆ ಎಲ್ಲ ರಾಷ್ಟ್ರಗಳಿಂದ ಮುಂದೆ ಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಉಪೇಂದ್ರ ಹೇಳಿರುವ ಒಂದೊಂದು ಅಂಶಗಳು ಇಂಟ್ರೆಸ್ಟಿಂಗ್ ಎನಿಸುತ್ತೆ. ಹಾಗಿದ್ರೆ, ಉಪ್ಪಿಯ ಸೂಪರ್ ಐಡಿಯಾಗಳು ಏನು ಎಂದು ಮುಂದೆ ನೋಡಿ.....

    ಸರ್ಕಾರಕ್ಕೆ, ಅಧಿಕಾರಿಗಳಿಗೆ ಕೆಲಸ ಕೊಟ್ಟಿರುವ ನಾವು

    ಸರ್ಕಾರಕ್ಕೆ, ಅಧಿಕಾರಿಗಳಿಗೆ ಕೆಲಸ ಕೊಟ್ಟಿರುವ ನಾವು

    ''ನಮ್ಮ ಕರ್ನಾಟಕದ ಬಜೆಟ್​ ಹತ್ತಿರ ಹತ್ತಿರ ಎರಡು ಲಕ್ಷ ಕೋಟಿ. ಇದೆಲ್ಲ ನಾವು ಕೊಡುತ್ತಿರುವ ಡೈರೆಕ್ಟ್, ಇನ್​​ಡೈರೆಕ್ಟ್ ಟ್ಯಾಕ್ಸ್​ ಅಂದ್ರೆ ತೆರಿಗೆ. ನೀವು ಕೆಲಸ ಕೊಟ್ಟಿರೋದು ಸಾವಿರಾರು ಜನಕ್ಕೆ. ನಿಮ್ಮ ಮನೆ ಮುಂದೆ ಸ್ವಚ್ಚ ಮಾಡುವ ಪೌರ ಕಾರ್ಮಿಕನಿಂದ ಹಿಡಿದು. ಕಾರ್ಪೋರೇಟರ್​, ಎಂಎಲ್​ಎ, ಮುಖ್ಯಮಂತ್ರಿ, ಅಧಿಕಾರಿಗಳು, ಐಎಎಸ್, ಐಪಿಎಸ್​ ಅಧಿಕಾರಿಗಳು ಎಲ್ಲರಿಗೂ ಸಂಬಳ ಕೊಡುವುದು ನೀವೇ. ನಿಮ್ಮ ತೆರಿಗೆ ಹಣದಿಂದಲೇ ಅವರ ಹೊಟ್ಟೆ ತುಂಬುತ್ತಿದೆ. ಅದರ ಅರ್ಥ ಇವರೆಲ್ಲರೂ ನಮಗೋಸ್ಕರ ಕೆಲಸ ಮಾಡುವ ಕಾರ್ಮಿಕರು'' - ಉಪೇಂದ್ರ, ನಟ

    ತುಂಬು ಪ್ರೀತಿಯಿಂದ ನಮ್ಮ ಉಪೇಂದ್ರರಿಗೊಂದು ಪತ್ರ...

    ಆದ್ರೆ, ಆಗ್ತಿರೋದು ಮಾತ್ರ ಉಲ್ಟಾ

    ಆದ್ರೆ, ಆಗ್ತಿರೋದು ಮಾತ್ರ ಉಲ್ಟಾ

    ''ಪ್ರಜಾಪ್ರಭುತ್ವದಲ್ಲಿ ಈ ಸತ್ಯ ನಿಮ್ಮ ಕಣ್ಣಿಗೆ ಕಾಣದ ಹಾಗೆ ಇರೋಕೆ ನಾವೇ ಕಾರಣ. ಬಲಿಪಶುಗಳೂ ನಾವೆ. ಹೇಗೆ ಅಂತೀರಾ.. ಈ ಲಕ್ಷಾಂತರ ಕೋಟಿ ಸಂಪಾದನೆ ಮಾಡುವ ನಾವು, ಅದನ್ನು ಸಮಾಜಕ್ಕೆ ಕೊಡೋಕೆ ಅಂತಾ ನಾಯಕರನ್ನು ಆಯ್ಕೆ ಮಾಡುತ್ತಿದ್ದೇವಲ್ಲ. ಅವರನ್ನು ನಾವು ಜಾತಿ, ಮತ, ದುಡ್ಡು, ಹೆಸರುಗಳಿಂದ ಅಳೆದು ಆಯ್ಕೆ ಮಾಡುತ್ತಿದ್ದೇವೆ. ಅದೇ ಆಗುತ್ತಿರುವ ತಪ್ಪು'' - ಉಪೇಂದ್ರ, ನಟ

    ಒಬ್ಬ ನಾಯಕನ ಆಯ್ಕೆ ಮಾಡುವಾಗ ಯೋಚನೆ ಮಾಡಲ್ಲ ಯಾಕೆ?

    ಒಬ್ಬ ನಾಯಕನ ಆಯ್ಕೆ ಮಾಡುವಾಗ ಯೋಚನೆ ಮಾಡಲ್ಲ ಯಾಕೆ?

    ''ನಮ್ಮ ಮನೆಯಲ್ಲಿ 5 ಸಾವಿರ ಕೊಟ್ಟು ಕೆಲಸಕ್ಕೆ ಇಟ್ಟುಕೊಳ್ಳುವ ಜನಗಳದ್ದೇ ತಲೆಬುಡ ಎಲ್ಲ ಚೆಕ್ ಮಾಡ್ತೀವಿ. ಅಂಥಾದ್ರಲ್ಲಿ ನಮ್ಮ ಲಕ್ಷಾಂತರ ಕೋಟಿ ದುಡ್ಡನ್ನು ಸಮಾಜಕ್ಕೆ ವಿನಿಯೋಗಿಸುವುದಕ್ಕೆ ಅಂಥಾ ನಾವು ನೇಮಿಸಿಕೊಳ್ಳುವ ಜನಪ್ರತಿನಿಧಿಗಳು, ಮಂತ್ರಿಗಳನ್ನ ಕೇವಲ ಜಾತಿ, ಮತ, ದುಡ್ಡು ಎನ್ನುವ ಎಮೋಷನ್ ಬ್ಲಾಕ್​ಮೇಲ್​ಗೆ ಒಳಗಾಗಿ ಆಯ್ಕೆ ಮಾಡ್ತೀವಿ'' - ಉಪೇಂದ್ರ, ನಟ

    ದುಡ್ಡಿನಿಂದ ಎಲ್ಲವೂ ಆಗುತ್ತಿದೆ

    ದುಡ್ಡಿನಿಂದ ಎಲ್ಲವೂ ಆಗುತ್ತಿದೆ

    ''ಅವನ ಹಿಂದೆ ದುಡ್ಡಿದ್ದರೆ ಜನ ಇರ್ತಾರೆ. ದುಡ್ಡಿದೆ, ಜನರಿದ್ದಾರೆ, ದೊಡ್ಡವನು ಎಂದು ಆಯ್ಕೆ ಮಾಡಿ ತಪ್ಪು ಮಾಡುತ್ತಿದ್ದೇವೆ. ಏನ್​ ಮಾಡೋಣ, ನಮಗೆ ಬೇರೆ ಆಯ್ಕೆಯಾದರೂ ಎಲ್ಲಿದೆ. ಇರೋ ಮೂರು ಜನರಲ್ಲಿ ಸ್ವಲ್ಪ ಬೆಟರ್​ ಅನ್ಕೊಂಡು ಅವರನ್ನು ಆರಿಸ್ತಿದ್ದೇವೆ. ಇದು ನಮ್ಮ ವಾದ. ಅದು ನಿಮಗಷ್ಟೇ ಅಲ್ಲ, ನನಗೂ ಅನ್ನಿಸಿದೆ'' - ಉಪೇಂದ್ರ, ನಟ

    ಹಾಗಾದ್ರೆ ಇದಕ್ಕೆ ಬೇರೆ ದಾರಿನೇ ಇಲ್ವಾ..?

    ಹಾಗಾದ್ರೆ ಇದಕ್ಕೆ ಬೇರೆ ದಾರಿನೇ ಇಲ್ವಾ..?

    ''ದೊಡ್ಡವರೊಬ್ಬರು ಹೇಳಿದ್ದಾರೆ, ನೀವು ಆಶಾವಾದಿಯಾಗಿದ್ದರೆ, ನಾನು ನೂರು ಐಡಿಯಾ ಕೊಡ್ತೀನಿ. ನಿರಾಶಾವಾದಿಗಳಿಗೆ ನನ್ನ ಬಳಿ ಯಾವುದೇ ಐಡಿಯಾ ಇಲ್ಲ ಎಂದಿದ್ದಾರೆ. ಆ ತರದ ಆಶಾವಾದಿಗಳಿಗೆ ನನ್ನ ಹತ್ತಿರ ಒಂದು ಐಡಿಯಾ ಇದೆ. ಏನದು?'' ಉಪೇಂದ್ರ, ನಟ

    ವ್ಯವಸ್ಥೆ ಬದಲಾಗಬೇಕು

    ವ್ಯವಸ್ಥೆ ಬದಲಾಗಬೇಕು

    ''ಬದಲಾಗಬೇಕು ವಿಧಾನಸೌಧ ನಮಗೆಲ್ಲಾ ಬೇರೆ ಕೆಲಸ ಇದೆ ಅಂತಾನೇ ನಿಮ್ಮನ್ನು ಆಯ್ಕೆ ಮಾಡಿದ್ದೇವೆ. ನಿಮಗೆ ಅದಕ್ಕೋಸ್ಕರ ಸಂಬಳ ಕೊಡುತ್ತಿದ್ದೇವೆ. ನಿಮ್ಮ ಹತ್ತಿರ ಬರಲ್ಲ. ನೀವೇ ಏನೇನು ಕೆಲಸ ಮಾಡ್ತೀರೊ, ಅದೆಲ್ಲವನ್ನೂ ಜನರಿಗೆ ನೀವೇ ತಲುಪಿಸಿ. ಟಿವಿ ಚಾನೆಲ್​ಗಳಿವೆಯಲ್ಲ. ಒಂದು ಟಿವಿ ಚಾನೆಲ್ ಹೇಗೆ ಇಡೀ ಕರ್ನಾಟಕಕ್ಕೆ ಆಡಿಯೋ, ವಿಡಿಯೋ ಮೂಲಕ ಸುದ್ದಿ ಕೊಡ್ತಾರೋ, ಹಾಗೆ ಜನಪ್ರತಿನಿಧಿಗಳು ತಮ್ಮ ಕೆಲಸವನ್ನು ಜನರಿಗೆ ತಿಳಿಸಬೇಕು'' ಉಪೇಂದ್ರ, ನಟ

    ಉಪ್ಪಿ ರಾಜಕೀಯ ಎಂಟ್ರಿ ಬಗ್ಗೆ ಪ್ರಿಯಾಂಕಾ ಉಪೇಂದ್ರ ಏನಂದ್ರು?ಉಪ್ಪಿ ರಾಜಕೀಯ ಎಂಟ್ರಿ ಬಗ್ಗೆ ಪ್ರಿಯಾಂಕಾ ಉಪೇಂದ್ರ ಏನಂದ್ರು?

    ಸಚಿವರನ್ನ ಆಯ್ಕಗೆ ಪರೀಕ್ಷೆ ನಡೆಯಲಿ

    ಸಚಿವರನ್ನ ಆಯ್ಕಗೆ ಪರೀಕ್ಷೆ ನಡೆಯಲಿ

    ''ಸಚಿವರನ್ನು ಆಯ್ಕೆ ಮಾಡುವಾಗ, ನಾವು ಪರೀಕ್ಷೆ ನಡೆಸಿ ಆಯ್ಕೆಯಾದ ಎಂಎಲ್​ಎಗಳಲ್ಲಿ ಯಾರಿಗೆ ಯಾವ ವಿಚಾರದಲ್ಲಿ ಜ್ಞಾನವಿದೆ ಎಂದು ಪರಿಶೀಲಿಸಿ, ಅವರ ಜ್ಞಾನಕ್ಕೆ ತಕ್ಕಂತೆ ಇಲಾಖೆ ಹಂಚಬೇಕು. ಅಂತಾರಾಜ್ಯ ವಿವಾದಗಳನ್ನು ಪ್ರಧಾನಿ ನೇತೃತ್ವದಲ್ಲಿ ಕುಳಿತು ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು'' - ಉಪೇಂದ್ರ, ನಟ

    ದುಡ್ಡು ಪಡೆದರೆ ಕನಸು ನೆಗೆದು ಬಿದ್ದ ಹಾಗೆ

    ದುಡ್ಡು ಪಡೆದರೆ ಕನಸು ನೆಗೆದು ಬಿದ್ದ ಹಾಗೆ

    ''ಸಮಸ್ಯೆ ಎಲ್ಲಿದೆಯೋ, ಪರಿಹಾರವೂ ಅಲ್ಲಿಯೇ ಇದೆ. ನಾವು ದುಡ್ಡಿಲ್ಲದೆ ಎಲೆಕ್ಷನ್​ ಗೆಲ್ಲೋಕೆ ಆಗಲ್ಲ. ಅದಕ್ಕೇನು ಮಾಡೋದು. ದುಡ್ಡು ಬೇಕು. ಪಾರ್ಟಿ ಫಂಡ್​ ಬೇಕು. ಅದಕ್ಕೆ ಜನ ಬೇಕು. ಎಲ್ಲರ ಹತ್ತಿರ ದುಡ್ಡು ಕಲೆಕ್ಟ್​ ಮಾಡ್ತೀವಿ. ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಪಾರ್ಟಿ ಫಂಡ್​ನಲ್ಲಿ ಇಡ್ತೀವಿ. ಆಗ ಏನಾಗುತ್ತೆ. ನಮ್ಮ ಒಂದಿಷ್ಟು ಜನ ದುಡ್ಡು ಹಾಕಿರೋರು ಬರ್ತಾರೆ. ಇಲ್ಲಿಂದಲೇ ಭ್ರಷ್ಟಾಚಾರ ಶುರು. ದುಡ್ಡು ಹಾಕಿರುವವರಿಗೆ ದುಡ್ಡು ಮಾಡೋದೇ ಮೊದಲ ಆದ್ಯತೆಯಾಗಿರುತ್ತೆ. ಅವರಿಗೆ ದುಡ್ಡು ತೆಗೆಯೋಕೆ ಜಾಗ ಕೊಡಬೇಕಾಗುತ್ತೆ. ಅಲ್ಲಿಗೆ ಕನಸು ನೆಗೆದು ಬೀಳುತ್ತೆ. ಹಾಗಾಗಿ ದುಡ್ಡೇ ಇಲ್ಲದೆ ಕೆಲಸ ಮಾಡಬೇಕು. ಹಣವನ್ನು ಕೊಡಲೂ ಬಾರದು, ಪಡೆಯಲೂ ಬಾರದು'' - ಉಪೇಂದ್ರ, ನಟ

    ಹೊಸ ಪಕ್ಷದೊಂದಿಗೆ ರಾಜಕೀಯ ರಣರಂಗಕ್ಕೆ ಎಂಟ್ರಿ ಕೊಡ್ತಾರಾ ರಿಯಲ್ ಸ್ಟಾರ್..?ಹೊಸ ಪಕ್ಷದೊಂದಿಗೆ ರಾಜಕೀಯ ರಣರಂಗಕ್ಕೆ ಎಂಟ್ರಿ ಕೊಡ್ತಾರಾ ರಿಯಲ್ ಸ್ಟಾರ್..?

    ಭವಿಷ್ಯ ಭಾರತಕ್ಕಾಗಿ ನನ್ನ ಜೊತೆ ಕೈ ಜೋಡಿಸಿ

    ಭವಿಷ್ಯ ಭಾರತಕ್ಕಾಗಿ ನನ್ನ ಜೊತೆ ಕೈ ಜೋಡಿಸಿ

    ''ನನ್ನನ್ನು ನಂಬಿ. ಸತ್ಯವೇ ಗೆಲ್ಲಬೇಕು. ಪಾರ್ಟಿ ಫಂಡ್ ಎನ್ನುವ ಪದವನ್ನೇ ಕಿತ್ತು ಹಾಕೋಣ. ರಾಜಕೀಯ ಬೇಡ. ಪ್ರಜಾಕೀಯ ಬೇಕು. ದುಡ್ಡು ಹಾಕದೇ ಗೆಲ್ಲಬಹುದು. ಹಾಗೆ ಗೆಲ್ಲಬೇಕು. ನಾನು ದುಡ್ಡೇ ಇಲ್ಲದ ಪಕ್ಷ ಕಟ್ಟುತ್ತೇನೆ. ಇದು ನಾನು ತೆಗೆದುಕೊಳ್ತಿರುವ ಚಾಲೆಂಜ್. ಪ್ರಚಾರವಿಲ್ಲದ ಪಾರ್ಟಿ ನಂದು. ಜಾತಿ, ಧರ್ಮ ಇಲ್ಲ. ಸತ್ಯದಿಂದ ನಿಮ್ಮನ್ನು ತಲುಪುತ್ತೇವೆ. ಗೆಲ್ಲಲೇಬೇಕೆಂಬ ಛಲ ಇಲ್ಲ. ನಾನು ಪ್ರಯತ್ನ ಮಾಡೋಕೆ ಹೊರಟಿರುವೆ ಕೈಜೋಡಿಸಿ'' - ಉಪೇಂದ್ರ, ನಟ

    'ಪ್ರಜಾಕೀಯ'ದ ಬಗ್ಗೆ ಉಪೇಂದ್ರ ಮಾತನಾಡಿರುವ ಎಕ್ಸ್ ಕ್ಲೂಸಿವ್ ಆಡಿಯೋ ಇಲ್ಲಿದೆ'ಪ್ರಜಾಕೀಯ'ದ ಬಗ್ಗೆ ಉಪೇಂದ್ರ ಮಾತನಾಡಿರುವ ಎಕ್ಸ್ ಕ್ಲೂಸಿವ್ ಆಡಿಯೋ ಇಲ್ಲಿದೆ

    English summary
    Kannada Actor Real Star Upendra speaks about 'Prajakeeya'
    Saturday, August 12, 2017, 10:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X